ನೇತ್ರದಾನದ ಮಹತ್ವ ತಿಳಿಸಿ : ಸುಧಾಕರ್ ಮನವಿ Sudhakar saaksha tv
ಬೆಂಗಳೂರು : ರಾಜ್ಯದಲ್ಲಿರುವ 21 ಮೆಡಿಕಲ್ ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಇನ್ನಷ್ಟು ಹೆಚ್ಚಿಸುವ ಯೋಜನೆ ರೂಪಿಸಿದ್ದೇವೆ. ಖಾಸಗಿ ಆಸ್ಪತ್ರೆಗಳು ದೊಡ್ಡಮಟ್ಟದಲ್ಲಿ ನೇತ್ರದಾನದ ಮಹತ್ವವನ್ನು ಸಮಾಜಕ್ಕೆ ತಿಳಿಸಿಕೊಡಬೇಕು. ಗ್ರಾಮೀಣ ಭಾಗದಲ್ಲಿ ಐ ಕ್ಯಾಂಪ್ ಗಳನ್ನು ಮಾಡಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.
ಬೆಂಗಳೂರಿನ ಇಂದಿರಾನಗರದಲ್ಲಿ ಡಾಕ್ಟರ್.ಅಗರ್ ವಾಲ್ಸ್ ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಪ್ರಜಾಪ್ರಭುತ್ವ ಹಾಗೂ ಭಾರತದ ಅಭಿವೃದ್ಧಿಯ ಹರಿಕಾರ. ಹಾಗೆಯೇ ಡಾ.ಎಂ.ಸಿ.ಮೋದಿಯವರು ಕಣ್ಣಿನ ಆಸ್ಪತ್ರೆಗಳನ್ನು ಕಟ್ಟಿಸಿ ಎಲ್ಲರಿಗೂ ದೃಷ್ಟಿ ಸಿಗಬೇಕು ಅನ್ನುವ ಕನಸು ಕಂಡಿದ್ದರು. ತನ್ನ 40 ವರ್ಷಗಳ ಸೇವೆಯಲ್ಲಿ ಹಲವು ಸರ್ಜರಿಗಳನ್ನು ಅವರು ಮಾಡಿದ್ದರು. ಲಕ್ಷಾಂತರ ಕಣ್ಣಿನ ಸಮಸ್ಯೆಗಳನ್ನು ಪರಿಹರಿಸಿದರು. ಡಾ.ಎಂ.ಸಿ.ಮೋದಿಯವರ ಸೇವೆ ಮಾದರಿ ಎಂದರು.









