IPL 2022 – ಲಕ್ನೋ ಟೀಮ್ ಗೆ ಮೆಂಟರ್ ಆಗಿ ಆಯ್ಕೆಯಾದ ಗೌತಮ್ ಗಂಭೀರ್
ಭಾರತದ ತಂಡದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರನ್ನು ಐಪಿಎಲ್ ನ ಹೊಸ ಫ್ರಾಂಚೈಸಿ ಲಕ್ನೋ ಟೀಮ್ ನ ಮಾರ್ಗದರ್ಶಕರಾಗಿ ಶನಿವಾರ ನೇಮಿಸಲಾಗಿದೆ.
ಫೂರ್ವ ದೆಹಲಿ ಕ್ಷೇತ್ರದ ಲೋಕಸಭಾ ಸದಸ್ಯರಾಗಿರುವ ಗೌತಮ್ ಗಂಭೀರ್, ಐ ಪಿ ಎಲ್ ಆಡುವ ದಿನಗಳಲ್ಲಿ ಕೆಕೆಆರ್‌ಗೆ ಎರಡು ಐಪಿಎಲ್ ಚಾಂಪಿಯನ್ ಟೋಫ್ರಿಯನ್ನ ಗೆದ್ದು ಕೊಟ್ಟಿದ್ದರು.
“ತಮ್ಮ ತಂಡದಲ್ಲಿ ಈ ಅದ್ಭುತ ಅವಕಾಶವನ್ನು ನನಗೆ ಪ್ರಸ್ತುತಪಡಿಸಿದ್ದಕ್ಕಾಗಿ ಡಾ ಗೋಯೆಂಕಾ ಮತ್ತು RPSG ಗ್ರೂಪ್‌ಗೆ ತುಂಬಾ ಧನ್ಯವಾದಗಳು. ಎಂದು ಗೌತಮ್ ಗಂಭೀರ್ ಟ್ವೀಟ್ ಮಾಡಿದ್ದಾರೆ. “ಸ್ಪರ್ಧೆಯಲ್ಲಿ ಗೆಲ್ಲುವ ಬೆಂಕಿ ಇನ್ನೂ ನನ್ನೊಳಗೆ ಉರಿಯುತ್ತಿದೆ, ವಿಜೇತ ಪರಂಪರೆಯನ್ನು ಮುಂದುವರೆಸುವ ಬಯಕೆಯು 24×7 ತುಡಿಯುತ್ತಿರುತ್ತದೆ . ನಾನು ಡ್ರೆಸ್ಸಿಂಗ್ ರೂಮ್‌ಗಾಗಿಯಲ್ಲ ಆದರೆ ಉತ್ತರ ಪ್ರದೇಶದ ಆತ್ಮ ಮತ್ತು ಆತ್ಮಕ್ಕಾಗಿ ಸ್ಪರ್ಧಿಸುತ್ತೇನೆ” ಎಂದು ಗಂಭೀರ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
It’s a privilege to be in the contest again. Thanks Dr.Goenka for incl me in #LucknowIPLTeam as its mentor.The fire to win still burns bright inside me, the desire to leave a winner’s legacy still kicks me. I won’t be contesting for a dressing room but for the spirit & soul of UP
— Gautam Gambhir (@GautamGambhir) December 18, 2021
ಇನ್ನೂ ಹೆಸರಿಡದ ಲಕ್ನೋ ಫ್ರಾಂಚೈಸಿಯ ಮಾಲೀಕ ಸಂಜೀವ್ ಗೋಯೆಂಕಾ ಅವರು ಗಂಭೀರ್ ಅವರನ್ನು RPSG ಕುಟುಂಬಕ್ಕೆ ಸ್ವಾಗತಿಸಿದರು. “ಗೌತಮ್ ವೃತ್ತಿಜೀವನದಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ನಾನು ಅವರ ಕ್ರಿಕೆಟ್ ಮನಸ್ಸನ್ನು ಗೌರವಿಸುತ್ತೇನೆ ಮತ್ತು ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ” ಎಂದು ಅವರು ಹೇಳಿದರು. ಸಂಜೀವ್ ಗೋಯೆಂಕ ಟ್ವೀಟ್ ಮಾಡಿದ್ದಾರೆ.
40 ವರ್ಷ ವಯಸ್ಸಿನ ಗೌತಮ್ ಗಂಭೀರ್ ಭಾರತಕ್ಕಾಗಿ 58 ಟೆಸ್ಟ್, 147 ODI ಮತ್ತು 37 T20I ಗಳನ್ನು ಆಡಿದ್ದಾರೆ.