ಮುಂಬೈ ಹೈಕೋರ್ಟ್ ಗೆ ಹೊಸ ಮನವಿ ಮಾಡಿದ ಆರ್ಯನ್
ಡ್ರಗ್ಸ್ ಕೇಸ್ ನಲ್ಲಿ ಸಿಲುಕಿ ಜೈಲಿನಲ್ಲಿ ಕಂಬಿ ಎಣಿಸಿ ಇದೀಗ ಜಾಮೀನ ಮೇಲೆ ಹೊರ ಬಂದಿರುವ ಬಾಲಿವುಡ್ ಬಾದ್ ಷಾ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಇದೀಗ ಬಾಂಬೆ ಹೈಕೊರ್ಟ್ ಗೆ ಮನವಿಯೊಂದನ್ನ ಮಾಡಿದ್ದಾರೆ.. ಡ್ರಗ್ಸ್ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್, ಆರ್ಯನ್ ಖಾನ್‌ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಆ ಷರತ್ತುಗಳ ಅನ್ವಯಪ್ರತಿ ಶುಕ್ರವಾರ ಮುಂಬೈನ ಎನ್‌ಸಿಬಿ ಕಚೇರಿಗೆ ಆಗಮಿಸಿ ಹಾಜರಿ ಹಾಕಬೇಕಾಗಿತ್ತು. ಅದರಂತೆಯೇ ಅಕ್ಟೋಬರ್ 28 ರಿಂದ ಈ ವರೆಗೆ ಪ್ರತಿ ವಾರದ ಶುಕ್ರವಾರದಂದು ಎನ್‌ಸಿಬಿ ಕಚೇರಿಗೆ ತೆರಳಿ ಹಾಜರಿ ಹಾಕುತ್ತಿದ್ದಾರೆ. ಆದರೆ ಈ ಷರತ್ತಿನಿಂದ ಬಿಡುಗಡೆ ನೀಡುವಂತೆ ಇದೀಗ ಆರ್ಯನ್, ಬಾಂಬೆ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಆರ್ಯನ್ ಖಾನ್ ಹಾಗೂ ಇತರರು ಆರೋಪಿಗಳಾಗಿರುವ ಡ್ರಗ್ಸ್ ಪ್ರಕರಣದ ತನಿಖೆ ಈಗ ದೆಹಲಿಯ ವಿಶೇಷ ತಂಡಕ್ಕೆ ಹಸ್ತಾಂತರವಾಗಿರುವ ಕಾರಣ ಜಾಮೀನು ಅರ್ಜಿಗೆ ವಿಧಿಸಲಾಗಿರುವ ಷರತ್ತುಗಳನ್ನು ಬದಲಾಯಿಸಬೇಕು ಎಂದು ಆರ್ಯನ್ ಖಾನ್ ಹಾಗೂ ಅವರ ವಕೀಲರ ತಂಡ ಬಾಂಬೆ ಹೈಕೋರ್ಟ್‌ಗೆ ಮನವಿ ಮಾಡಿದೆ. ಪ್ರತಿ ವಾರ ಕಚೇರಿಗೆ ಹೋಗಿ ಹಾಜರಿ ಹಾಕುವ ಷರತ್ತಿನಿಂದ ಬಿಡುಗಡೆ ಕೋರಲಾಗಿದೆ. ಪ್ರತಿ ವಾರ ಆರ್ಯನ್ ಖಾನ್ ಎನ್‌ಸಿಬಿ ಕಚೇರಿಗೆ ಹೋಗುವಾಗ ಅತಿಯಾದ ಮಾಧ್ಯಮಗಳ ಹಾಜರಿ, ಬಿಗಿ ಪೊಲೀಸ್ ಭದ್ರತೆಗಳಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಆರೋಪಿಗೂ ಇದು ಸಮಸ್ಯೆ ತರುತ್ತಿದೆ. ಹಾಗಾಗಿ ವಾರದ ಹಾಜರಿಯಿಂದ ವಿನಾಯಿತಿ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ಅಕ್ಟೋಬರ್ 02ರಂದು ರಾತ್ರಿ ಮುಂಬೈನ ಕ್ರೂಡೆಲಿಯಾ ಕ್ರೂಸ್ ನಲ್ಲಿ ಪಾರ್ಟಿಗೆ ಹಾಜರಾಗಲಿದ್ದ ಆರ್ಯನ್ ಖಾನ್ ಅನ್ನು ಎನ್‌ಸಿಬಿ ತಂಡವು ವಶಕ್ಕೆ ಪಡೆದಿತ್ತು. ಈ ಪ್ರಕರಣ ದಿನೇ ದಿನೇ ತೀವ್ರತೆ ಪಡೆದುಕೊಳ್ತಾ ಹೋಗಿತ್ತು.. ಅಲ್ಲದೇ ಆರ್ಯನ್ ಖಾನ್ ಅನ್ನು ಬಂಧಿಸಿದ್ದ ಸಮೀರ್ ವಾಂಖೆಡೆ ವಿರುದ್ಧವೇ ತನಿಖೆ ನಡೆಯುವ ಹಂತಕ್ಕೆ ತಲುಪಿದೆ. ಪ್ರಕರಣದಲ್ಲಿ ಎನ್‌ಸಿಬಿ ವಿರುದ್ಧವೇ ಆರೋಪಗಳು ಬಂದ ಬಳಿಕ ಎನ್‌ಸಿಬಿ ಕೇಂದ್ರ ಕಚೇರಿಯು ಹೊಸ ವಿಶೇಷ ತಂಡವೊಂದನ್ನು ರಚನೆ ಮಾಡಿ ತನಿಖೆ ನಡೆಸಿದೆ. ಆರ್ಯನ್ ಖಾನ್ ಪ್ರಕರಣದಿಂದ ಸಮೀರ್ ವಾಂಖೆಡೆಯನ್ನು ತೆಗೆದು ಹಾಕಲಾಗಿದ್ದು, ಆ ಸ್ಥಾನಕ್ಕೆ ಬೇರೆಯವರನ್ನು ನೇಮಿಸಲಾಗಿದೆ. ಈ ನಡುವೆ ಜಾಮೀನಿ ಮೇಲೆ ಹೊರ ಬಂದಿರುವ ಆರ್ಯನ್ ಖಾನ್ ಶುಕ್ರವಾರದ ಹಾಜರಿ ಷರತ್ತಿನಿಂದ ಮುಕ್ತವಾಗುವ ಪ್ರಯತ್ನದಲ್ಲಿದ್ದಾರೆ..