ಕೊರೊನಾ ದೈನಂದಿನ ಕೇಸ್ ಗಳ ಸಂಖ್ಯೆ ಕಡಿಮೆಯಾದ್ರೂ , ಹೆಚ್ಚುತ್ತಲೇ ಇದೆ ಒಮಿಕ್ರಾನ್ ಸಂಖ್ಯೆ..!
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯೇನೋ ದಿನೇ ದಿನೇ ಕಡಿಮೆಯಾಗ್ತಿದೆ. ಆದ್ರೆ ಇದು ಸಮಾಧಾನಕರ ಸಂಗತಿಯೇನಲ್ಲ..
ಯಾಕಂದ್ರೆ ಕೊರೊನಾ ವೈರಸ್‌ನ ರೂಪಾಂತರಿ ತಳಿ ಓಮೈಕ್ರಾನ್ ಸೋಂಕು ಪ್ರಕರಣಗಳು ದೇಶದಲ್ಲಿ ಏರಿಕೆಯಾಗ್ತಲೇ ಇದೆ.. ಸೋಮವಾರ 152 ಇದ್ದ ಪ್ರಕರಣಗಳು ಮಂಗಳವಾರ ಬೆಳಗ್ಗೆ ಹೊತ್ತಿಗೆ 200ಕ್ಕೆ ತಲುಪಿವೆ. ಅದೇ ಬುಧವಾರ 213 ಪ್ರಕರಣ ವರದಿಯಾಗಿದೆ. ಭಾರತದಲ್ಲಿ ಪ್ರತಿ ಮೂರು ದಿನಗಳಿಗೆ ಒಮ್ಮೆ ಒಮಿಕ್ರಾನ್ ಪ್ರಕರಣಗಳು ದುಪ್ಪಟ್ಟಾಗ್ತಿವೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ..
ಅಂದ್ಹಾಗೆ ದೇಶದದಲ್ಲಿ ಕಳೆದ 24 ಗಂಟೆಗಳಲ್ಲಿ 6,317 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ.. ನಿನ್ನೆ 318 ಮಂದಿ ಮಹಾಮಾರಿಯಿಂದ ಉಸಿರು ನಿಲ್ಲಿಸಿದ್ದಾರೆ.. ಒಟ್ಟು ಸಾವಿನ ಸಂಖ್ಯೆ 4,78,325 ಕ್ಕೆ ತಲುಪಿದೆ. ಇದೇ ಅವಧಿಯಲ್ಲಿಯೇ 6,906 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ..
ದೇಶದಲ್ಲಿ ಈ ವರೆಗೆ 3,42,00,896 ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ 78,190 ಸಕ್ರಿಯ ಪ್ರಕರಣಗಳು ಭಾರತದಲ್ಲಿವೆ.


![pandavapura-free-health-camp-darshan-puttannaiah-october-8]](https://saakshatv.com/wp-content/uploads/2026/10/darsan-120x86.png)
![pandavapura-free-health-camp-darshan-puttannaiah-october-8]](https://saakshatv.com/wp-content/uploads/2026/10/darsan-350x250.png)


![technologies-aerospace-defense-manufacturing-unit-devanahalli]](https://saakshatv.com/wp-content/uploads/2026/10/areo-350x247.png)
