ಜೋಶ್ ಬಟ್ಲರ್ ಸೂಪರ್ ಮ್ಯಾನ್ ಕ್ಯಾಚ್.. ವೈರಲ್ buttler saaksha tv
ಆಶಸ್ ಸರಣಿಯ ಭಾಗವಾಗಿ ಅಡಿಲೇಡ್ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿಕೆಟ್ ಕೀಪರ್ ಜೋಸ್ ಬಟ್ಲರ್ ಸೂಪರ್ ಮ್ಯಾನ್ ರೀತಿ ಕ್ಯಾಚ್ ಹಿಡಿದಿದ್ದಾರೆ. ಆ ಮೂಲಕ ಅಲ್ಲಿ ನೆರದಿದ್ದ ಅಭಿಮಾನಿಗಳನ್ನು ಬೆರಗುಗೊಳಿಸಿದ್ದಾರೆ.
ಎರಡನೇ ಟೆಸ್ಟ್ ಮ್ಯಾಚ್ ನಲ್ಲಿ ಆಸ್ಟ್ರೇಲಿಯಾ ಮೊದಲು ಬ್ಯಾಟ್ ಮಾಡಿದ್ದು, ಪಂದ್ಯದ 8ನೇ ಓವರ್‌ನಲ್ಲಿ ಸುವಾರ್ಟ್ ಬ್ರಾಡ್ ಬೌಲ್ ಮಾಡಿದ್ದು, ಇಂಗ್ಲೆಂಡ್ ಬ್ಯಾಟರ್ ಮಾರ್ಕಸ್ ಹ್ಯಾರಿಸ್ ಲೆಗ್ ಸೈಡ್ ಕಡೆಗೆ ಆಡಿದರು. ಬಾಲ್ ಎಡ್ಜ್ ಆಗಿ ಕೀಪರ್ ಗಿಂತ ದೂರ ಹೋಯಿತು.
ಇದನ್ನ ಗಮನಿಸಿದ ವಿಕೆಟ್ ಕೀಪರ್ ಜೋಸ್ ಬಟ್ಲರ್, ಸ್ಟನ್ನಿಂಗ್ ಕ್ಯಾಚ್ ಹಿಡಿದರು. ಇದರಿಂದ ಮಾರ್ಕಸ್ ಹ್ಯಾರಿಸ್ ನಿರಾಸೆಯಾಗಿ ಪೇವಿಲಿಯನ್ ಕಡೆ ಹೆಜ್ಜೆ ಹಾಕಿದರು. ಬಟ್ಲರ್ ಕ್ಯಾಚ್ ಹಿಡಿದ ರೀತಿಯನ್ನ ನೀಡಿದ ಪ್ರೇಕ್ಷಕರು ದಂಗಾದ್ರು. ಇನ್ನು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.