2022ರಲ್ಲಿ ಈ ರಾಶಿಯವರಿಗೆ ಶನಿ ಕಾಟ ತಪ್ಪಿದ್ದಲ್ಲ ಇವರು ಹೇಗೆ ಕಷ್ಟಗಳಿಂದ ನರಳುತ್ತಾರೆ ಗೋತ್ತಾ..?ಯಾರಿಗೆ ಶನಿ ಕಾಟದಿಂದ ಬಿಡುಗಡೆಯ ಭಾಗ್ಯ ಒಲಿಯುತ್ತದೆ..
ವೈದಿಕ ಜ್ಯೋತಿಷ್ಯದಲ್ಲಿ ಶನಿಯು ನ್ಯಾಯ ಅನ್ಯಾಯಗಳಿಗೆ ತಕ್ಕ ಪಾಠ ಕಲಿಸುವ ಗ್ರಹವೆಂದು ಪರಿಗಣಿಸಲಾಗಿದೆ. ಈ ಶನಿ ಗ್ರಹವು ನಿಧಾನವಾಗಿ ಚಲಿಸುತ್ತದೆ ಹಾಗಾಗಿ ಶನಿಯ ಕಾಟದ ಸಾಡೇಸಾತಿಯು ಜನರ ಜೀವನದಲ್ಲಿ 7 ವರ್ಷಗಳವರೆಗೆ ಇರುತ್ತದೆ. ಈ ಕಾಲದಲ್ಲಿ, ನಿಮ್ಮ ಜೀವನದಲ್ಲಿ ಯಾವುದೇ ಕೆಲಸ ಕಾರ್ಯಗಳಿಗೆ ನೀವು ಎಷ್ಟೇ ಶ್ರಮಿಸಿದರೂ, ಅದರ ಫಲಿತಾಂಶವು ನಿಮಗೆ ಏಳೆಷ್ಟು ಕಾಳು ಕೂಡಾ ಸಿಗುವುದಿಲ್ಲ ಎನ್ನಲಾಗುತ್ತದೆ.
2022 ರಲ್ಲಿ, ಶನಿದೇವನು 29 ಏಪ್ರಿಲ್ ರಂದು ಈ ಕೆಲವು ರಾಶಿಯನ್ನು ಬದಲಾಯಿಸುತ್ತದೆ ಮತ್ತು ಮಕರದಿಂದ ಕುಂಭ ರಾಶಿಯನ್ನು ಪ್ರವೇಶಿಸುತ್ತದೆ. ಆದುದರಿಂದ ಈ ಕೆಳಗಿನ ನಾಲ್ಕು ರಾಶಿಗಳು ಸಾಡೇಸಾತಿಯ ಶನಿ ಕಾಟಕ್ಕೆ ನರಕ ಅನುಭವಿಸುವ ಪ್ರಭಾವಕ್ಕೊಳಗಾಗುತ್ತದೆ.
ಮಕರ ರಾಶಿ
ಈ ರಾಶಿಯು ಸಂಪೂರ್ಣವಾಗಿ ಸಾಡೆ ಸತಿಯ ಕಾಟದಿಂದ ಅನುಭವಿತ್ತಾರೆ ಮತ್ತು ಈ ಸಮಯದಲ್ಲಿ ನಿಮ್ಮ ಎಲ್ಲಾ ಕೆಲಸಗಳು ನಿಧಾನವಾಗಿ ನಡೆಯುತ್ತಿವೆ ಎಂದು ನೀವು ಭಾವಿಸಬಹುದು. ಆದರೆ, ನೀವು ಕಷ್ಟಪಟ್ಟು ಕೆಲಸ ಮಾಡಬೇಕಾದ ಸಮಯ ಮತ್ತು ಸ್ವಲ್ಪ ತಾಳ್ಮೆಯಿಂದಿರಿ. ಶನಿಯು ಮಕರ ರಾಶಿಯ ಅಧಿಪತಿಯೇ ಆಗಿರುವುದರಿಂದ, ಸರಿಯಾದ ನಿರ್ಣಯವನ್ನು ಹೊಂದಲು ಗ್ರಹವು ನಿಮ್ಮನ್ನು ಪ್ರೇರೇಪಿಸುತ್ತದೆ.
ಕುಂಭ ರಾಶಿಯವರಿಗೂ ಸಾಡೇಸಾತಿಯ ಪ್ರಭಾವ ಇರುತ್ತದೆ. ಆದಾಗ್ಯೂ, ಕುಂಭ ರಾಶಿಯನ್ನು ಶನಿಯ ತ್ರಿಕೋನ ರಾಶಿ ಎಂದು ಕರೆಯಲಾಗುತ್ತದೆ ಮತ್ತು ಆದ್ದರಿಂದ, ಶನಿಯು ಕುಂಭ ರಾಶಿಯ ಸ್ಥಳೀಯರನ್ನು ತನ್ನ ಕೋಪದಿಂದ ರಕ್ಷಿಸಬಹುದು. ಆದರೆ ಈ ಸಮಯದಲ್ಲಿ ಪರಿಸ್ಥಿತಿಯನ್ನು ಸಾಧ್ಯವಾದಷ್ಟು ಅರ್ಥಮಾಡಿಕೊಳ್ಳಲು ಸಲಹೆ ನೀಡಲಾಗುತ್ತದೆ, ಕೆಲವೊಮ್ಮೆ ನೀವು ತಾಳ್ಮೆಯನ್ನು ಕಳೆದುಕೊಳ್ಳಬಹುದು.
ಮೀನ ರಾಶಿಯವರಿಗೆ, ಏಪ್ರಿಲ್ 2022 ರಿಂದ ಶನಿಗ್ರಹದ ಬದಲಾವಣೆಯೊಂದಿಗೆ ಸಾಡೇಸಾತಿ ಪ್ರಾರಂಭವಾಗುತ್ತದೆ. ಇದು ನಿಮಗೆ ಕೆಲವು ಮಾನಸಿಕ ಒತ್ತಡ ಮತ್ತು ಅನಗತ್ಯ ಭಯವನ್ನು ತರಬಹುದು. ನಿಮ್ಮ ಯೋಜನೆಗಳು ಬಹುತೇಕ ಈಡೇರಿದರೂ ಫಲಿತಾಂಶವನ್ನು ಪಡೆಯುತ್ತಿಲ್ಲ ಎಂದು ನಿಮಗೆ ಅನಿಸಬಹುದು. ಆದರೆ, ನಿಮ್ಮ ಕೆಲಸದಲ್ಲಿ ದೃಢನಿಶ್ಚಯದಿಂದಿರಿ, ನಿಧಾನಾವಗಿಯಾದರೂ ನೀವು ಪ್ರಯೋಜನಗಳನ್ನು ಪಡೆಯಬಹುದು.
ಶನಿಯು ಕುಂಭ ರಾಶಿಯನ್ನು ಪ್ರವೇಶಿಸುವರೆಗೂ ವೃಶ್ಚಿಕ ರಾಶಿಯ ಸ್ಥಳೀಯರು 2022ರಲ್ಲಿ ಸಾಡೇ ಸಾತಿಯ ಕೊನೆಯ ಹಂತವನ್ನು ಹೊಂದಿರುತ್ತಾರೆ. ಈ ಸಮಯದಲ್ಲಿ ನೀವು ಸೋಮಾರಿತನವನ್ನು ಅನುಭವಿಸಬಹುದು. ಆದಾಗ್ಯೂ, ಏಪ್ರಿಲ್ನಿಂದ ಜುಲೈವರೆಗೆ ಸಮಯವು ನಿಮಗೆ ಉತ್ತಮವಾಗಿ ಕಾಣುತ್ತದೆ. ಜುಲೈ ನಂತರ, ನೀವು ಸಾಕಷ್ಟು ತಾಳ್ಮೆ ಹೊಂದಿಲ್ಲದಿದ್ದರೆ ನೀವು ಅನಗತ್ಯ ವಿವಾದಗಳಿಗೆ ಒಳಗಾಗಬಹುದು.
ಈ ಮೇಲೆ ವಿವರಿಸಿದ ನಾಲ್ಕು ರಾಶಿಗಳು ಶನಿ ಸಾಡೇಸಾತಿಯ ಪ್ರಭಾವದಲ್ಲಿದ್ದರೆ, 2022 ರಲ್ಲಿ ಶನಿ ದೆಸೆಗೆ ಒಳಗಾಗುವ ನಾಲ್ಕು ಚಿಹ್ನೆಗಳು ಇವೆ. ಆ ನಾಲ್ಕು ರಾಶಿಗಳು ಯಾವುದೆಂದರೆ ತುಲಾ, ಕಟಕ, ಮಿಥುನ ಮತ್ತು ವೃಶ್ಚಿಕ. ಶನಿ ದೆಸೆಯು ಈ ನಾಲ್ಕು ರಾಶಿಗಳ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸುವ ಸಾಧ್ಯತೆಯಿದೆ. ಆದರೆ ಈ ಮೇಲೆ ಹೇಳಿದಂತೆ, ಶನಿಯು ನ್ಯಾಯದ ಗ್ರಹವಾಗಿದೆ. ಆದ್ದರಿಂದ, ಇದು ಕಷ್ಟಪಟ್ಟು ಕೆಲಸ ಮಾಡುವ ಮತ್ತು ಪ್ರಾಮಾಣಿಕರಾಗಿರುವ ಜನರನ್ನು ಬೆಂಬಲಿಸಬಹುದು. ಆದ್ದರಿಂದ, ಯಾವಾಗಲೂ ಒಳ್ಳೆಯ ಕಾರ್ಯಗಳನ್ನು ಮಾಡಿ, ಮತ್ತು ಶನಿಯು ನಿಮಗೆ ಯಶಸ್ಸನ್ನು ನೀಡಬಹುದು.








