ಒಳ್ಳೆ ರಸ್ತೆಗೆ ತನ್ನ ಕೆನ್ನೆ ಹೋಲಿಸಿದ್ದಕ್ಕೆ ಸಿಟ್ಟಾದ ಹೇಮಾಮಾಲಿನಿ
ರಾಜಕೀಯವಾಗಿ, ಚುನಾವಣೆ ಸಮಯದಲ್ಲಿ ಕೆಲ ಉತ್ತರ ಭಾರತದ ರಾಜಕಾರಣಿಗಳು ಆಗಾಗ ಹೇಮಾಮಾಲಿನಿ ಅವರ ಕೆನ್ನೆವ ವಿಚಾರವನ್ನ ಪ್ರಸ್ತಾಪ ಮಾಡ್ತಲೇ ಇರುತ್ತಾರೆ.. ಕೆಲವರು ಒಳ್ಳೆ ರಸ್ತೆಗೆ ಹೇಮಾ ಮಾಲಿನಿ ಅವರ ಕೆನ್ನೆಯನ್ನ ಹೋಲಿಕೆ ಮಾಡಿಯೇ ಮಾತನಾಡಿದ್ದಾರೆ.
ಅಂತೆಯೇ ಇತ್ತೀಚೆಗೆ ಮಹಾರಾಷ್ಟ್ರದ ನೀರಾವರಿ ಸಚಿವ ಗುಲಾಬ್ ರಾವ್ ಪಾಟೀಲ್ ಇಂತಹದ್ದೇ ಒಂದು ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದರು.. ನನ್ನ ವಿಧಾನಸಭೆ ಕ್ಷೇತ್ರದಲ್ಲಿ ಬಹಳ ಚೆನ್ನಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ನಾನು ನಿರ್ಮಿಸಿದ ರಸ್ತೆಗಳು ಹೇಮಾಮಾಲಿನಿ ಕೆನ್ನೆಗಿಂತಲೂ ನುಣುಪಾಗಿದೆ ಎಂದಿದ್ದರು.. ಈ ಹೇಳಿಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು.. ನಂತರದಲ್ಲಿ ಗುಲಾಬ್ ರಾವ್ ಪಾಟೀಲ್ ಕ್ಷಮೆಕೋರಿದ್ದರು..
ಆದರೆ ಈ ಬಗ್ಗೆ ಈಗ ಹೇಮಾಮಾಲಿನಿ ಗರಂ ಆಗಿದ್ದಾರೆ.. ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಅದರಲ್ಲಿಯೂ ಚುನಾಯಿತ ಪ್ರತಿನಿಧಿಯೊಬ್ಬರು ಮಹಿಳೆಯ ಬಗ್ಗೆ ಹೀಗೆ ತಮಾಷೆಯಾಗಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದಿದ್ದಾರೆ. ಈ ವಿಚಾರವಾಗಿ ಮಾಧ್ಯಮದವರ ಜೊತೆಗೆ ಮಾತನಾಡಿರುವ ಹೇಮಾಮಾಲಿನಿ ಅವರು ನಾನು ನನ್ನ ಕೆನ್ನೆಗಳನ್ನು ತುಂಬಾ ಹುಷಾರಾಗಿ ನೋಡಿಕೊಳ್ಳಬೇಕು ಎಂದು ತಮಾಷೆಯ ಹೇಳಿಕೆ ನೀಡಿದ್ದಾರೆ..
ಈಗ ಮತ್ತು ಮೋಹಿನಿ ಖ್ಯಾತಿಯ ನಟಿ ಹಂಸ ನಂದಿನಿ ಗೆ ಸ್ತನ ಕ್ಯಾನ್ಸರ್…