ಪತ್ನಿಯ ತಲೆ ಕಡಿದು ಪೊಲೀಸ್ ಠಾಣೆಗೆ ಕೊಂಡೊಯ್ದ ಪತಿ
ಹೈದರಾಬಾದ್ : ಪತಿಯೊಬ್ಬ ತನ್ನ ಪತ್ನಿಯ ತಲೆ ಕಡೆದು , ಶಿರದ ಜೊತೆಗೆ ಪೊಲೀಸ್ ಠಾಣೆಗೆ ತೆರಳಿ , ಪೊಲೀಸರಿಗೆ ಶಾಕ್ ನೀಡಿರುವ ಘಟನೆ ಹೈದ್ರಾಬಾದ್ ನಲ್ಲಿ ನಡೆದಿದೆ..
ಹೆಂಡತಿಯನ್ನ ಕೊಂದು ಆಕೆಯ ತಲೆಯೊಂದಿಗೆ ತೆರಳಿ ಪೊಲೀಸರಿಗೆ ಶರಣಾಗಿದ್ಧಾನೆ.. ಹೈದರಾಬಾದ್ನ ರಾಜೇಂದ್ರನಗರದ ಎಂಎಂ ಪಹಾಡಿಯಲ್ಲಿ ಇಂತಹದೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ..
ಮೃತಳನ್ನ ಸಮ್ರೀನ್ ಎಂದು ಗುರುತಿಸಲಾಗಿದೆ.. ಆರೋಪಿ ಪತಿ ಪರ್ವೇಜ್ ಹಾಗೂ ಪತ್ನಿ ಸಮ್ರೀತ್ ನಡುವೆ ಉತ್ತಮ ಸಂಬಂಧವಿರಲಿಲ್ಲ.. ಆಗಾಗ ಕಿತ್ತಾಟಗಳು ನಡೆತಯುತ್ತಲೇ ಇತ್ತು. ಅಲ್ಲದೇ ಡಿವೋರ್ಸ್ ಕೂಡ ಆಗಿತ್ತು..
ಆದ್ರೂ ಪರ್ವೇಜ್ ಒತ್ತಾಯದ ನಂತರ ಮತ್ತೆ ಗಂಡ ಹೆಂಡತಿ ಸಮಜಾಯಿಸಿ ಮಾಡಿಕೊಂಡು ಒಂದು ವರ್ಷದಿಂದ ಒಟ್ಟಾಗಿ ಇದ್ರು ಎನ್ನಲಾಗಿದೆ.. ಆದ್ರೂ ಗಲಾಟೆಗಳು ಆಗುತ್ತಲೇ ಇದ್ದು, ಅದು ಅತಿರೇಕಕ್ಕೆ ತಲುಪಿದಾಗ ಪರ್ವೇಜ್ ಸಮ್ರೀತ್ ಕೊಲೆ ಮಾಡಿದ್ದಾನೆ.