ಮಹಾನ್ ನಾಯಕರ ಹೆಸರಲ್ಲಿ ಬಡಿದಾಡುವುದು ಬೇಡ – ಸಿ ಎಂ ಬೊಮ್ಮಾಯಿ…
ಗಡಿ ಜಿಲ್ಲೆ ಬೆಳಗಾವಿ ಕೆಲವು ದಿನಗಳಿಂದ ಉದ್ವಿಘ್ನ ಸ್ಥಿತಿಯಲ್ಲಿದೆ. ಎಂ ಇ ಎಸ್ ಮತ್ತು ಶಿವಸೇನೆ ಪುಂಡರ ಹಾವಳಿಯಿಂದ ರಾಷ್ಟ್ರಕ್ಕಾಗಿ ದುಡಿದು ಮಡಿದ ಮಹಾನ್ ನಾಯಕರಿಗೆ ಅಪಮಾನುವಾಗುವಂತಹ ಕೆಲಸಕ್ಕೆ ಇವರು ಮುಂದಾಗಿದ್ದರೆ. ಇಂಥವರನ್ನ ವಿರುದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಸಹನೆ ವ್ಯಕ್ತಪಡಿಸಿದ್ದು ಮಹಾನ್ ನಾಯಕರ ಹೆಸರಲ್ಲಿ ಬಡಿದಾಡುವುದು ಬೇಢ ಎಂದು ಹೇಳಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜ, ಕಿತ್ತೂರು ರಾಣಿ ಚೆನ್ನಮ್ಮ, ವೀರ ಸಂಗೊಳ್ಳಿ ರಾಯಣ್ಣ ಅವರು ದೇಶದ ಸ್ವಾತಂತ್ರ ಹೋರಾಟಗಾರರು ಹಾಗೂ ಬ್ರಿಟಿಷರ ವಿರುದ್ಧ ಅವರು ಹೋರಾಟ ಮಾಡಿದವರು. ನಮಗೆ ಸ್ವಾತಂತ್ರ್ಯ ತಂದುಕೊಟ್ಟವರು. ಅಲ್ಲದೆ ದೇಶವನ್ನು ಒಗ್ಗೂಡಿಸಿದವರು.ಅಂತಹ ಮಹಾನ್ ನಾಯಕರ ಹೆಸರಿನಲ್ಲಿ ಬಡಿದಾದುವುದು ಅವರ ಹೋರಾಟಕ್ಕೆ ಮತ್ತು ಭಾರತದ ಸ್ವಾತಂತ್ರ ಸಂಗ್ರಾಮಕ್ಕೆ ಅನ್ಯಾಯ ಮಾಡಿದಂತೆ. ಯಾರೇ ಆಗಲಿ ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುವುದು ಸರಿಯಲ್ಲ. ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆಯನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ.
“ರಾಷ್ಟ್ರಭಕ್ತರ ಪ್ರತಿಮೆಗೆ ಭಂಗ ತರುವುದು ಸರಿಯಲ್ಲ. ದೇಶಕ್ಕಾಗಿ ತ್ಯಾಗ ಮಾಡಿದವರನ್ನು ಗೌರವಿಸಬೇಕು. ನಾಡಿಗೆ ಹೋರಾಡಿದವರ, ತ್ಯಾಗ ಮಾಡಿದವರ ಗೌರವ ಉಳಿಸಬೇಕು. ಸಮಾಜದಲ್ಲಿ ಕ್ಷೋಭೆ ಉಂಟುಮಾಡುವುದು ಸರಿಯಲ್ಲ. ಕೆಲವೇ ಕೆಲವು ಪುಂಡರು ಇಂತಹ ದುಷ್ಕೃತ್ಯ ಮಾಡುತ್ತಿದ್ದು, ಅವರನ್ನು ಸದೆಬಡಿಯುತ್ತೇವೆ. ಎಂದು ಮುಖ್ಯಮಂತ್ರಿ ಬಸವಾರಜ್ ಬೊಮ್ಮಾಯಿ ಅವರು ಟ್ವೀಟ್ ಮಾಡಿದ್ದಾರೆ.








