ಮದುವೆಗೆ ಒತ್ತಾಯಿಸಿದಕ್ಕೆ ಪ್ರೇಯಸಿಯನ್ನೇ ಕೊಂದ ಪ್ರಿಯಕರ
ಉತ್ತರಪ್ರದೇಶ : ಪ್ರೇಯಸಿಯು ಮದುವೆಗೆ ಬಹಳ ಒತ್ತಾಯ ಮಾಡುತ್ತಿದ್ದ ಕಾರಣಕ್ಕೆ ಆಕೆಯನ್ನ ಪ್ರಿಯಕರನೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಮಿರತ್‌ನಲ್ಲಿ ನಡೆದಿದೆ. ಸೈಫ್‌ಪುರ ಗ್ರಾಮದ ನಿವಾಸಿಯಾಗಿದ್ದ 22 ವರ್ಷದ ಯುವತಿ ಕಾಂಚನಾ ಶರ್ಮಾಳನ್ನ ಆಕೆಯ ಪ್ರಿಯಕರ ರೋಹಿತ್ ಹತ್ಯಗೈದಿದ್ದಾನೆ.. ಕಾಂಚನಾ ಬಿಎ ವಿದ್ಯಾರ್ಥಿನಿಯಾಗಿದ್ದು, ಹಸ್ತಿನಾಪುರದಲ್ಲಿ ಮೂರು ತಿಂಗಳ ಹಿಂದೆ ಅಲ್ಲಿ ಅವಳು ಪ್ರಾವಿಷನ್ ಸ್ಟೋರ್ ಮಾಲೀಕನಾಗಿದ್ದ ರೋಹಿತ್ ನನ್ನು ಭೇಟಿಯಾಗಿದ್ದಳು. ಈ ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿತ್ತು.
ಹಾಡು ಹಾಡಿದಕ್ಕೆ ವ್ಯಕ್ತಿಯನ್ನ ಕೊಂದ ಕಿಡಿಗೇಡಿ
ಬಳಿಕ ಕಾಂಚನಾ ತನ್ನನ್ನು ಮದುವೆಯಾಗುವಂತೆ ರೋಹಿತ್ ಗೆ ಒತ್ತಡ ಹೇರುತ್ತಿದ್ದಳು. ಅಂತೆಯೇ ಡಿಸೆಂಬರ್ 6ರಂದು ಸಹ ಕಾಂಚನಾ ರೋಹಿತ್‌ಗೆ ಕರೆ ಮಾಡಿ, ತನ್ನನ್ನ ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಇದ್ರಿಂದ ಸಿಟ್ಟಾಗಿದ್ದ ಆರೋಪಿ ಆಕೆಯನ್ನ ಭೇಟಿಯಾಗುವ ನೆಪದಲ್ಲಿ ಕರೆಸಿಕೊಂಡಿದ್ದಾನೆ.. ಅವಳನ್ನು ಕಾರಿನಲ್ಲಿ ಕಾಡಿಗೆ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿ ಸ್ನೇಹಿತರ ಸಹಾಯದಿಂದ ಆಕೆಯನ್ನ ನದಿಗೆ ಎಸೆದಿದ್ದಾನೆ.
ಕಾಂಚನಾ ತಂದೆ ಹಸ್ತಿನಾಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು.. ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ನಂತರ ರೋಹಿತ್ ಮತ್ತು ಆತನ ಇಬ್ಬರು ಸ್ನೇಹಿತರನ್ನು ಬಂಧಿಸಿದ್ದಾರೆ. ರೋಹಿತ್ ಪ್ರಮುಖ ಆರೋಪಿಯಾಗಿದ್ದು, ರಾಹುಲ್ ಮತ್ತು ಸೌರಭ್ ಕೊಲೆಗೆ ಸಹಾಯ ಮಾಡಿದ್ದಾರೆ. ಮಹಿಳೆಯನ್ನು ಕೊಂದು ಶವವನ್ನು ಗಂಗಾ ನದಿಯಲ್ಲಿ ಎಸೆಯಲು ಸೌರಭ್ ಗೆ ಅವನ ಸ್ನೇಹಿತರು ಸಹಾಯ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಆರೋಪಿಗಳು ಮಹಿಳೆಯನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ..








