6 ವರ್ಷಗಳ ಬಳಿಕ ಮತ್ತೆ ಕನ್ನಡಕ್ಕೆ ಶಕೀಲಾ ಕಮ್ ಬ್ಯಾಕ್..!
80-90 ರ ದಶಕದಲ್ಲಿ ಹಸಿ ಬಿಸಿ ಪಾತ್ರಗಳಿಂದಲೇ ಫೇಮಸ್ ಆಗಿದ್ದ ನಟಿ ಶಕೀಲಾ ಸ್ವಲ್ಪ ದಿನಗಳಿಂದ ಸಿನಿಮಾ ರಂಗದಿಂದ ದೂರವೇ ಉಳಿದಿದ್ದಾರೆ.. ಮಾಡಿದ್ರು ಅರೆ ಗ್ಲಾಮರಸ್ ಸಿನಿಮಾಗಳಲ್ಲಿ ಮಾತ್ರವೇ ಕಾಣಿಸಿಕೊಳ್ತಾರೆ..
ನೀಲಿ ಚಿತ್ರಗಳ ನಟನೆಯಿಂದ ದೂರ ಉಳಿದಿರುವ ನಟಿ ಶಕೀಲಾ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.ಶಕೀಲಾ ಕನ್ನಡ ಸಿನಿಮಾಗಳಲ್ಲೂ ಕೂಡ ನಟಿಸಿದ್ದರು.. ಆದ್ರೆ ಸುಮಾರು 6 ವರ್ಷಗಳಿಂದ ಕನ್ನಡ ಸಿನಿಮಾರಂಗದಿಂದ ದೂರ ಉಳಿದಿದ್ದ ಶಕೀಲಾ ಈಗ ಮತ್ತೆ 6 ವರ್ಷಗಳ ಬಳಿಕ ಕಮ್ ಬ್ಯಾಕ್ ಮಾಡ್ತಿದ್ದಾರೆ..
ಒಳ್ಳೆ ರಸ್ತೆಗೆ ತನ್ನ ಕೆನ್ನೆ ಹೋಲಿಸಿದ್ದಕ್ಕೆ ಸಿಟ್ಟಾದ ಹೇಮಾಮಾಲಿನಿ
ಆರು ವರ್ಷದ ಹಿಂದೆ ‘ಲವ್ ಯೂ ಆಲಿಯಾ’ ಸಿನಿಮಾದಲ್ಲಿ ನಟಿಸಿದ್ದ ಶಕೀಲಾ ಆ ನಂತರ ಕನ್ನಡದಲ್ಲಿ ನಟಿಸಿರಲಿಲ್ಲ. ಇದೀಗ ಮತ್ತೆ ಕನ್ನಡಕ್ಕೆ ವಾಪಸ್ಸಾಗಿರುವ ಶಕೀಲಾ, ‘ಡವ್ ಮಾಸ್ಟರ್’ ಹೆಸರಿನ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೇ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಶಕೀಲಾ, ‘ಬಹಳ ವರ್ಷಗಳ ಬಳಿಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದೇನೆ. ಈ ಬಗ್ಗೆ ಖುಷಿ ಇದೆ. ಈ ಸಿನಿಮಾದಲ್ಲಿ ನನ್ನ ಪಾತ್ರ ಬಹಳ ಭಿನ್ನವಾಗಿದೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದ್ದು, ಶೀಘ್ರವಾಗಿ ಬಿಡುಗಡೆ ಆಗಲಿದೆ’ ಎಂದಿದ್ದಾರೆ.
ಈಗ ಮತ್ತು ಮೋಹಿನಿ ಖ್ಯಾತಿಯ ನಟಿ ಹಂಸ ನಂದಿನಿ ಗೆ ಸ್ತನ ಕ್ಯಾನ್ಸರ್…
ನಾಯಿ ಒಂದಕ್ಕೆ ಮದುವೆ ಮಾಡಿಸುವ ಕತೆಯನ್ನು ಈ ಸಿನಿಮಾ ಹೊಂದಿದೆ. ಸಿನಿಮಾದಲ್ಲಿ ನಟ ನಾಣಿ ನಾಯಕನಾಗಿದ್ದಾರೆ.. ಸಿನಿಮಾದ ಎರಡನೇ ನಾಯಕ ನಾಯಿ.. ಅದರ ಹೆಸರು ರಾಖಿ. ನಿರ್ದೇಶಕ ಆರ್ಯ ಅವರಿಗೆ ‘ಡವ್ ಮಾಸ್ಟರ್’ ಸಿನಿಮಾ ಚೊಚ್ಚಲ ಸಿನಿಮಾವಾಗಿದೆ.. ಸಿನಿಮಾದಲ್ಲಿ ತಬಲಾ ನಾಣಿ, ಸುಂದರ್ ವೀಣಾ, ನವೀನ್ ಪಡೀಲ್ ಇನ್ನೂ ಕೆಲವರು ನಟಿಸುತ್ತಿದ್ದಾರೆ. ಸಿನಿಮಾಕ್ಕೆ ರೋಷನ್ ಪಾಷಾ ಬಂಡವಾಳ ಹೂಡಿದ್ದು, ಶಕೀಲ್ ಅಹ್ಮದ್ ಸಂಗೀತ ನೀಡಿದ್ದಾರೆ. ಸಿನಿಮಾಗೆ ಕಿರಣ್ ಛಾಯಾಗ್ರಹಣವಿದೆ.








