ನಾಯಕನಾಗಿ ರೊಹಿತ್ ಮೊದಲ ಸಂದರ್ಶನ – ಟ್ರೋಲ್ ಗಳಿಗೆ ತಲೆಕೆಡಿಸಿಕೊಳ್ಳಲ್ಲ
ಭಾರತೀಯ ಕ್ರಿಕೆಟ್ ತಂಡದ ಏಕದಿನ ಮತ್ತು ಟಿ 20 ಕ್ರಿಕೆಟ್ ನಾಯಕನಾದ ನಂತರ ರೋಹಿತ್ ಶರ್ಮಾ ಮೊದಲ ಸಂದರ್ಶನ ನೀಡಿದ್ದಾರೆ.
ಬಿಸಿಸಿಐ ಟಿವಿಗೆ ಮಾತನಾಡಿದ ಅವರು, ‘’ದೇಶಕ್ಕಾಗಿ ಆಡುವಾಗ, ನಮ್ಮ ಮೇಲೆ ಹೆಚ್ಚಿನ ಒತ್ತಡ ಇದ್ದೇ ಇರುತ್ತದೆ. ಜನರು ನಿಮ್ಮ ಬಗ್ಗೆ ಏನಾದರೂ ಹೇಳುತ್ತಲೇ ಇರುತ್ತಾರೆ. ಕೆಲವರು ಸರಿ ಅಂತಾರೆ ಕೆಲವರು ತಪ್ಪು ಅಂತಾರೆ. ಆದರೆ ನನಗೆ ನಾಯಕನಾಗಿ ಅಲ್ಲ, ಕ್ರಿಕೆಟಿಗನಾಗಿ, ನಾನು ನನ್ನ ಕೆಲಸದ ಮೇಲೆ ಮಾತ್ರ ಗಮನ ಹರಿಸುವುದು ಮುಖ್ಯ. ಜನರು ಏನು ಹೇಳುತ್ತಾರೆಂದು ಮಾತ್ರ ಯೋಚಿಸಬೇಡಿ. ನೀವು ಎಂದಿಗೂ ಅವರನ್ನ ನಿಯಂತ್ರಿಸಲು ಸಾಧ್ಯವಿಲ್ಲ.
ರೋಹಿತ್‌ರನ್ನು ಏಕದಿನದ ನಾಯಕನನ್ನಾಗಿ ಮಾಡಿದ ನಂತರ ಸೌರವ್ ಗಂಗೂಲಿಯಿಂದ ಬಿಸಿಸಿಐವರೆಗೆ ಟ್ರೋಲ್‌ಗಳನ್ನು ಮಾಡಲಾಗುತ್ತಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ನಡುವಿನ ಸಂಬಂಧ ಚೆನ್ನಾಗಿಲ್ಲ ಎಂದು ಕೂಡ ಹೇಳಲಾಗುತ್ತಿದೆ. ಆದರೆ ODI ನಾಯಕನ ಘೋಷಣೆಗೆ ಸ್ವಲ್ಪ ಮೊದಲು, ರೋಹಿತ್ ಯೂಟ್ಯೂಬ್ ಸಂದರ್ಶನದಲ್ಲಿ ವಿರಾಟ್ ಕೊಹ್ಲಿಯನ್ನು ಹೊಗಳಿದ್ದರು ಮತ್ತು ಅವರನ್ನು ತಮ್ಮ ನಾಯಕ ಎಂದು ಕರೆದಿದ್ದರು.








