ಮತಾಂತರ ನಿಷೇಧ ಮಸೂದೆ ಸಂವಿಧಾನ ವಿರೋಧಿ : ಡಿ.ಕೆ.ಶಿವಕುಮಾರ್ DK Shivakumar saaksha tv
ಬೆಳಗಾವಿ : ಮತಾಂತರ ನಿಷೇಧ ಮಸೂದೆ ಸಂವಿಧಾನ ವಿರೋಧಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರ ಇಂದು ಸದನದಲ್ಲಿ ಮತಾಂತರ ನಿಷೇಧ ಮಸೂದೆಯನ್ನು ಮಂಡಿಸಿದೆ. ಇದಕ್ಕೆ ಕೆಪಿಪಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ನಾವು ಮೊದಲಿನಿಂದಲೂ ಮತಾಂತರ ನಿಷೇಧ ಮಸೂದೆಯನ್ನು ವಿರೋಧಿಸುತ್ತಲೇ ಬಂದಿದ್ದೇವೆ.
ಬಲವಂತದ ಮತಾಂತರ ತಡೆಗೆ ಈಗಾಗಲೇ ಕಾನೂನಿದೆ. ಈ ಮಸೂದೆ ಸಂವಿಧಾನ ವಿರೋಧಿಯಾಗಿದ್ದು, ನಾವು ಅದನ್ನ ವಿರೋಧಿಸಲೇ ಬೇಕಿದೆ.
ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು, ರಾಜಕೀಯ ದುರುದ್ದೇಶದಿಂದ ವಿಷಯಾಂತರ ಮಾಡುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.
ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ಮಂತ್ರಿಗಳ ಮಕ್ಕಳನ್ನು ಯಾರೂ ಮತಾಂತರ ಮಾಡುವ ಪ್ರಯತ್ನ ಮಾಡಿಲ್ಲ.
ಹಿಂದೂ ಧರ್ಮದವರು ಎಲ್ಲೂ ಮತಾಂತರಕ್ಕೆ ಒತ್ತಾಯಿಸಿಲ್ಲ. ಹಾಗಾಗಿ ಈ ಮಸೂದೆಯನ್ನು ಖಂಡಿಸುತ್ತೇವೆ.
ಇಷ್ಟು ವರ್ಷ ಆಗದ ಬಲವಂತದ ಮತಾಂತರ ಈಗ ಯಾರು ಮಾಡುತ್ತಿದ್ದಾರೆ? ಈ ವಿಚಾರದಲ್ಲಿ ರಾಜಕೀಯ ಸರಿಯಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.









