ಬೆಳಗಾವಿಯಲ್ಲಿ ಎಂ.ಇ.ಎಸ್ ಪುಂಡಾಟ : ಕೋಲಾರದಲ್ಲಿ ಪ್ರತಿಭಟನೆ Kolar saaksha tv
ಕೋಲಾರ : ಕುಂದಾನಗರಿಯಲ್ಲಿ ಬೆಳಗಾವಿಯಲ್ಲಿ ಎಂ.ಇ.ಎಸ್ ಪುಂಡಾಟಿಕೆಯನ್ನು ಖಂಡಿಸಿ ಕೋಲಾರದಲ್ಲಿ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗಿದೆ.
ನಗರದ ಗಾಂಧಿ ವನದಿಂದ ಕನ್ನಡ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿವೆ. ಈ ಮೆರವಣಿಗೆಯಲ್ಲಿ ಎಂ.ಇ ಎಸ್ ಪುಂಡರ ವಿರುದ್ಧ ಘೋಷಣೆಗಳನ್ನ ಕೂಗಲಾಗಿದೆ. ಇನ್ನು ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪ ಗೊಳಿಸಿದವರ ವಿರುದ್ಧ ಕ್ರಮಕ್ಕೆ ಕನ್ನಡ ಪರ ಸಂಘಟನೆಗಳು ಒತ್ತಾಯಿಸಿವೆ.
ಮೆರವಣಿಗೆ ಮೂಲಕ ನಗರ ಗಾಂಧಿ ಚೌಕಿಗೆ ಬಂದ ಪ್ರತಿಭಟನಾಕಾರರು, ರಸ್ತೆ ತಡೆದು ಮಹರಾಷ್ಟ್ರ ಮುಖ್ಯಮಂತ್ರಿ ಉದ್ಭವ್ ಠಾಕ್ರೆ ಪ್ರತಿಕೃತಿ ದಹನ ಮಾಡಿ ಆಕ್ರೋಶ ಹೊರಹಾಕಿದ್ದಾರೆ.