ಯುಪಿ ಚುನಾವಣೆ ಹೊಸ್ತಿಲಲ್ಲಿ ವಿದ್ಯಾರ್ಥಿಗಳಿಗೆ ಭರ್ಜರಿ ಗಿಫ್ಟ್ : 1 ಕೋಟಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ಫೋನ್ ಫ್ರೀ..!
ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿ , ಬಿಜೆಪಿ , ಕಾಂಗ್ರೆಸ್ ಹಾಗೂ ಎಲ್ಲಾ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದು, ಆರೋಪಗಳು ಪ್ರತ್ಯಾರೋಪಗಳು ಜೋರಾಗಿದೆ.. ಜೊತೆಗೆ ಕಾಂಗ್ರೆಸ್ ಹುಬ್ಬೇರಿಸುವಂತಹ ಭರವಸೆಗಳನ್ನ ಪ್ರನಾಳಿಕೆಯಲ್ಲಿ ತಿಳಿಸಿದ್ರೆ , ಬಿಜೆಪಿಯು ತನ್ನದೇ ಶೈಲಿಯಲ್ಲಿ ಜನರ ಗಮನ ಸೆಳೆಯುತ್ತಿದೆ..
ಇದೀಗ ಉತ್ತರ ಪ್ರದೇಶದ ಸರ್ಕಾರವು ಒಂದು ಕೋಟಿ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನ್‌ಗಳನ್ನು ಉಚಿತವಾಗಿ ವಿತರಿಸಲು ನಿರ್ಧರಿಸಿದೆ.
ಭಾರತದ ಆರ್ಥಿಕತೆ ತೀರಾ ಹದಗೆಟ್ಟಿದೆ : ಮಮತಾ ಬ್ಯಾನರ್ಜಿ ಮುಖ್ಯ ಸಲಹೆಗಾರ ಅಮಿತ್ ಮಿತ್ರಾ
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ , ಡಿಸೆಂಬರ್ 25ರಂದು ಯೋಜನೆಯ ಮೊದಲ ಹಂತಕ್ಕೆ ಚಾಲನೆ ನೀಡಲಾಗುವುದು. ಅಂದು ಒಂದು ಲಕ್ಷ ಸ್ಮಾರ್ಟ್ ಫೋನ್‌ಗಳನ್ನು ವಿತರಿಸಲಾಗುವುದು. ಈ ಯೋಜನೆಯು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗಲಿದೆ.
ಎಂ.ಎ., ಬಿ.ಎ., ಬಿಎಸ್‌ಸಿ, ಐಟಿಐ, ಎಂಬಿಬಿಎಸ್, ಎಂ.ಡಿ., ಬಿ.ಟೆಕ್, ಎಂ.ಟೆಕ್ ಮುಂತಾದ ಪದವಿ ಮತ್ತು ಸ್ನಾತಕೋತ್ತರ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್ ಪಡೆಯಲು ಅರ್ಹರಾಗಿರುತ್ತಾರೆ.
ಈ ಸೌಲಭ್ಯ ಪಡೆಯುವುದಕ್ಕಾಗಿ ‘ಡಿಜಿ ಶಕ್ತಿ ಪೋರ್ಟಲ್’ನಲ್ಲಿ 38 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.