ಚಿತ್ರಮಂದಿರಗಳಲ್ಲಿ ಹೊಸ ಟಿಕೆಟ್ ದರ ನಿಗದಿ ಮಾಡಿದ ಆಂಧ್ರ ಸರ್ಕಾರ
ಹೈದ್ರಾಬಾದ್ : ಡಿಸೆಂಬರ್ , ಜನವರಿ 2022ರಿಂದ ಮುಂದೆ ಇನ್ನೂ ಸಾಲು ಸಾಲು ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿದೆ.. ಅದ್ರಲ್ಲಿ ಪ್ರಮುಖವಾಗಿ ಟಾಲಿವುಡ್ ನ ಅಲ್ಲು ಅರ್ಜುನ್ ಅಭಿನಯದ ಪುಷ್ಟ ಇದೇ ತಿಂಗಳ 17 ರಿಂದ ಥಿಯೇಟರ್ ಗಳಲ್ಲಿ ಅಬ್ಬರಿಸಲಿದ್ರೆ , ಮುಂದಿನ ವರ್ಷ ಅಂದ್ರೆ 2022ರ ಜನವರಿ 7 ಕ್ಕೆ ಇಡೀ ಭಾರತವೇ ಕಾಯ್ತಿರುವ ರಾಜಮೌಳಿ , ರಾಮಚರಣ್ , ಜ್ಯೂ. NTR ಕಂಆಬಿನೇಷನ್ ನ ‘RRR’ ಸಿನಿಮಾ ರಿಲೀಸ್ ಆಗಿ ಧೂಳೆಬ್ಬಿಸಲಿದೆ.. ಸಿನಿಮಾಗಳಿಗೆ ಕೋಟಿ ಕೋಟಿ ಖರ್ಚು ಮಾಡಿ ದುಪ್ಪಟ್ಟು ಲಾಭ ಪಡೆಯಲು ಕಾಯ್ತಿರುವ ನಿರ್ಮಾಕರಿಗೆ ಈ ಜಗನ್ ಮೋಹನ್ ನೇತೃತ್ವದ ಆಂಧ್ರ ಸರ್ಕಾರ ಬಿಗ್ ಶಾಕ್ ನೀಡಿದೆ..
ಹೌದು… ಆಂಧ್ರ ಪ್ರದೇಶ ಸರ್ಕಾರವು ಚಿತ್ರಮಂದಿರಗಳ ಟಿಕೆಟ್ ಬೆಲೆಯನ್ನು ಏರಿಸಬೇಕೆಂದು ಚಿರಂಜೀವಿ ನೇತೃತ್ವದಲ್ಲಿ ತೆಲುಗು ಚಿತ್ರರಂಗವು ಸಿಎಂ ಜಗನ್ ಮೋಹನ್ ರೆಡ್ಡಿಗೆ ಮನವಿ ಮಾಡಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಸ್ಪಂದಿಸಿರುವ ಜಗನ್ ಮೋಹನ್, ಟಿಕೆಟ್ ದರ ಹೆಚ್ಚಳದ ಬದಲಿಗೆ ರಾಜ್ಯದಾದ್ಯಂತ ಚಿತ್ರಮಂದಿರಗಳ ಟಿಕೆಟ್ ಅನ್ನು ರಾಜ್ಯ ಸರ್ಕಾರವೇ ಮಾರಾಟ ಮಾಡುತ್ತದೆ ಎಂದು ಆದೇಶ ನೀಡಿ ತೆಲುಗು ಚಿತ್ರರಂಗದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.. ಇನ್ನೂ ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಜಗನ್ ವಿರುದ್ಧ ಕಾರ್ಯಕ್ರಮವೊಂದರಲ್ಲಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ‘ನಾವು ಕಷ್ಟ ಪಟ್ಟು ತಗೆದ ಸಿನಿಮಾವನ್ನು ನೀನು ಹೇಗೆ ಮಾರಾಟ ಮಾಡುತ್ತೀಯ’ ಎಂದು ಪ್ರಶ್ನೆ ಮಾಡಿದ್ದರು. ಇದೀಗ ಆಂಧ್ರ ಸರ್ಕಾರವು ಹೊಸ ಟಿಕೆಟ್ ದರಗಳನ್ನು ಘೋಷಣೆ ಮಾಡಿದ್ದು, ದರಗಳ ಬಗ್ಗೆ ತೆಲುಗು ಚಿತ್ರರಂಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಖ್ಯಾತ ತಮಿಳು ನಟ ಸಿಲಂಬರಸನ್ ಸಿಂಬು ಆಸ್ಪತ್ರಗೆ ದಾಖಲು…
ಹೊಸ ಆದೇಶದಂತೆ, ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿನ ಮಲ್ಟಿಫ್ಲೆಕ್ಸ್ ಚಿತ್ರಮಂದಿರದಲ್ಲಿ ಪ್ರೀಮಿಯಂ ಟಿಕೆಟ್ ದರ 250ರೂ. ದಾಟುವಂತಿಲ್ಲ. ಡಿಲಕ್ಸ್ ವಿಭಾಗದ ದರ 150 ರೂ. ದಾಟುವಂತಿಲ್ಲ. ಎಕಾನಮಿ ಕ್ಲಾಸ್ ಟಿಕೆಟ್ 75 ರೂ. ದಾಟುವಂತಿಲ್ಲ. ಎಸಿ ಚಿತ್ರಮಂದಿರಗಳಲ್ಲಿ ಪ್ರೀಮಿಯಂ ಟಿಕೆಟ್ ದರ 100 ರೂ. ದಾಟುವಂತಿಲ್ಲ, ಡಿಲಕ್ಸ್ 60 ರೂ. ಹಾಗೂ ಎಕಾನಮಿ 40 ರೂ. ದಾಟುವಂತಿಲ್ಲ. ನಾನ್ ಎಸಿ ಚಿತ್ರಮಂದಿರಗಳಲ್ಲಿ, ಪ್ರೀಮಿಯಂ ಟಿಕೆಟ್ ದರ 60, ಡಿಲಕ್ಸ್ 40, ಎಕಾನಮಿ 20 ರೂ ಇರಬೇಕು ಎಂದು ಸೂಚಿಸಲಾಗಿದೆ. ಮುನ್ಸಿಪಾಲಿಟಿ ಪ್ರಾಂಥ್ಯದಲ್ಲಿ ಮಲ್ಟಿಫ್ಲೆಕ್ಸ್‌ಗಳ ಪ್ರೀಮಿಯಂ ಟಿಕೆಟ್ ದರ 150, ಡಿಲಕ್ಸ್ 100, ಎಕಾನಮಿ 60 ರೂಗಳನ್ನು ದಾಟುವಂತಿಲ್ಲ. ಎಸಿ ಚಿತ್ರಮಂದಿರಗಳ ಪ್ರೀಮಿಯಂ ಟಿಕೆಟ್ ದರ 70 ರೂ., ಡಿಲಕ್ಸ್ 50 ರು, ಎಕಾನಮಿ 30 ರೂ. ದಾಟುವಂತಿಲ್ಲ. ನಗರ ಪಂಚಾಯಿತಿ ವ್ಯಾಪ್ತಿಯಲ್ಲಿನ ಮಲ್ಟಿಫ್ಲೆಕ್ಸ್‌ನ ಪ್ರೀಮಿಯಂ ಟಿಕೆಟ್ ದರ 120 ರೂ, ಡಿಲಕ್ಸ್ ಟಿಕೆಟ್ ದರ 80 ರೂ, ಎಕಾನಮಿ 40 ರುಪಾಯಿ ಬೆಲೆ ದಾಟುವಂತಿಲ್ಲ.
ಎಸಿ ಹೊಂದಿದ ಚಿತ್ರಮಂದಿರಗಳಲ್ಲಿ ಪ್ರೀಮಿಯಂ ಟಿಕೆಟ್ ದರ 35 ರೂ, ಡಿಲಕ್ಸ್ 25 ರೂ, ಎಕಾನಮಿ 15 ರೂ ದಾಟುವಂತಿಲ್ಲ. ಇನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ಮಲ್ಟಿಫ್ಲೆಕ್ಸ್ ಪ್ರೀಮಿಯಂ ಟಿಕೆಟ್ ಬೆಲೆ 80 ರೂ, ಡಿಲಕ್ಸ್ 50 ರೂ, ಎಕಾನಮಿ 30 ರೂ. ಎಸಿ ಹೊಂದಿದ ಚಿತ್ರಮಂದಿರಗಳ ಪ್ರೀಮಿಯಂ ಟಿಕೆಟ್ ದರ 20 ರೂ. ಡಿಲಕ್ಸ್ 15 ರೂ, ಎಕಾನಮಿ 10 ರೂ. ಇನ್ನು ಎಸಿ ಇರದ ಚಿತ್ರಮಂದಿರಗಳ ಪ್ರೀಮಿಯಂ ಟಿಕೆಟ್ ದರ 15 ರೂ, ಡಿಲಕ್ಸ್ 10 ರೂ, ಎಕಾನಮಿ ಕ್ಲಾಸ್ ನ ಟಿಕೆಟ್ ದರ 5 ರೂ. ದಾಟುವಂತಿಲ್ಲ ಎಂಬುದನ್ನ ಆಂಧ್ರ ಸರ್ಕಾರ ಜಾರಿ ಮಾಡಿರುವ ಹೊಸ ಆದೇಶದಲ್ಲಿ ಸೂಚಿಸಲಾಗಿದೆ.. ಆಂಧ್ರ ಸರ್ಕಾರದ ನಡೆಯಿಂದ ತೆಲುಗು ಸಿನಿಮಾರಂಗದವರು ತೀವ್ರ ಸಿಟ್ಟಾಗಿದ್ದು, ಜಗನ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕ್ತಾಯಿದ್ದಾರೆ..








