ಬಿಸಿಸಿಐ ವಿರುದ್ದ ಕಿಡಿಕಾರಿದ ವಿರಾಟ್ ಕೊಹ್ಲಿ ಫ್ಯಾನ್ಸ್….
ವಿರಾಟ್ ಕೋಹ್ಲಿ ಅವರನ್ನ ನಡೆಸಿಕೊಂಡ ಬಗ್ಗೆ ಬಿ ಸಿ ಸಿ ಐ ವಿರುದ್ದ ಕಿಂಗ್ ಕೋಹ್ಲಿ ಅಭಿಮಾನಿಗಳು ಗರಂ ಆಗಿದ್ದಾರೆ, ವಿರಾಟ್ ಅವರನ್ನ ನಾಯಕತ್ವದಿಂದ ವಜಾ ಮಾಡಿದ್ದಕ್ಕಿಂತ ಹೆಚ್ಚಾಗಿ ಅವರಿಗೆ ಸಿಗಾಬೇಕಾದ ಗೌರವವನ್ನ ನೀಡಲಿಲ್ಲ ಎಂದು ಬಿಸಿಸಿಐ ವಿರುದ್ದ ಅಭಿಮಾನಿಗಳು ಕಿಡಿ ಕಾರಿದ್ದಾರೆ. ವಿರಾಟ್ ಅವರಿಗೆ ನಾಯಕತ್ವದಿಂದ ಗೌರವಪೂರ್ಣ ಬೀಳ್ಕೊಡುಗೆ ನೀಡಬೇಕಿತ್ತು ಎಂಬುದು ಅಭಿಮಾನಿಗಳ ಅಭಿಮತ.
ಬುಧವಾರ ಸಂಜೆ ಬಿಸಿಸಿಐ ವಿರಾಟ್ ಕೋಹ್ಲಿಯರನ್ನ ನಾಯಕತ್ವ ಹುದ್ದೆಯಿಂದ ವಜಾ ಮಾಡಿ ಆಜಾಗಕ್ಕೆ ರೋಹಿತ್ ಶರ್ಮ ಅವರನ್ನ ಕ್ಯಾಪ್ಟನ್ ಮಾಡಲಾಯಿತು. ವಿರಾಟ್ ಟಿ 20 ವಿಶ್ವಕಪ್ ನಂತರ ಚುಟುಕು ಕ್ರಿಕೆಟ್ ನಾಯಕತ್ವದಿಂದ ದೂರ ಸರಿದಿದ್ದರು ಬಿಸಿಸಿಐ ನಾಯಕತ್ವ ಹುದ್ದೆ ತೊರೆಯದಂತೆ ಕೇಳಿಕೊಂಡಿತು. ಆದರೆ ಕೊಹ್ಲಿ ಇದನ್ನ ಒಪ್ಪದೆ ಕ್ಯಾಪ್ಟನ್ಸಿಯಿಂದ ಕೆಳಗಿಳಿದಿದ್ದರು.
ವೈಟ್ ಬಾಲ್ ಕ್ರಿಕೆಟ್ ಇಬ್ಬರು ನಾಯಕರಿರುವುದು ಆಯ್ಕೆ ಸಮಿತಿಗೆ ಸರಿತೋರಲಿಲ್ಲ, ಹಾಗಾಗಿ ಏಕದಿನ ನಾಯಕತ್ವ ದಿಂದ ಕೆಳಗಿಳಿಯುವಂತೆ ಕೊಹ್ಲಿ ಗೆ 48 ಗಂಟೆಗಳ ಗಡುವು ನೀಡಲಾಗಿತ್ತು. ಕೊಹ್ಲಿ ಮುಂಬರುವ ಏಕದಿನ ವಿಶ್ವಕಪ್ ಗೆ ತಂಡವನ್ನ ಮುನ್ನಡೆಸಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದರು ಹಾಗಾಗಿ ಹುದ್ದೆಯಿಂದ ಕೆಳಗಿಳಿಯುವ ಯಾವುದೇ ಮುನ್ಸೂಚನೆ ನೀಡಲಿಲ್ಲ. ಈಗಾಗಿ ಬಿಸಿಸಿಐ ದೈರ್ಯ ಮಾಡಿ ಕೊಹ್ಲಿಯನ್ನ ಕೆಳಗಿಳಿಸಿತು. ಇದನ್ನ ಸ್ವತಃ ಬಿಸಿಸಿಐ ಛೇರ್ಮನ್ ಸೌರವ್ ಗಂಗೂಲಿ ತಿಳಿಸಿದರು. ಆದರೆ ಇದು ಕೊಹ್ಲಿ ಅಭಿಮಾನಿಗಳನ್ನ ಕೆರಳಿಸಿದೆ, ಸೋಶಿಯಲ್ ಮೀಡಿಯಾಗಳಲ್ಲಿ ಬಿಸಿಸಿಐ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ.








