ಎಂಇಎಸ್ ನಿಷೇಧ ಮಾಡಿ ಗಂಡಸುತನ ತೋರಿಸಿ : ಸಾ.ರಾ.ಗೋವಿಂದು Ban MES saaksha tv
ಬೆಂಗಳೂರು : ಎಂಇಎಸ್ ಸಂಘಟನೆಯನ್ನು ನಿಷೇಧ ಮಾಡಿ ಗಂಡಸುತನ ತೋರಿಸಿ ಎಂದು ಕನ್ನಡ ಪರ ಹೋರಾಟಗಾರ ಸಾ.ರಾ.ಗೋವಿಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆಯನ್ನು ಖಂಡಿಸಿ ಬೆಂಗಳೂರಿನಲ್ಲಿ ಕನ್ನಡದ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳ ಪ್ರತಿಭಟನೆ ನಡೆಯಿತು.
ಈ ವೇಳೆ ಹೋರಾಟಗಾರರು ಕಪ್ಪು ಶರ್ಟ್ ಧರಿಸಿ ಕಪ್ಪು ಪಟ್ಟಿ ಕಟ್ಟಿಕೊಂಡು ಕರಾಳ ದಿನಾಚರಣೆ ಮಾಡಿದರು. ಅಲ್ಲದೇ ಕೂಡಲೇ ಎಂಇಎಸ್ ನಿಷೇಧಕ್ಕೆ ಆಗ್ರಹಿಸಿದರು.
ಇನ್ನು ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಾ.ರಾ.ಗೋವಿಂದು, ಸಂಘಟನೆ,ಪಕ್ಷ ಮರೆತು ಎಂಇಎಸ್ ವಿರುದ್ಧ ನಾವೆಲ್ಲ ಹೊಂದಾಗಬೇಕಿದೆ. ಇವತ್ತಿನ ಪರಿಸ್ಥಿತಿಗೆ ಬಿಜೆಪಿ ಸರ್ಕಾರ ಕಾರಣ ಎಂದು ದೂರಿದರು.
ಇನ್ನು ಮರಾಠ ಪ್ರಾಧಿಕಾರ ರಚನೆ ಮಾಡಿದ್ದೆ ಇದಕ್ಕೆಲ್ಲ ಕಾರಣ ಎಂದು ಆರೋಪಿಸಿದರು.
ಇವತ್ತೆ ಎಂ ಇಎಸ್ ನಿಷೇಧ ಆಗಲಿಲ್ಲ ಅಂದರೆ ಕರ್ನಾಟಕ ಬಂದ್ ಗೆ ಕರೆ ಕೊಡುತ್ತೇವೆ. ಬಾವುಟ ಸುಟ್ಟಿರುವ ಬಗ್ಗೆ ಹಲವು ನಟರು ಮಾತನಾಡಿದ್ದಾರೆ.
ಆದ್ರೆ ಹೋರಾಟಕ್ಕೆ ಯಾರು ಬರುತ್ತಿಲ್ಲ. ಚಲನಚಿತ್ರ ನಾಯಕರ ಯಾರ ಮನೆಗೂ ಹೋಗಿ ಕರೆಯಲ್ಲ. ಅವರೆಲ್ಲರೂ ಖದ್ದಾಗಿ ಕರ್ನಾಟಕ ಬಂದ್ ದಿನ ಎಲ್ಲಾ ಭಾಗವಹಿಸಬೇಕು.
ಎಂಇಎಸ್ ನವರ ಹಾಗೇ ನಾವು ಕಲ್ಲು ಹೊಡೆದು ಹೇಡಿತನ ಪ್ರದರ್ಶನ ಮಾಡುವುದಿಲ್ಲ. ಗೃಹ ಮಂತ್ರಿಗಳೇ ತಕ್ಷಣ ಎಂ ಇಎಸ್ ನಿಷೇಧ ಮಾಡಿ ಗಂಡಸುತನ ತೋರಿಸಿ ಎಂದು ಆಗ್ರಹಿಸಿದರು.









