ಪಿಂಕ್ ಬಾಲ್ ನಲ್ಲಿ ಮಿಚಲ್ ಸ್ಟಾರ್ಕ್ ಮ್ಯಾಜಿಕ್ Michelle Stark saaksha tv
ಆಶಸ್ ಸರಣಿಯ ಭಾಗವಾಗಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಬೌಲರ್ ಮಿಚಲ್ ಸ್ಟಾರ್ಕ್ ಅದ್ಭುತ ಪ್ರದರ್ಶನ ನೀಡಿದ್ದಾರೆ.
ಆಶಸ್ ಸರಣಿಯ ಭಾಗವಾಗಿ ಅಡಿಲೇಡ್ ನಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ.
ಇದು ಪಿಂಕ್ ಬಾಲ್ ನ ಡೇ ಅಂಡ್ ನೂಟ್ ಮ್ಯಾಚ್ ಆಗಿದೆ. ಮೊದಲ ಇನ್ನೀಂಗ್ಸ್ ನಲ್ಲಿ ಆಸ್ಟ್ರೇಲಿಯಾ ಬೃಹತ್ ಮೊತ್ತ ಕಲೆಹಾಕಿ ಡಿಕ್ಲೇರ್ ಮಾಡಿಕೊಂಡಿದೆ.
ಇನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್, ನಾಯಕ ಜೋ ರೂಟ್ ಅಬ್ಬರದ ನಡುವೆಯೂ 232 ರನ್ ಗಳಿಗೆ ಆಲೌಟ್ ಆಗಿದೆ. ಇದಕ್ಕೆ ಕಾರಣ ಆಸ್ಟ್ರೇಲಿಯಾದ ಸ್ಟಾರ್ ಬೌಲರ್ ಮಿಚಲ್ ಸ್ಟಾರ್ಕ್.
ಪಿಂಕ್ ಬಾಲ್ ನ ಡೇ ಅಂಡ್ ನೈಟ್ ಮ್ಯಾಚ್ ನಲ್ಲಿ ಮಿಚಲ್ ಸ್ಟಾರ್ಕ್ ಮಿಂಚಿನ ಬೌಲಿಂಗ್ ನಡೆಸಿ ಇಂಗ್ಲೆಂಡ್ ನ ಪ್ರಮುಖ ನಾಲ್ಕು ವಿಕೆಟ್ ಗಳನ್ನು ಪಡೆದಿದ್ದಾರೆ.
ಇದರೊಂದಿಗೆ ಪಿಂಕ್ ಬಾಲ್ ನಲ್ಲಿ 50 ವಿಕೆಟ್ ಕಬಳಿಸಿದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.