ನಾನು ಆರ್ ಆರ್ ಎಸ್ ನ ಸ್ವಯಂ ಸೇವಕ.. ಕೊತ್ವಾಲನ ಚೇಲಾ ಅಲ್ಲ D K Shivakumar saaksha tv
ಚಿಕ್ಕಮಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತಿನ ಯುದ್ಧ ಮುಂದುವರೆದಿದೆ. ಚಿಕ್ಕಮಗಳೂರಿನಲ್ಲಿ ನಾನು ಆರ್ ಆರ್ ಎಸ್ ನ ಸ್ವಯಂ ಸೇವಕ.. ಕೊತ್ವಾಲನ ಚೇಲಾ ಅಲ್ಲ ಎಂದು ಟ್ರಬಲ್ ಶೂಟರ್ ಗೆ ಡಿ.ಕೆ.ಶಿವಕುಮಾರ್ ಡಿಚ್ಚಿಕೊಟ್ಟಿದ್ದಾರೆ.
ಡಿ.ಕೆ.ಶಿವಕುಮಾರ್ ರ ಲೂಟಿ ರವಿ ಹೇಳಿಕೆಗೆ ಚಿಕ್ಕಮಗಳೂರಿನಲ್ಲಿ ಟಾಂಗ್ ನೀಡಿದ ಸಿ.ಟಿ.ರವಿ, ನಾನು ದೇಶಭಕ್ತಿ ಸಂಘಟನೆ ಆರ್‌ಎಸ್‌ಎಸ್‌ನ ಸ್ವಯಂ ಸೇವಕ. ಕೊತ್ವಾಲ್ ರಾಮಚಂದ್ರನ ಚೇಲಾ ಅಲ್ಲ. ಕೊತ್ವಾಲ್ ರಾಮಚಂದ್ರನ ಚೇಲಾಗಳು ಆದವರಿಗೆ ಉಳಿದವರು ಹಾಗೇ ಕಾಣುತ್ತಾರೆ ಎಂದರು.
ಇನ್ನು ನಾನು ಶಾಸಕನಾದ ಮೇಲೆ ನನ್ನ ಆಸ್ತಿಯಲ್ಲಿ ಹೆಚ್ಚಳ ಆಗಿಲ್ಲ. ಅಕ್ರಮ ಸಂಪತ್ತು ಮಾಡ್ಕೊಂಡು ಜೈಲು-ಬೇಲು ಕಂಡವರು ಇನ್ನೊಬ್ಬರ ಬಗ್ಗೆ ಆರೋಪ ಮಾಡುತ್ತಾರೆ. ಅಕ್ರಮ ಸಂಪತ್ತು ಗಳಿಸಿ ಜೈಲಿಗೆ ಹೋಗಿರುವ, ಬೇಲ್‍ನಲ್ಲಿರುವ ಯಾವುದೇ ಕುಖ್ಯಾತಿ ನನಗಿಲ್ಲ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.









