ಟ್ರೋಲ್ ಗೆ ಹೆದರಿ ಇಂಡಸ್ಟ್ರಿ ಬಿಡಬೇಕಂತ ಇದ್ರಂತೆ ರಶ್ಮಿಕಾ : ಆಮೇಲೇನಾಯ್ತು..? ರಕ್ಷಿತ್ ಬಗ್ಗೆಯೂ ಪರೋಕ್ಷ ಮಾತು..!
ಹೈದ್ರಾಬಾದ್ : ಟ್ರೋಲ್ ಗೂ ರಶ್ಮಿಕಾಗೂ ಅವಿನಾಬಾವ ಸಂಬಂಧವಿದೆ… ಅತಿ ಹೆಚ್ಚು ಟ್ರೋಲ್ ಆಗೋ ನಟಿಯರು ಅಂದ್ರೆ ಥಟ್ ಅಂತ ತಲೆಗೆ ಬರೋ ಒಂದೇ ಒಂದು ಹೆಸರೇ ರಶ್ಮಿಕಾ… ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕವೇ ಹಿಟ್ ಆದ್ರೂ, ಕನ್ನಡದ ಮೇಲಿನ ಅವರ ತಾತ್ಸಾರ ಬೇರೆ ಭಾಷೆಗಳ ಸಿನಿಮಾ ಮೇಲಿನ ಅವರ ಒಲವಿನಿಂದ, ಅವರು ಸದಾ ಟ್ರೋಲಿಗರ ಹಾಟ್ ಟಾಪಿಕ್ , ಟಾಪ್ ಲಿಸ್ಟ್ ನಲ್ಲೇ ಇರುತ್ತಾರೆ..
ರಶ್ಮಿಕಾ ಏನೇ ಮಾಡಿದ್ರೂ ಟ್ರೋಲ್ , ಏನೇ ಹೇಳೆ ಟ್ರೋಲ್ ಆಗುತ್ತಾರೆ.. ಅಂತೆಯೇ ಅಲ್ಲು ಅರ್ಜುನ್ ಜೊತೆಗೆ ಅವರ ನಟನೆಯ ಸಿನಿಮಾ ಪುಷ್ಪದಲ್ಲಿನ ಅವರ ಲುಕ್ ನಿಂದ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದ ನಟಿ , ಬಳಿಕ ಸಿನಿಮಾಗೆ ತಲುಗಿಗೆ ವಾಯ್ಸ್ ನೀಡಿ , ಕನ್ನಡಕ್ಕೆ ಡಬ್ ಮಾಡದೇ ಮತ್ತಷ್ಟು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ರು.. ಈಗಾಗಲೇ ಎರೆಡೂ ಕಾಲನ್ನ ತಮ್ಮನ್ನ ಇಂಡಸ್ಟ್ರಿಗೆ ಪರಿಚಯಸಿದ ಕನ್ನಡದ ಸಿನಿಮಾರಂಗದಿಂದ ಹೊರಗಿಟ್ಟಿದ್ದು , ಟಾಲಿವುಡ್ , ಕಾಲಿವುಡ್ , ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ..
ರಶ್ಮಿಕಾ ಇತ್ತೀಚೆಗೆ ನಡೆದ ಖಾಸಗಿ ಸಂದರ್ಶನವೊಂದರಲ್ಲಿ ಟ್ರೋಲ್ ಗಳ ಬಗ್ಗೆ ಮಾತನಾಡಿದ್ದಾರೆ. ನಾನು ಡಿಗ್ರಿ ಓದಲೆಂದು ಬೆಂಗಳೂರಿಗೆ ಬಂದಿದ್ದು. 2014ರಿಂದಲೇ ನಾನು ಮಾಡೆಲಿಂಗ್ ಕೆರಿಯರ್ ಆರಂಭಿಸಿದ್ದೆ. ಮಾಡೆಲ್ ಆಗಿದ್ದಾಗ ನಾನು ತುಂಬ ಆಕ್ಟಿವ್ ಆಗಿ ಇರುತ್ತಿದ್ದೆ.
ಈ ಸಂದರ್ಭದಲ್ಲಿ ಸಾಕಷ್ಟು ಸಿನಿಮಾಗಳಿಂದ ಆಫರ್ ಬಂದರೂ ಕಥೆ ಇಷ್ಟ ಆಗಿರಲಿಲ್ಲ. ಸ್ವಲ್ಪ ಸಮಯದ ನಂತರ ನನಗೆ ಕಿರಿಕ್ ಪಾರ್ಟಿ ಚಿತ್ರ ತಂಡದಿಂದ ಅವಕಾಶ ಬಂತು. ಕಥೆ ಕೇಳಿದೆ ಅದು ನನಗೆ ತುಂಬ ಇಷ್ಟ ಆಯ್ತು. ಯಾಕೆಂದರೇ ನಾನು ಕೂಡ ಆಗ ಕಾಲೇಜ್ ಹೋಗುತ್ತಿದ್ದೆ, ಕಿರಿಕ್ ಪಾರ್ಟಿ ಚಿತ್ರದಲ್ಲೂ ಅಂತದ್ದೇ ಕ್ಯಾರೆಕ್ಟರ್ ಇತ್ತು ಹೀಗಾಗಿ ಒಪ್ಪಿಕೊಂಡು ಆ ಸಿನಿಮಾ ಮಾಡಿದೆ. ಆ ಸಿನಿಮಾ ಇವತ್ತು ನನ್ನ ಇಲ್ಲಿವರೆಗೂ ಕರೆದುಕೊಂಡು ಬಂದಿದೆ ಎಂದಿದ್ದಾರೆ.. ಈಗಲಾದ್ರೂ ಕಿರಿಕ್ ಪಾರ್ಟಿಯಿಂದಲೇ ತಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ಒಪ್ಪಿಕೊಂಡಿದ್ಧಾರೆ..
ಸಿನಿಮಾ ಇಂಡಸ್ಟ್ರಿಗೆ ಬಂದ ನಂತರ ನನ್ನ ಬಗ್ಗೆ ಸಾಕಷ್ಟು ಟ್ರೋಲ್ ಆಗುತ್ತಿತ್ತು. ಮೊದ ಮೊದಲು ನನ್ನ ಬಗ್ಗೆ ಟ್ರೋಲ್ ಆದಾಗ ನಾನು ತುಂಬಾ ಕುಗ್ಗಿ ಹೋಗಿದ್ದೆ.. ಟ್ರೋಲ್‌ಗಳು ನನಗೆ ಸುನಾಮಿಯಂತೆ ಬಂದು ಅಪ್ಪಳಿಸುತ್ತಿತ್ತು. ಆಗ ನಾನು ಈ ಬಗ್ಗೆ ತುಂಬ ತಲೆ ಕೆಡಿಸಿಕೊಂಡಿದ್ದೆ. ನೆಗೆಟಿವ್ ಆಗಿ ಯೋಚನೆ ಮಾಡಲು ಆರಂಭಿಸಿದ್ದೆ. ಹೇಳಬೇಕು ಎಂದರೇ ನಾನು ಸಿನಿಮಾ ಇಂಡಸ್ಟ್ರಿಯನ್ನೇ ಬಿಡಲು ತೀರ್ಮಾನಿಸಿದ್ದೆ ಎಂದಿದ್ದಾರೆ.
ಆದ್ರೆ ಆ ಸಂದರ್ಭದಲ್ಲಿ ನನಗೆ ನನ್ನ ಕುಟುಂಬ ಧೈರ್ಯ ತುಂಬಿತ್ತು . ಹೀಗಾಗಿ ಮತ್ತೆ ನನ್ನ ಕೆರಿಯರ್ ಸಿನಿಮಾ ದಿಂದಲೇ ಆರಂಭಿಸಿದ್ದೇನೆ ಎಂದಿದ್ದಾರೆ. ಇದೇ ವೇಳೆ ನಾನು ಎಲ್ಲೇ ಹೋಗಲಿ ತುಂಬ ಟ್ರೋಲ್ ಆಗೋದು ಭಾಷೆಯ ವಿಚಾರಕ್ಕೆ. ನಿಜ ಹೇಳಬೇಕು ಅಂದರೇ ನನಗೆ ಈಗಲೂ ಯಾವ ಭಾಷೆಯೂ ಸರಿಯಾಗಿ ಬರೋದಿಲ್ಲ. ಹೊಸ ಹೊಸ ಭಾಷೆಗಳನ್ನು ಕಲಿಯಲು ಪ್ರಯತ್ನಿಸುತ್ತಿದ್ದೇನೆ. ಈ ಸಂದರ್ಭದಲ್ಲಿ ಎಲ್ಲವೂ ಮಿಕ್ಸ್ ಆಗಿ ಕಷ್ಟ ಪಟ್ಟು ಮಾತನಾಡುತ್ತೇನೆ ಅಷ್ಟೆ. ಹಾಗಂತ ನನಗೆ ಭಾಷೆ ಮೇಲೆ ಪ್ರೀತಿ ಇಲ್ಲ ಅಂತ ಅಲ್ಲ. ನಾನು ಮಾತನಾಡುವಾಗ ಆಗುವಂತಹ ತಪ್ಪುಗಳನ್ನೆ ಹಲವರು ಟಾರ್ಗೆಟ್ ಮಾಡುತ್ತಾರೆ. ಅದನ್ನೆ ಟ್ರೋಲ್ ಮಾಡುತ್ತಾರೆ. ಇದೆಲ್ಲಾ ನೋಡುತ್ತಿದ್ದರೇ ಬೇಸರ ಆಗುತ್ತೆ . ಆದರೇ ನಾನು ಯಾವುದಕ್ಕೆ ತಲೆ ಕೆಡಿಸಿಕೊಳ್ಳಲ್ಲ. ನನ್ನಿಂದ ಎಷ್ಟು ಆಗುತ್ತೆ ಅಷ್ಟು ಪ್ರೀತಿ ಹಂಚಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.
ಇದೇ ವೇಳೆ ರಕ್ಷಿತ್ ಶೆಟ್ಟಿ ಬಗ್ಗೆಯೂ ಮಾತನಾಡಿರೋ ರಶ್ಮಿಕಾ ನಾನು ಎಲ್ಲರನ್ನೂ ನಂಬುತ್ತೇನೆ, ಪ್ರೀತಿ ಮಾಡುತ್ತೇನೆ, ಹಾಗೇ ನನ್ನ ಹೃದಯವನ್ನು ಕೊಡುತ್ತೇನೆ. ಆದರೇ ಕೆಲವರು ಅದನ್ನು ಅರ್ಥ ಮಾಡಿಕೊಳ್ಳೊದಿಲ್ಲಾ. ನನ್ನನ್ನು ತಾನಾಗಿಯೇ ಇರಲು ಬಿಡಲಿಲ್ಲ. ಈ ರೀತಿಯಾಗಿಯೇ ನನ್ನನ್ನು ಕಳೆದುಕೊಂಡಿದ್ದಾರೆ. ಇದರಿಂದ ನಾನು ಕುಗ್ಗಿಲ್ಲ. ಖುಷಿ ಆಗಿಯೇ ಇದ್ದೇನೆ. ಇದರಿಂದ ನನಗೆ ನೋವಾಗಿರೋದು ನಿಜ. ಆದರೇ ಯಾರ ಮುಂದೆಯೂ ಅದನ್ನು ನಾನು ತೋರಿಸಿಕೊಂಡಿಲ್ಲ. ವರ್ಷದಲ್ಲಿ ಸಾಕಷ್ಟು ದಿನ ನಾನು ಕಣ್ಣೀರು ಹಾಕಿಯೇ ಮಲಗೋದು. ನಿದ್ರೆ ಇಲ್ಲದೇ ರಾತ್ರಿಗಳನ್ನು ನಾನು ಕಳೆದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಅಲ್ಲದೇ ಕೆಲವರು ಟ್ರೋಲ್ ಮಾಡುವ ಬರದಲ್ಲಿ ಏನೇನೋ ಟ್ರೋಲ್ ಮಾಡುತ್ತಾರೆ. ಕೆಟ್ಟ ಕೆಟ್ಟ ಪದಗಳನ್ನು ಬಳಸಿ ನನ್ನನ್ನು ಆ ಪೋಸ್ಟ್‌ಗೆ ಟ್ಯಾಗ್ ಮಾಡುತ್ತಾರೆ. ಆ ಪದಗಳ ಅರ್ಥವೇ ನನಗೆ ಗೊತ್ತಿರೋದಿಲ್ಲ. ಆಗ ನಾನು ಅಮ್ಮನ ಬಳಿ ಕೇಳುತ್ತೇನೆ. ಅಮ್ಮ ಅದನ್ನು ಬಿಟ್ಟು ಬಿಡು ಅನ್ನುತ್ತಾರೆ. ಆಗ ಸ್ನೇಹಿತರ ಬಳಿ ಅದನ್ನು ಕೇಳುತ್ತೇನೆ. ಅವರು ಅದರ ಅರ್ಥ ಹೇಳಿದಾಗ ಎದೆಯೇ ಒಡೆದುಹೋದಂತೆ ಆಗಿದೆ ನನಗೆ. ಇಷ್ಟೊಂದು ನೆಗೆಟಿವಿಟಿ ಯಾಕೆ ಹರಡುತ್ತಿದ್ದಾರೆ ಎಂದು ಬೇಸರ ಆಗುತ್ತೆ. ಆದರೆ ಅದಕ್ಕೆಲ್ಲ ನನ್ನ ಉತ್ತರ ಬರೀ ನಗುವಷ್ಟೆ. ಸಾಕಷ್ಟು ಮಂದಿ ನನ್ನ ಬಾಡಿ ಶೇಮಿಂಗ್ ಮಾಡಿದ್ದಾರೆ. ನನ್ನ ಕುಟುಂಬದ ಬಗ್ಗೆ, ನನ್ನ ಶಾಲೆಯ ಬಗ್ಗೆ, ನನ್ನ ಖಾಸಗೀ ಜೀವನದ ಬಗ್ಗೆಯೂ ಮಾತಾಡಿದ್ದಾರೆ. ಇದರಿಂದ ಅವರಿಗೆಲ್ಲಾ ಏನು ಸಿಗುತ್ತೆ ಎಂದು ಬೇಸರ ಹೊರಹಾಕಿದ್ದಾರೆ..
ಅಲ್ಲದೇ ಟ್ರೋಲ್ ಗಳಿಗೆ ಬೇಸರ ಇಲ್ಲ. ಆದರೇ ಒಬ್ಬ ಹೆಣ್ಣು ಮಗಳನ್ನು ಕೆಟ್ಟದಾಗಿ ಟ್ರೋಲ್ ಮಾಡಬೇಡಿ. ನಿಮಗೆಲ್ಲ ಟ್ರೋಲ್ ಮಾಡೋಕೆ ಎಲ್ಲಿಂದ ಸಮಯ ಸಿಗುತ್ತೆ.. ಬೇರೆ ಕೆಲಸಾನು ಮಾಡಿ, ಸ್ವಲ್ಪ ಹಣ ಸಂಪಾದಿಸಿ, ಟ್ರೋಲ್ ಮಾಡಿಕೊಂಡೆ ಸಮಯ ವ್ಯರ್ಥ ಮಾಡಬೇಡಿ ಎಂದು ಹೇಳಿದ್ದಾರೆ..
ಇತ್ತೇಚೆಗೆ ಪುಷ್ಪ ಸಿನಿಮಾದ ಪ್ರಚಾರಕ್ಕಾಗಿ ರಷ್ಮಿಕಾ ಮಂದಣ್ಣ ಅಲ್ಲು ಅರ್ಜುನ್ ಹಾಗೂ ಡಾಲಿ ಧನಂಜಯ್ ಅವರ ಜೊತೆಗೆ ಬೆಂಗಳೂರಿಗೆ ಬಮದಿದ್ದರು.. ಆಗಲೂ ಕನ್ನಡ ಮಾತನಾಡಲೂ ಪರದಾಡಿದ್ರೂ.. ಅದಕ್ಕೂ ಟ್ರೋಲ್ ಆಗಿದ್ರೂ..
ಅಂದ್ಹಾಗೆ ಹೇಟರ್ಸ್ ಜೊತೆಗೆ ರಶ್ಮಿಕಾಗೆ ಫ್ಯಾನ್ಸ್ ಗಳ ಸಂಖ್ಯೆಯೂ ತುಸು ಹೆಚ್ಚೇ ಇದೆ.. ಸದಾ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಆಗಿ ಇರುತ್ತಾರೆ. ಅವರು ಹಾಕುವ ಕೆಲವೊಂದು ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರ ಜೊತೆಗೆ ಟ್ರೋಲ್ ಕೂಡ ಆಗುತ್ತವೆ.
ಅಂದ್ಹಾಗೆ ರಶ್ಮಿಕಾ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾವನ್ನ ಪ್ರಚಾರ ಮಾಡುವಲ್ಲಿ ತೋರಿಸುತ್ತಿರುವ ಇಂಟ್ರೆಸ್ಟ್ , ಅವರೇ ನಾಯಕಿಯಾಗಿದ್ದ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾದ ಪ್ರಚಾರದಲ್ಲಿ ಯಾಕೆ ತೋರಿಸಲಿಲ್ಲ ಅಂತಲೂ ಅನೇಕರು ಪ್ರಶ್ನೆ ಮಾಡಿದ್ದರು..
ಅಲ್ಲದೇ ಇತ್ತೀಚೆಗೆ ರಶ್ಮಿಕಾ ಸಂದರ್ಶನ ವೊಂದ್ರಲ್ಲಿ ಮಾತನಾಡಿ ಎಲ್ಲಾ ಬಾಷೆಗಳಲ್ಲೂ ಫೇವರೇಟ್ ನಟರನ್ನ ಹೇಳಿದ್ರು.. ತೆಲುಗಲ್ಲಿ ಅಲ್ಲು ಅರ್ಜುನ್ , ಹಿಂದಿಯಲ್ಲಿ ರಣಬೀರ್ ಕಪೂರ್ ಅಂತೆಲ್ಲಾ ಹೇಳಿದ್ರು ಆದ್ರೆ ಮೇಡಂ ಗೆ ಕನ್ನಡದ ದರ್ಶನ್ , ಪುನೀತ್ , ಗಣೇಶ್ , ರಕ್ಷಿತ್ ಶೆಟ್ಟು , ಧ್ರುವ ಅವರ್ಯಾರ ಹೆಸರು ಕೂಡ ನೆನಪಿಗೆ ಬಂದಿರಲಿಲ್ಲ.. ದಕ್ಕೂ ಮಸ್ತ್ ಟ್ರೋಲ್ ಮಾಡಿದ್ರು ಟ್ರೋಲಿಗರು..
ಹೀಗೆ ರಶ್ಮಿಕಾ ಮತ್ತೆ ಟ್ರೋಲಿಗರ ನಡುವೆ ಎಂದಿಗೂ ಮುಗಿಯದ ಅವಿನಾಭಾವ ಸಂಬಂಧವಿದೆ.. ರಶ್ಮಿಕಾ ಏನೇ ಮಾಡ್ಲಿ ಟ್ರೋಲ್ ಆಗ್ತಾರೆ.. ಟ್ರೋಲಿಗರಿಗೆ ರಶ್ಮಿಕಾ ಎಷ್ಟೇ ತಾಂಟ್ ಕೊಟ್ರೂ ಮತ್ತೆಯೂ ಟ್ರೋಲ್ ಆಗೋದಂತೂ ತಪ್ಪಲ್ಲ..