ನಾವು ಏನು ಹೇಳಿದ್ದೆವೋ, ಅದನ್ನು ಮಾಡಿ ತೋರಿಸಿದ್ದೇವೆ : ಬಿಜೆಪಿ BJP
ಬೆಂಗಳೂರು : ನಾವು ಏನು ಹೇಳಿದ್ದೆವೋ, ಅದನ್ನು ಮಾಡಿ ತೋರಿಸಿದ್ದೇವೆ. ವಿಧಾನ ಸಭಾ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡನೆಯಾಗಿದೆ. ಬದ್ಧತೆಗೆ ಮತ್ತೊಂದು ಹೆಸರು ಬಿಜೆಪಿ. ನುಡಿದಂತೆ ನಡೆದಿದ್ದೇವೆ ಎಂದು ರಾಜ್ಯ ಬಿಜೆಪಿ ತಿಳಿಸಿದೆ.
ಮತಾಂತರ ಕಾಯ್ದೆ ಮಂಡನೆ ಬಗ್ಗೆ ಟ್ವಿಟ್ಟರ್ ನಲ್ಲಿ ಸರಣಿ ಟ್ವೀಟ್ ಗಳನ್ನು ಮಾಡಿರುವ ಬಿಜೆಪಿ, ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದೆ.
ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಬಲವಂತದ ಮತಾಂತರಗಳಿಗೆ #AntiConversionBill ಮೂಲಕ ತಡೆ ಬೀಳಲಿದೆ. ಸಂವಿಧಾನ ಕಲ್ಪಿಸಿದ ಧಾರ್ಮಿಕ ಸ್ವಾತಂತ್ರ್ಯವನ್ನು ಕೆಲವರು ದುರುಪಯೋಗ ಪಡಿಸಿಕೊಂಡು ಬಲವಂತದ ಮತಾಂತರದ ಮೂಲಕ ಸಂವಿಧಾನಕ್ಕೆ ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡುತ್ತಿದ್ದಾರೆ.
ಮತಾಂತರ ನಿಷೇಧ ಕಾಯ್ದೆಗೂ ಕ್ರೈಸ್ತರಿಗೂ ಯಾವುದೇ ಸಂಬಂಧವಿಲ್ಲ. ಯಾರು ಬಲವಂತದ ಮತಾಂತರ ಮಾಡುತ್ತಾರೋ ಅವರಿಗೆ #AntiConversionBill ಅನ್ವಯವಾಗಲಿದೆ.
ಮತಾಂತರ ಕಾಯ್ದೆಯ ವಿರುದ್ಧ ಕ್ರೈಸ್ತರನ್ನು ಪ್ರಚೋದಿಸುವ ಮೂಲಕ ಕಾಂಗ್ರೆಸ್ ಒಂದು ಸಮುದಾಯವನ್ನೇ ಸಮಾಜ ಓರೆಗಣ್ಣಿನಿಂದ ನೋಡುವಂತೆ ಮಾಡುತ್ತಿದೆ.#SayNoToConversion
— BJP Karnataka (@BJP4Karnataka) December 21, 2021
ಈ ಹಿಂದೆ ಗೋ ಹತ್ಯಾ ನಿಷೇಧ ಕಾಯ್ದೆಗೂ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಈಗ #AntiConversionBill ಗೆ ವಿರೋಧಿಸುತ್ತಿದೆ. ಕಾಂಗ್ರೆಸ್ ಪಕ್ಷದ ನಿಲುವು : ಗೋ ಹತ್ಯೆಗೆ ಪ್ರೋತ್ಸಾಹ, ಮತಾಂತರಕ್ಕೆ ಸಮ್ಮತಿ. ಕಾಂಗ್ರೆಸ್ ಪಕ್ಷ ಹಿಂದೂಗಳನ್ನು ಅವಮಾನಿಸಬಹುದಾದ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳುತ್ತಿದೆ ಎಂದು ಕಿಡಿಕಾರಿದೆ.
ಬಲವಂತದ ಮತಾಂತರವನ್ನು ತಡೆಯುವುದೇ #AntiConversionBill ನ ಆದ್ಯ ಉದ್ದೇಶ. ಆದರೆ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಕಾಂಗ್ರೆಸ್ ನಾಯಕರು ಕ್ರೈಸ್ತ ಸಮುದಾಯವನ್ನು ಈ ಕಾಯ್ದೆಯ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ.ನೆನಪಿಡಿ, ಇದೇ ಕಾಂಗ್ರೆಸ್ ಸಿಎಎ ವಿರುದ್ಧ ಮುಸ್ಲಿಂ ಸಮುದಾಯವನ್ನು ಎತ್ತಿಕಟ್ಟಿತ್ತು.
ಬಲವಂತದ ಮತಾಂತರವನ್ನು ತಡೆಯುವುದೇ #AntiConversionBill ನ ಆದ್ಯ ಉದ್ದೇಶ.
ಆದರೆ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಕಾಂಗ್ರೆಸ್ ನಾಯಕರು ಕ್ರೈಸ್ತ ಸಮುದಾಯವನ್ನು ಈ ಕಾಯ್ದೆಯ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ.
ನೆನಪಿಡಿ, ಇದೇ ಕಾಂಗ್ರೆಸ್ ಸಿಎಎ ವಿರುದ್ಧ ಮುಸ್ಲಿಂ ಸಮುದಾಯವನ್ನು ಎತ್ತಿಕಟ್ಟಿತ್ತು.#SayNoToConversion
— BJP Karnataka (@BJP4Karnataka) December 21, 2021
ಮುಗ್ಧ ಜನರಲ್ಲಿ ಮಾತೃಧರ್ಮದ ಬಗ್ಗೆ ತುಚ್ಛವಾದ ಅಭಿಪ್ರಾಯ ತುಂಬಿಸಿ ಅವರ “ತಲೆಕೆಡಿಸಿ” ಬಲವಂತವಾಗಿ ಅನ್ಯ ಧರ್ಮಕ್ಕೆ ಮತಾಂತರಿಸಲು ಸಂವಿಧಾನದ ಯಾವ ಭಾಗದಲ್ಲಿ ಅವಕಾಶ ನೀಡಲಾಗಿದೆ? ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ನಿಯಂತ್ರಿಸುವುದು ತಪ್ಪೇ? ಸಂವಿಧಾನ ವಿರೋಧಿ ನಡೆಗಳನ್ನೇಕೆ ಕಾಂಗ್ರೆಸ್ ಪ್ರೋತ್ಸಾಹಿಸುತ್ತಿದೆ ಎಂದು ಬಿಜೆಪಿ ಪ್ರಶ್ನಿಸಿದೆ.








