ವಿರಾಟ್ ಫೋನ್ ಸ್ವಿಚ್ ಆಫ್.. ಬಾಲ್ಯದ ಕೋಚ್ ಕಳವಳ Virat saaksha tv
ವಿರಾಟ್ ಕೊಹ್ಲಿಯಿಂದ ಟೀಂ ಇಂಡಿಯಾದ ಏಕದಿನ ನಾಯಕತ್ವ ಕಿತ್ತುಕೊಂಡು ರೋಹಿತ್ ಶರ್ಮಾ ನೀಡುರುವ ಬಗ್ಗೆ ವಿರಾಟ್ ಬಾಲ್ಯದ ಕೋಚ್ ರಾಜ್ ಕುಮಾರ್ ಶರ್ಮಾ ಬೇಸರ ಹೊರಹಾಕಿದ್ದಾರೆ. ಬಿಸಿಸಿಐ ಮತ್ತು ಆಯ್ಕೆ ಸಮಿನಿ ಪಾರದರ್ಶಕವಾಗಿ ಈ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಟಿ 20 ವಿಶ್ವಕಪ್ ಬಳಿಕ ಟಿ 20 ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದರು. ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ನಾಯಕತ್ವದ ಬಗ್ಗೆ ಹೆಚ್ಚು ಗಮನ ಹರಿಸಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ವಿರಾಟ್ ತಿಳಿಸಿದ್ದರು. ಇದಾದ ಬಳಿಕ ಬಿಸಿಸಿಐ ಬಿಗ್ ಬಾಸ್ ಗಳು ರೋಹಿತ್ ಶರ್ಮಾಗೆ ಟಿ 20 ತಂಡದ ನಾಯಕತ್ವ ವಹಿಸಿದರು. ಪೂರ್ಣ ಪ್ರಮಾಣದ ನಾಯಕತ್ವ ವಹಿಸಿಕೊಂಡ ಮೊದಲ ಸರಣಿಯಲ್ಲೇ ರೋಹಿತ್ ನಾಯಕತ್ವದಲ್ಲಿ ತಂಡ ಗೆದ್ದಿದೆ. ಇದಾದ ಬಳಿಕ ಬಿಸಿಸಿಐ ಏಕದಿನ ಕ್ರಿಕೆಟ್ ತಂಡದ ನಾಯಕತ್ವದಿಂದ ವಿರಾಟ್ ಗೆ ಗೇಟ್ ಪಾಸ್ ನೀಡಿ ರೋಹಿತ್ ಗೆ ಮಣೆ ಹಾಕಿದೆ. ಇದು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ಇದೀಗ ವಿರಾಟ್ ಕೊಹ್ಲಿ ಅವರ ಬಾಲ್ಯದ ಕೋಚ್ ರಾಜ್ ಕುಮಾರ್ ಶರ್ಮಾ ಪ್ರತಿಕ್ರಿಯೆ ನೀಡಿದ್ದು, “ನಾನು ಇನ್ನೂ ವಿರಾಟ್ ಕೊಹ್ಲಿ ಜೊತೆ ಮಾತನಾಡಿಲ್ಲ. ಅವನ ಫೋನ್ ಸ್ವಿಚ್ ಆಫ್ ನಲ್ಲಿದೆ. ವಿರಾಟ್ ಸ್ವಯಂಪ್ರೇರಣೆಯಿಂದ ಟಿ20 ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದ. ತಕ್ಷಣವೇ ಏಕದಿನ ನಾಯಕತ್ವದಿಂದಲೂ ಕೆಳಗಿಳಿಯುವಂತೆ ಆಯ್ಕೆಗಾರರು ತಿಳಿಸಬಹುದಿತ್ತು. ಇಲ್ಲವಾದಲ್ಲಿ ಕೆಲ ಕಾಲ ಟಿ20, ಏಕದಿನ ಮಾದರಿಯಲ್ಲಿ ತಂಡವನ್ನು ಮುನ್ನಡೆಸು ಎಂದು ಹೇಳಬಹುದಿತ್ತು. ಇದ್ಯಾವುದು ಮಾಡದೇ ಹೀಗೆ ಏಕಾಏಕಿ ಅವರನ್ನ ನಾಯಕತ್ವದಿಂದ ಕೆಳಗಿಳಿಸೋದು ಅನ್ಯಾಯ ಎಂದು ಬೇಸರ ಹೊರಹಾಕಿದ್ದಾರೆ.
“ವಿಶ್ವಕಪ್ಗೆ ಮೊದಲು ಟಿ20 ನಾಯಕತ್ವದಿಂದ ಕೆಳಗಿಳಿಯದಂತೆ ಕೊಹ್ಲಿಯನ್ನು ಕೇಳಿಕೊಂಡಿದ್ದೆ ಎಂದು ಸೌರವ್ ಗಂಗೂಲಿ ಅವರ ಹೇಳಿಕೆಯನ್ನ ನಾನು ಓದಿದ್ದೇನೆ.ನನಗೆ ತಿಳಿದಂತೆ ಅಂತಹ ಮಾತುಗಳನ್ನ ಗಂಗೂಲಿ ಎಲ್ಲೂ ಹೇಳಿಲ್ಲ. ಆದ್ರೂ ಗಂಗೂಲಿ ಮಾತುಗಳನ್ನ ಕೇಳಿ ನನಗೆ ಅಚ್ಚರಿಯಾಗುತ್ತಿದೆ. ಏಕಾಏಕಿ ನಾಯಕತ್ವ ಬದಲಾವಣೆ ಬಗ್ಗೆ ಆಯ್ಕೆ ಸಮಿತಿ ಯಾವುದೇ ಸ್ಪಷ್ಟನೆ ನೀಡುತ್ತಿಲ್ಲ. ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಅದ್ಭುತ ಜಯಗಳನ್ನ ಸಾಧಿಸಿದೆ ಎಂದು ರಾಜ್ ಕುಮಾರ್ ಶರ್ಮಾ ತಿಳಿಸಿದ್ದಾರೆ.