ಡಿ ಬಾಸ್ ಹಳೆಯ ಫೋಟೋ ವೈರಲ್ : ನಾಟಕದ ಪಾತ್ರದಲ್ಲಿ ದರ್ಶನ್
ಇಂದು ಕರುನಾಡ ‘ದಾಸ’ ಆಗಿ , ಅಭಿಮಾನಿಗಳ ಡಿ ಬಾಸ್ ಆಗಿ , ಕರ್ನಾಟಕದ ಟಾಪ್ ಸ್ಟಾರ್ ನಟರ ಪೈಕಿ ಒಬ್ಬರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಿನಿಮಾರಂಗಕ್ಕೆ ಎಂಟ್ರಿಯಾಗ್ತಿದ್ದಂತೆ ಹೀರೋ ಆದವರಲ್ಲ.. ಬದಲಾಗಿ 1997 ರಲ್ಲಿ ಕನ್ನಡ ಚಲನಚಿತ್ರ ರಂಗದಲ್ಲಿ ಲೈಟ್ ಬಾಯ್, ಕ್ಯಾಮರಾ ಅಸಿಸ್ಟೆಂಟ್ ನಿಂದ ಕೆರಿಯರ್ ಆರಂಭಿಸಿ ಚಾಲೆಂಜಿಂಗ್ ಸ್ಟಾರ್ ಆಗಿ ಅವರು ಮುಂಚೆ ನಾಟಕಗಳಲ್ಲಿ ಮಾಡಿ ನಂತರ ಕೆಲ ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರ ಮಾಡಿ ಆನಂತರದಲ್ಲಿ ಅವರು 2002ರಲ್ಲಿ ಮೆಜೆಸ್ಟಿಕ್ ಸಿನಿಮಾ ಮೂಲಕ ಹೀರೋ ಆಗಿ ಚಂದನವನಕ್ಕೆ ಪರಿಚಯ ಆದ್ರೂ.. ಅಲ್ಲಿಂದಲೇ ‘ಕೆಂಚ’ನ ಎರಾ ಶುರುವಾಗಿದ್ದು.. ಅಲ್ಲಿಂದ ಯಶಸ್ಸಿನ ಹಾದಿಯಲ್ಲೇ ಸಾಗಿ ಬಂದ ದಚ್ಚು ಇಂದು ಕರ್ನಾಟಕದ ಜನರ ಹೃದಯದಲ್ಲಿ ವಿರಾಜಮಾನರಾಗಿದ್ದಾರೆ.. ಲಕ್ಷಾಂತರ ಅಭಿಮಾನಿಗಳನ್ನ ಹೊಂದಿದ್ದಾರೆ..
ಅರಿಶಿಣ ಶಾಸ್ತ್ರದ ಫೋಟೋ ಹಂಚಿಕೊಂಡ ಕತ್ರಿನಾ ಕೈಫ್
ಆದ್ರೆ ದರ್ಶನ್ ಅವರ ತುಂಬಾ ಹಳೆಯ ಫೊಟೋವೊಂದು ಅಂದ್ರೆ ಅವರ ನಾಟಕದ ಫೊಟೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗತೊಡಗಿದೆ.. ದರ್ಶನ್ ಅವರ ಅಷ್ಟು ಹಳೆಯ ಫೋಟೋ ನೋಡಿ ಅಭಿಮಾನಿಗಳಂತೂ ಫುಲ್ ಖುಷ್ ಆಗಿದ್ದಾರೆ.. ಈ ವೈರಲ್ ಪೋಟೋದಲ್ಲಿ ದರ್ಶನ್ ಹುಡುಗಿಯೊಬ್ಬರ ಕೈ ಹಿಡಿದು ಕುಳಿತಿದ್ದು ಹಿರಿಯರೊಬ್ಬರು ತಲೆಮೇಲೆ ಅಕ್ಷತೆ ಹಾಕುತ್ತಿದ್ದಾರೆ. ಮದುವೆ ದೃಶ್ಯವನ್ನು ಬಿಂಬಿಸುತ್ತಿರುವ ಈ ಪೋಟೋದಲ್ಲಿ ದರ್ಶನ್ ಅವರು ವಿಭಿನ್ನವಾಗಿಯೇ ಕಾಣಿಸಿಕೊಂಡಿದ್ದಾರೆ.. ಈ ಪೋಟೋ ಯಾವ ನಾಟಕದ್ದು, ಎಲ್ಲಿ ತೆಗೆದಿದ್ದು ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಅಂದ್ಹಾಗೆ ಲೈಟ್ ಬಾಯ್ ಆಗಿ ಸ್ಯಾಂಡಲ್ ವುಡ್ ಗೆ ಬಂದ ದರ್ಶನ್ 2002 ರಲ್ಲಿ ತೆರೆಕಂಡ ಮೆಜೆಸ್ಟಿಕ್ ಮೂಲಕ ಹೀರೋ ಆಗಿ ಕಾಣಿಸಿಕೊಂಡರು. ಸದ್ಯ ರಾಬರ್ಟ್ ಸಿನಿಮಾ ಥಿಯೇಟರ್ ಗಳಲ್ಲಿ ಅದ್ಧೂರಿಯಾಗಿ ಪ್ರದರ್ಶನ ಕಂಡು ಹಿಟ್ ಆದ ಬಳಿಕ ದರ್ಶನ್ ‘ಕ್ರಾಂತಿ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಶೈಲಜಾನಾಗ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಾಯಿದ್ದಾರೆ.. ಇದು ದರ್ಶನ್ ಅವರ 55 ನೇ ಸಿನಿಮಾ ಆಗಿದೆ.








