ಹುಟ್ಟುಹಬ್ಬದ ಸಂಭ್ರಮದಲ್ಲಿ ತಲೈವಾ…! ರಜನಿ ಬೆಳೆದು ಬಂದ ಹಾದಿ ರೋಚಕ..!
ಚೆನ್ನೈ : ಕಾಲಿವುಡ್ ನ ಸೂಪರ್ ಸ್ಟಾರ್ ರಜನಿಕಾಂತ್ , ಅಭಿಮಾನಿಗಳ ‘ತಲೈವಾ’ ಭಾರತೀಯ ಸಿನಿಮಾರಂಗದ ‘ಕಬಾಲಿ’ಗೆ ಇಂದು ಹುಟ್ಟುಹಬ್ಬದ ಸಂಭ್ರಮ.. ರಜನಿಕಾಂತ್ ಇಂದು 71 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ರಜನಿಕಾಂತ್ ಅವರಿಗೆ ಕುಟುಂಬದವರು, ಸ್ನೇಹಿತರು,ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ..
70 ವರ್ಷ ವಯಸ್ಸಾದರೂ ಈಗಲೂ ಯಂಗ್ ಅಂಡ್ ಎನರ್ಜಿಟಿಕ್ ಆಗಿಯೇ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳು ‘ಎಂದಿರನ್’ ಗೆ ಅವರೇ ಸರಿಸಾಟಿ. ರಜನಿ ಕೇವಲ ಭಾರತದಲ್ಲಿ ಮಾತ್ರವಲ್ಲ ವಿಶ್ವಾದ್ಯಂತ ಅಭಿಮಾನಿಗಳನ್ನ ಹೊಂದಿದ್ದಾರೆ.. ಜಪಾನ್ ನಲ್ಲಂತೂ ರಜನಿಯನ್ನ ಆರಾಧ್ಯ ದೈವನಂತೆ ಕಾಣುವವರಿದ್ದಾರೆ…
ಅಂದ್ಹಾಗೆ ರಜನಿಗೆ ಅನೇಕ ಗಣ್ಯರು , ತಾರೆಯರು ವಿಶ್ ಮಾಡ್ತಿದ್ದಾರೆ.. ಅಂತೆಯೇ ಅವರ ಅಳಿಯ ಕಾಲಿವುಡ್ ನ ಖ್ಯಾತ ನಟ ಧನುಶ್ ಕೂಡ ಟ್ವೀಟ್ ಮಾಡಿದ್ದು, ‘ಹ್ಯಾಪಿ ಬರ್ತ್ ಡೇ ಮೈ ತಲೈವಾ, ಒನ್ ಅಂಡ್ ಓನ್ಲಿ ಸೂಪರ್ ಸ್ಟಾರ್ “ ಎಂದು ಬರೆದು ವಿಶ್ ಮಾಡಿದ್ದಾರೆ..
ಇತ್ತೀಚೆಗೆ ಅಷ್ಟೇ ರಜನಿಕಾಂತ್ ಅಭಿನಯದ ಅಣ್ಣಾತೆ ಸಿನಿಮಾ ಥಿಯೇಟರ್ ಗಳಲ್ಲಿ ರಿಲೀಸ್ ಆಗಿ ಧೂಳೆಬ್ಬಿಸಿದೆ.. ಅಂದ್ಹಾಗೆ ಈ ‘ಅರುಣಾಚಲಂ’ ಬೆಳೆದು ಬಂದ ಹಾದಿ ನಿಜಕ್ಕೂ ರೋಚಕ.. ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದ ರಜನಿ ಹುಟ್ಟಿದ್ದು ಡಿಸೆಂಬರ್ 12, 1950ರಲ್ಲಿ ಬೆಂಗಳೂರಿನಲ್ಲಿ…
ಇವರ ಮೂಲ ಹೆಸರು ಶಿವಾಜಿ ರಾವ್ ಗಾಯಕ್ ವಾಡ್. ಬೆಂಗಳೂರಿನ ಹನುಮಂತನಗರದಲ್ಲಿ ರಜಿನಿಕಾಂತ್ ತನ್ನ ಬಾಲ್ಯದ ಶಿಕ್ಷಣ , ಕಾಲೇಜು ವಿದ್ಯಾಭ್ಯಾಸ ಮುಗಿಸಿ ಅಲ್ಲಿಂದ ದುಡಿಯಲು ಆರಂಭಿಸಿದ್ದರು. ಕಂಡಕ್ಟರ್ ಆಗಿ ವೃತ್ತಿ ಜೀವನ ಆರಂಭಿಸಿದ ರಜಿನಿಕಾಂತ್‌ಗೆ ಸಿನಿಮಾ ಮೇಲಿನ ಅತೀವ ಪ್ರೀತಿ ಅವರನ್ನ ಸಿನಿಮಾರಂಗಕ್ಕೆ ಕರೆದೊಯ್ಯಿತು.. ಮದ್ರಾಸ್‌ನಲ್ಲಿ ಆಕ್ಟಿಂಗ್ ತರಬೇತಿಯನ್ನು ಪಡೆದುಕೊಂಡಿದ್ದರು. ಆಗ ಜನಪ್ರಿಯ ನಿರ್ದೇಶಕರಾಗಿದ್ದ ಬಾಲಚಂದರ್ ರಜಿನಿ ಅವರನ್ನು ಮೊದಲು ಚಿತ್ರರಂಗಕ್ಕೆ ಪರಿಚಯಿಸಿದವರು. ಅಲ್ಲಿಂದ ರಜನಿ ಸಿನಿಮಾ ಜರ್ನಿಯ ರೋಚಕ ಪಯಣ ಆರಂಭವಾಗಿತ್ತು..
1975ರಲ್ಲಿ ‘ಅಪೂರ್ವ ರಾಗಂಗಳ್’ ಸಿನಿಮಾ ಮೂಲಕ ಸಿನಿಮಾ ಜಗತ್ತಿಗೆ ಪಾದಾರ್ಪಣೆ ಮಾಡಿದ ‘ಮುತ್ತು’ ಮತ್ತೆ ಹಿಂದುರಿಗಿ ನೋಡಲೇ ಇಲ್ಲ..
ನಂತರ ಕನ್ನಡ , ತೆಲುಗು , ತಮಿಳು , ಹಿಂದಿ ಹೀಗೆ ಬಹುಭಾಷೆಗಳಲ್ಲಿ ನಟಿಸಿದ ರಜನಿ ಅವರು ತಮ್ಮ ವಿಭಿನ್ನ ಸ್ಟೈಲ್ ಮ್ಯಾನರಿಸಂನ ಮೂಲಕವೇ ಅಭಿಮಾನಿಗಳನ್ನ ಸಂಪಾದನೆ ಮಾಡಿದರು.. ಸಾವಿರಾರು ಜನರ ಪಾಲಿನ ಆರಾಧ್ಯ ದೈವವೂ ಆಗಿರುವ ರಜನಿಗೆ ಹುಟ್ಟು ಹಬ್ಬದ ಶುಭಾಷಯಗಳು.. ಹ್ಯಾಪಿ ಬರ್ತ್ ಡೇ ರಜನಿ ಸರ್..