ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಅನ್ನುವುದಕ್ಕೆ ಒಂದೊಂದೇ ಉದಾಹರಣೆಗಳು ಸಿಗುತ್ತಿವೆ. Virat kohli saaksha tv
ರೋಹಿತ್ ಮತ್ತು ವಿರಾಟ್ ಕೊಹ್ಲಿ ನಡುವೆ ಭಿನ್ನಾಭಿಪ್ರಾಯ ಇತ್ತು ಅನ್ನುವ ಸುದ್ದಿ ಹಲವು ವರ್ಷಗಳಿಂದ ಇತ್ತು.
ಆದರೆ ಇಬ್ಬರು ಆಟಗಾರರು ಆ ಬಗ್ಗೆ ತುಟಿಪಿಟಕ್ ಅಂದಿರಲಿಲ್ಲ. ಆದರೆ ಈಗ ಕ್ಯಾಪ್ಟನ್ಸಿ ಶಿಫ್ಟ್ ಆದಮೇಲೆ ಭಾರತ ಕ್ರಿಕೆಟ್ ತಂಡದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಟೆಸ್ಟ್ ತಂಡವನ್ನು ಆಯ್ಕೆ ಮಾಡುವಾಗ ತೆಗೆದುಕೊಂಡ ಕೆಲವು ನಿರ್ಧಾರಗಳು ಮನಸ್ಥಾಪಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಏಕದಿನ ಕ್ರಿಕೆಟ್ ನಾಯಕಕತ್ವದಿಂದ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿ ರೋಹಿತ್ ಶರ್ಮಾಗೆ ಜವಾಬ್ದಾರಿ ನೀಡಲಾಗಿದೆ.
ಟೆಸ್ಟ್ ತಂಡದ ಉಪ ನಾಯಕನ ಪಟ್ಟವೂ ಹಿಟ್ಮ್ಯಾನ್ ವಹಿಸಿಕೊಂಡಿದ್ದಾರೆ.
ಆದರೆ, ರೋಹಿತ್ ಇಂಜುರಿಯಿಂದಾಗಿ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ನಾಯಕನಾಗಿ ಉತ್ತಮ ದಾಖಲೆ ಹೊಂದಿದ್ದರೂ ತನ್ನನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಕೊಹ್ಲಿಗೆ ಬೇಸರ ಉಂಟು ಮಾಡಿದೆ ಎಂಬ ಮಾತುಗಳು ಕೇಳಿಬರುತ್ತಿದೆ.
ಹೀಗಾಗಿ ವೈಯಕ್ತಿಕ ಕಾರಣಗಳನ್ನು ನೀಡಿ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ವಿರಾಟ್ ಕೊಹ್ಲಿ ಹೊರಗುಳಿದಿದ್ದಾರೆ.
ಈ ಹಿಂದೆ ನಾಯಕನ ಸ್ಥಾನದಿಂದ ಕೆಳಗಿಳಿಯಿರಿ ಎಂದು ಬಿಸಿಸಿಐ ಕೊಹ್ಲಿ ಅವರಿಗೆ 48 ಗಂಟೆಗಳ ಕಾಲಾವಕಾಶ ನೀಡಿತ್ತು ಎಂದು ಹೇಳಲಾಗಿತ್ತು.
ಆದರೆ ವಿರಾಟ್ ಇದಕ್ಕೆ ಪ್ರತಿಕ್ರಿಯೆ ನೀಡದ ಕಾರಣ ಮುಂದಿನ ಅವಧಿಯಲ್ಲೇ ಹೊಸ ನಾಯಕನ ಘೋಷಣೆ ಆಗಿತ್ತು.
ಇದು ಕೊಹ್ಲಿಗೆ ಬೇಸರ ತರಿಸಿದೆ ಎಂದು ಹೇಳಲಾಗಿದೆ.
ಈ ನಡುವೆ ಇದೀಗ ಆಫ್ರಿಕಾ ವಿರುದ್ಧ ಏಕದಿನ ಸರಣಿಯಿಂದ ಕೊಹ್ಲಿ ಹಿಂದೆ ಸರಿಯುವ ನಿರ್ಧಾರ ಮಾಡಿರುವುದು ಟೀಮ್ ಇಂಡಿಯಾದಲ್ಲಿ ಕ್ಯಾಪ್ಟನ್ಸಿ ಫೈಟ್ ತಂಡವನ್ನು ಇಬ್ಭಾಗ ಮಾಡಿದೆ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ ವಿರಾಟ್ ಮತ್ತು ರೋಹಿತ್ ನಡುವಿನ ಕ್ಯಾಪ್ಟನ್ಸಿ ಫೈಟ್ ಬಿಸಿಸಿಐಗೆ ನುಂಗಲಾರದ ತುತ್ತಾಗಿದೆ.