“KGF” ಮೇಲೆ ನಮಗೆ ಹೆಮ್ಮೆ ಇದೆ.. “ವಿಕ್ರಾಂತ್ ರೋಣ”ನ ಮೇಲೆ ಅವರು ಹೆಮ್ಮೆ ಪಡುವಂತೆ ಮಾಡ್ತೇವೆ : ಸುದೀಪ್
KGF…. ಈ ಹೆಸರು ಭಾರತದಲ್ಲಿ ಕನ್ನಡ ಸಿನಿಮಾರಂಗದ ಪವರ್ ತೋರಿಸಿಕೊಟ್ಟ ಸಿನಿಮಾ… ರಾಕಿಂಗ್ ಸ್ಟಾರ್ ಯಶ್ ಅಭಿನಯದ , ಪ್ರಶಾಂತ್ ನೀಲ್ ನಿರ್ದೇಶನದ ಈ ಪ್ಯಾನ್ ಇಂಡಿಯಾ ಸಿನಿಮಾ ದೊಡ್ಡ ಮಟ್ಟದಲ್ಲೇ ಯಶಸ್ಸು ಕಂಡಿರುವ ಸಿನಿಮಾ.. ಸೌತ್ ಸಿನಿಮಾ ಇಂಡಸ್ಟ್ರಿಯ ಪವರ್ ತೋರಿಸಿದ KGF ನ ಸೀಕ್ವೆಲ್ ಗಾಗಿ ಸದ್ಯ ಇಡೀ ಭಾರತೀಯ ಸಿನಿಮಾರಂಗವೇ ಜಾತಕ ಪಕ್ಷಿಯಂತೆ ಕಾಯ್ತಿದ್ದು, KGF 2 ಏಪ್ರಿಲ್ 14 ಕ್ಕೆ ಅದ್ಧೂರಿಯಾಗಿಯೇ ರಿಲೀಸ್ ಆಗಲಿದೆ..
ಈ ನಡುವೆ ಕನ್ನಡದಲ್ಲಿ ಮತ್ತಷ್ಟು ಪ್ಯಾನ್ ಇಂಡಿಯಾ ಸಿನಿಮಾಗಳು ಮೂಡಿ ಬರುತ್ತಿದ್ದು, ಪ್ರಮುಖವಾಗಿ ಇಡೀ ಇಂಡಿಯಾ ಕಾಯ್ತಿರುವ ಬಹುನಿರೀಕ್ಷೆಯ ಸಿನಿಮಾ ಕಿಚ್ಚ ಸುದೀಪ್ ಅವರ ನಟನೆಯ “ ವಿಕ್ರಾಂತ್ ರೋಣ”.. ಈ ಸಿನಿಮಾ 3Dಯಲ್ಲಿ ಬರುತ್ತಿದ್ದು, ಫ್ಯಾಂಟಸಿಯಾಗಿದ್ದು, ಥ್ರಿಲ್ಲಿಂಗ್ ಎಲಿಮೆಂಟ್ಸ್ ಹೊಂದಿರುವ ಕಾರಣಕ್ಕೆ ,ಮತ್ತೆ ಪ್ರಮೋಷನ್ ರೀತಿ ಮತ್ತಷ್ಟು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.. ಅನೂಪ್ ಭಂಡಾರಿ ಸಾರಥ್ಯದ ಸಿನಿಮಾ ಯಾವುದೇ ಹಾಲಿವುಡ್ ಸಿನಿಮಾಗಿಂತಲೂ ಕಡಿಮೆ ಇಲ್ಲ ಅನ್ನುವಂತಿದೆ.. ಈ ಸಿನಿಮಾ ಫೆಬ್ರವರಿ 24ಕ್ಕೆ ರಿಲೀಸ್ ಆಗಲಿದೆ.. ಸಿನಿಮಾತಂಡ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದೆ..
ಈ ನಡುವೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಸುದೀಪ್ ಅವರಿಗೆ ಅಭಿಮಾನಿಯೊಬ್ಬರು, ವಿಕ್ರಾಂತ್ ರೋಣ ಸಿನಿಮಾ ಕೆಜಿಎಫ್ ಅನ್ನು ಮೀರಿಸುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕಿಚ್ಚನ ಶೈಲಿಯಲ್ಲೇ ಉತ್ತರ ನೀಡಿರುವ ಸುದೀಪ್ ಅವರು, ಯಾರೂ ಸಹ ಇನ್ನೊಬ್ಬರ ಸಿನಿಮಾವನ್ನು ಮೀರಿಸಬೇಕೆಂದು ಸಿನಿಮಾ ಮಾಡುವುದಿಲ್ಲ. ಅವರು (KGF) ಭಾರತೀಯ ಸಿನಿಮಾರಂಗದಲ್ಲಿ ಒಂದು ಸ್ಥಾನ ಸಂಪಾದನೆ ಮಾಡಿದ್ದಾರೆ ಎಂದರೆ, ಅದಕ್ಕೆ ಅವರ ಶ್ರಮ ಕಾರಣ. ಅವರನ್ನು ಮೀರಿಸಬೇಕು ಎಂದುಕೊಳ್ಳುವುದು ನಿಮ್ಮ ಪ್ರತಿಭೆಯ, ಶ್ರಮದ ಸರಿಯಾದ ಪ್ರತಿಫಲ ಅಲ್ಲ ಎನಿಸುತ್ತದೆ. ನಮ್ಮ ಶ್ರಮವನ್ನು, ಕರ್ತವ್ಯವನ್ನು ನಾವು ಮಾಡಬೇಕು, ಅವರ ಕೆಲಸವನ್ನು ಅವರು ಮಾಡಿದ್ದಾರೆ ಎಂದಿದ್ದಾರೆ.
ಅಲ್ಲದೇ ಕೆಜಿಎಫ್ ತಂಡದ ಪ್ರಾಮಾಣಿಕತೆಯಿಂದಾಗಿ ಎಲ್ಲ ಒದಗಿ ಬಂತು.. ಕೆಜಿಎಫ್ ತಂಡದ ಟೈಮಿಂಗ್ ಸಹ ಬಹಳ ಚೆನ್ನಾಗಿತ್ತು. ತುಸು ಅದೃಷ್ಟವೂ ಸಹ ಅವರ ಜೊತೆಗಿತ್ತು. ಕೆಜಿಎಫ್ ಸಿನಿಮಾದ ಜೊತೆಗೆ ದೊಡ್ಡ ಸಿನಿಮಾ ಒಂದು ಬಿಡುಗಡೆ ಆಯ್ತು. ಆದರೆ ಆ ಸಿನಿಮಾ ಫ್ಲಾಪ್ ಆಯ್ತು. ಚಿತ್ರತಂಡದ ಶ್ರಮ ಹಾಗೂ ಸಿನಿಮಾದ ಬಗ್ಗೆ ಅವರಿಗಿದ್ದ ಪ್ರಾಮಾಣಿಕತೆಯಿಂದ ಈ ಎಲ್ಲ ವಿಷಯಗಳು ಅವರಿಗೆ ಒದಗಿ ಬಂದವು. ಅಂತಿಮವಾಗಿ ವಿಕ್ರಾಂತ್ ರೋಣ ಸಿನಿಮಾ ವಿಕ್ರಾಂತ್ ರೋಣ ಸಿನಿಮಾವೇ, ಕೆಜಿಎಫ್ ಸಿನಿಮಾ ಕೆಜಿಎಫ್ ಸಿನಿಮಾವೇ. ಎರಡೂ ಸಿನಿಮಾಗಳನ್ನು ಹೋಲಿಸಲು ಸಾಧ್ಯವಿಲ್ಲ.
ಕೆಜಿಎಫ್ ಸಿನಿಮಾ ಮಾಡಿರುವ ಸಾಧನೆ ಬಗ್ಗೆ ನಮಗೆ ಹೆಮ್ಮೆಯಿದೆ, ಅಂತೆಯೇ ವಿಕ್ರಾಂತ್ ರೋಣ ಬಗ್ಗೆಯೂ ಅವರು ಹೆಮ್ಮೆ ಪಡುವಂತೆ ನಾವು ಮಾಡುತ್ತೇವೆ ಎಂದಿದ್ದು, ಕಿಚ್ಚನ ಚಿನ್ನದಂತ ಮಾತು ಮತ್ತೆ ಅಭಿಮಾನಿಗಳ ಮನ ಗೆದ್ದಿದೆ.. ವಿಕ್ರಾಂತ್ ರೋಣ ಸಿನಿಮಾದಲ್ಲಿ ನಿರೂಪ್ ಭಂಡಾರಿ, ಶ್ರದ್ಧಾ ಶ್ರೀನಾಥ್, ರವಿಶಂಕರ್, ನೀತಾ ಅಶೋಕ್ ಸೇರಿದಂತೆ ಇನ್ನೂ ಹಲವರ ತಾರಾಬಳಗವಿದೆ..








