ದಕ್ಷಿಣ ಕನ್ನಡ ಜಿಲ್ಲೆಗೆ ಯಾವ ಮೂಲದಿಂದ ಕೋವಿಡ್ ಬಂದಿದೆ ಎನ್ನುವುದನ್ನು ತಜ್ಞ ವೈದ್ಯರ ಸಮಿತಿ ಅಧ್ಯಯನ ನಡೆಸುತ್ತಿದ್ದು, ಇನ್ನೆರಡು ದಿನಗಳಲ್ಲಿ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಕೋವಿಡ್ ಜಿಲ್ಲೆಯಲ್ಲಿ ಪಸರಿಸಿದ ಮೂಲದ ಬಗ್ಗೆ ಕರೊನಾ ನೋಡಲ್ ಅಧಿಕಾರಿ ಪೊನ್ನುರಾಜ್, ಜಿಲ್ಲಾಧಿಕಾರಿ, ಆರೋಗ್ಯ ಇಲಾಖೆ ಪ್ರಮುಖರೊಂದಿಗೆ ಭಾನುವಾರ ಸಭೆ ನಡೆಸಿದ್ದೇನೆ, ನಾಳೆ ಜಿಲ್ಲಾ ಆರೋಗ್ಯಾಧಿಕಾರಿ ಈ ಭಾರತೀಯ ವೈದ್ಯಕೀಯ ಮಂಡಳಿಯವರೊಂದಿಗೆ ಸಭೆ ನಡೆಸುತ್ತಾರೆ, ಬಳಿಕ ಸಂಜೆ ನಾವೂ ಮತ್ತೊಮ್ಮೆ ಸಮಾಲೋಚನೆ ನಡೆಸುತ್ತೇವೆ. ಸೋಮವಾರ ಸಾಯಂಕಾಲ ಅಥವಾ ಮಂಗಳವಾರ ಸರ್ಕಾರಕ್ಕೆ ವರದಿ ಸಲ್ಲಿಸುವ ನಿರೀಕ್ಷೆ ಇದೆ ಎಂದರು.








