ಶಿವಸೇನೆಯಿಂದ ಬಾವುಟಕ್ಕೆ ಅವಮಾನ ಕನ್ನಡ ಹೋರಾಟಗಾರರ ಪರ ನಿಂತ ಸಿನಿ ತಾರೆಯರು….
ಕನ್ನಡ ದ್ವಜಕ್ಕೆ ಬೆಂಕಿ ಹಂಚಿದ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಮಾಡುವಂತೆ ಕನ್ನಡ ಚಿತ್ರಂಗದ ಹಲವಾರು ಚಿತ್ರ ನಟರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಬೆಳಗಾವಿ ಚಳಿಗಾಲದ ಅಧಿವೇಶನ ನಡೆಯುವ ಸಂಧರ್ಭದಲ್ಲಿ ಎಂ ಇ ಎಸ್ ಪುಂಡರು ಮಹಾಮೇಳ ಆಯೋಜಿಸಿದ್ದರು, ಮಹಾಮೇಳದ ನೇತೃತ್ವ ವಹಿಸದ್ದ ಎಂ ಇ ಎಸ್ ಮುಖಂಡ ದೀಪಕ್ ದಳವಿಗೆ ಕನ್ನಡ ಪರ ಹೋರಾಟಗಾರ ನವ ಕರ್ನಾಟಕ ನಿರ್ಮಾಣ ಸೇನೆ ಯುವ ಘಟಕದ ಜಿಲ್ಲಾ ಅಧ್ಯಕ್ಷ ಸಂಪತ್ ಕುಮಾರ್ ದೇಸಾಯಿ ನೇತೃತ್ವ ಕಾರ್ಯಕರ್ತರು ಮುಖಕ್ಕೆ ಮಸಿ ಬಳಿದಿದ್ದರು.
ಕನ್ನಡದಲ್ಲೆ ಇದ್ದುಕೊಂಡು ಕನ್ನಡಕ್ಕೆ ಅವಮಾನ ಮಾಡುವವರಿಗೆ ಹೋರಾಟಗಾರರು ತಕ್ಕ ಶಾಸ್ತ್ರೀ ಮಾಡಿದ್ದರು. ಬೆಳಗಾವಿ ಪೊಲೀಸರು ಸಂಪತ್ ಕುಮಾರ್ ದೇಸಾಯಿಯವರನ್ನ ಬಂಧಿಸಿದ್ದರು. ಈ ಘಟನೆಯನ್ನ ಮುಂದಿಟ್ಟುಕೊಂಡು ಮಹಾರಾಷ್ಟ್ರದಲ್ಲಿ ಶಿವಸೇನೆಯ ಪುಂಡರು ಕೊಲ್ಲಾಪುರದಲ್ಲಿ ಕನ್ನಡ ಭಾವುಟಕ್ಕೆ ಬೆಂಕಿ ಹಚ್ಚಿ ಅವಮಾನ ಮಾಡಿದ್ದಾರೆ.
ಇದನ್ನ ಖಂಡಿಸಿರುವ ಕನ್ನಡ ಪರ ಹೋರಾಟಗಾರರು ಮತ್ತು ಸಿನಿ ತಾರೆಯರು ಕನ್ನಡ ಬಾವುಟಕ್ಕೆ ಅವಮಾನ ಮಾಡಿದವರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ಕನ್ನಡ ಪರ ಹೋರಾಟಗಾರರನ್ನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಮತ್ತು ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಮನವಿ ಮಾಡಿದ್ದಾರೆ…








