ರೋ`ಹಿಟ್ ವಿಕೆಟ್’ | ಟೆಸ್ಟ್ ತಂಡಕ್ಕೂ ರಾಹುಲ್ ವೈಸ್ ಕ್ಯಾಪ್ಟನ್..? Rahul vice-captain saaksha tv
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ರೋಹಿತ್ ಶರ್ಮಾ ಗೈರಾಗಲಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ರೋಹಿತ್ ಶರ್ಮಾ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿಯಲಿದ್ದಾರೆ. ಈ ಹಿನ್ನೆಲೆಯಲ್ಲಿ ತಂಡದ ವೈಸ್ ಕ್ಯಾಪ್ಟನ್ ಯಾರಾಗಲಿದ್ದಾರೆ ಅನ್ನೋ ಚರ್ಚೆ ಇದೀಗ ಮುನ್ನಲೆಗೆ ಬಂದಿದೆ.
ಹೌದು..! ಸತತ ವೈಫಲ್ಯ ಅನುಭವಿಸುತ್ತಿರುವ ಕಾರಣ ಅಜಿಂಕ್ಯಾ ರಹಾನೆ ಬಳಿ ಇದ್ದ ವೈಸ್ ಕ್ಯಾಪ್ಟನ್ ಪಟ್ಟವನ್ನು ಬಿಸಿಸಿಐ ರೋಹಿತ್ ಶರ್ಮಾಗೆ ವಹಿಸಿತ್ತು. ದಕ್ಷಿಣ ಆಫ್ರಿಕಾ ಟೂರ್ನಿಯಲ್ಲಿ ವಿರಾಟ್ ಗೆ ರೋಹಿತ್ ಡೆಪ್ಯೂಟಿ ಆಗಿದ್ದರು. ಆದ್ರೆ ಗಾಯದ ಸಮಸ್ಯೆಯಿಂದಾಗಿ ರೋಹಿತ್ ಇದೀಗ ಟೆಸ್ಟ್ ಸರಣಿಯಿಂದ ದೂರವಾಗಿದ್ದಾರೆ. ಹೀಗಾಗಿ ಟೀಂ ಇಂಡಿಯಾ ವೈಸ್ ಕ್ಯಾಪ್ಟನ್ ಯಾರು ಎಂಬ ಪ್ರಶ್ನೆ ಇದೀಗ ಮುನ್ನಲೆಗೆ ಬಂದಿದೆ.
ಅಂದಹಾಗೆ ಈ ವೈಸ್ ಕ್ಯಾಪ್ಟನ್ ರೇಸ್ ನಲ್ಲಿ ಟೀಂ ಇಂಡಿಯಾ ಮಾಜಿ ಉಪನಾಯಕ ಅಜಿಂಕ್ಯಾ ರಹಾನೆ, ಚೇತೇಶ್ವರ್ ಪೂಜಾರ, ಸೀನಿಯರ್ ಬೌಲರ್ ರವಿಚಂದ್ರನ್ ಅಶ್ವಿನ್ ಇದ್ದಾರೆ. ಆದ್ರೆ ಇದೀಗ ಈ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ. ಅದುವೆ ಕೆ.ಎಲ್ . ರಾಹುಲ್..!!
ಸದ್ಯ ಟಿ 20 ಕ್ರಿಕೆಟ್ ತಂಡದ ಉಪನಾಯಕರಾಗಿರುವ ಕೆ.ಎಲ್. ರಾಹುಲ್ ಅವರನ್ನು ಟೆಸ್ಟ್ ತಂಡದ ಉಪನಾಯಕರನ್ನಾಗಿ ಮಾಡಲು ಬಿಸಿಸಿಐ ಚಿಂತನೆ ನಡೆಸಿದೆಯಂತೆ. ಈ ಬಗ್ಗೆ ಬಿಸಿಸಿಐ ಮೂಲಗಳು ಸ್ಪಷ್ಟಪಡಿಸಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ವಿರಾಟ್ ಡೆಪ್ಯೂಟಿಯಾಗಿದ್ದ ರಹಾನೆ, ವಿರಾಟ್ ಗೈರಿನಲ್ಲಿ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದರು. ಆದ್ರೆ ಬ್ಯಾಟಿಂಗ್ ನಲ್ಲಿ ಪದೇ ಪದೇ ವೈಫಲ್ಯ ಅನುಭವಿಸುತ್ತಿದ್ದಾರೆ. ಹೀಗಾಗಿ ಅವರು ಆಡುವ 11ರಲ್ಲಿ ಸ್ಥಾನ ಪಡೆಯೋದೆ ಅನುಮಾನವಾಗಿದೆ.
ಇನ್ನು ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಕಥೆಯೂ ಭಿನ್ನವಾಗಿಲ್ಲ. ಹೀಗಾಗಿ ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ಟೆಸ್ಟ್ ತಂಡದ ಉಪನಾಯಕನ ಪಟ್ಟಕ್ಕೆ ಕೆ.ಎಲ್ ರಾಹುಲ್ ಬೆಸ್ಟ್ ಚಾಯ್ಸ್ ಎಂದು ಬಿಸಿಸಿಐ ಅಭಿಪ್ರಾಯಟ್ಟಿದೆಯಂತೆ.
ಇದಲ್ಲದೇ ಸದ್ಯ ತಂಡದಲ್ಲಿರುವ ಹಿರಿಯ ಸ್ಪಿನ್ನರ್ ರವಿಚಂದ್ರನ್ ಹೆಸರು ಕೂಡ ವೈಸ್ ಕ್ಯಾಪ್ಟನ್ ರೇಸ್ ನಲ್ಲಿ ಕೇಳಿಬಂದಿದೆ. ಆದ್ರೆ ವಿದೇಶಿ ಪಿಚ್ ನಲ್ಲಿ ಅಶ್ವಿನ್ ಆಡು ಹನ್ನೊಂದರಲ್ಲಿ ಸ್ಥಾನ ಪಡೆಯೋದು ದೌಟು. ಇನ್ನು ಸ್ವತಃ ವಿರಾಟ್ ಕೊಹ್ಲಿ ಕೂಡ ಈ ಹಿಂದೆ ಉಪನಾಯಕನ ವಿಚಾರವಾಗಿ ಕೆ.ಎಲ್.ರಾಹುಲ್ ಪರ ಬ್ಯಾಟ್ ಬೀಸಿದ್ದರು. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದರೇ ಕೆ.ಎಲ್ ರಾಹುಲ್ ಗೆ ಟೆಸ್ಟ್ ತಂಡದ ವೈಸ್ ಕ್ಯಾಪ್ಟನ್ ಪಟ್ಟ ಸಿಗೋದು ಪಕ್ಕಾ ಎಂದು ಅಂದಾಜಿಸಲಾಗುತ್ತಿದೆ.









