ಮದುವೆ ಹಿಂದಿನ ದಿನ ಚಿನ್ನಾಭರಣ ದೋಚಿ ಬಾಯ್ ಫ್ರೆಂಡ್ ಜೊತೆ ಯುವತಿ ಪರಾರಿ
ಉತ್ತರಪ್ರದೇಶ : ಇನ್ನೇನು ನಾಳೆ ಮದುವೆಯಾಗೇಬಿಡ್ತು.. ಮಗಳನ್ನ ಗಂಡನ ಮನೆಗೆ ಅದ್ಧೂರಿಯಾಗಿ ಕಳುಹಿಸಿಕೊಡಬೇಕೆಂದು , ನವ ವಧುವನ್ನ ಅದ್ಧೂರಿಯಾಗಿ ನಮ್ಮ ಮನೆಗೆ ಬರಮಾಡಿಕೊಳ್ಳಬೇಕೆಂಬ ಖುಷಿ , ಸಂಭ್ರಮ , ಉತ್ಸಾಹದಲ್ಲಿದ್ದ ವಧು ವರ ಇಬ್ಬರ ಕುಟುಂಬಸ್ಥರು ನಿರೀಕ್ಷೆ ಮಾಡದ ಆಘಾತ ಅವರಿಗೆ ಎದುರಾಗಿದೆ..
ವರನ ಕನಸು ನುಷ್ಷುನೂರಾಗಿದೆ.. ವಧು ಮದುವೆಯ ಹಿಂದಿನ ದಿನವೇ ಚಿನ್ನಾಭರಣದ ಜೊತೆಗೆ ತನ್ನ ಬಾಯ್ ಫ್ರೆಂಡ್ ಜೊತೆಗೆ ಎಸ್ಕೇಪ್ ಆಗಿದ್ದಾಳೆ.. ಈ ಘಟನೆ ನಡೆದಿರುವುದು ಉತ್ತರಪ್ರದೇಶದ ಫಿರೋಜಾಬಾದ್ ನಲ್ಲಿ.. ಚಹಾದಲ್ಲಿ ಪ್ರಜ್ಞೆ ತಪ್ಪಿಸುವ ಪದಾರ್ಥ ಬೆರೆಸಿ ಮನೆ ಮಂದಿಗೆಲ್ಲಾ ನೀಡಿದ್ದಾಳೆ..
ಎಲ್ಲರೂ ಪ್ರಜ್ಞೆ ತಪ್ಪಿದ ನಂತರ ತನ್ನ ಪ್ರಿಯತಮನ ಜೊತೆಗೆ ಪರಾರಿಯಾಗಿದ್ದಾಳೆ.. ಸುಮಾರು 1.5 ಲಕ್ಷ ರೂಪಾಇ ಮೌಲ್ಯದ ಚಿನ್ನಾಭರಣದ ಜೊತೆಗೆ ಆಕೆ ಕಾಲ್ಕಿತ್ತಿದ್ದಾಳೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.. ಘಟನೆಯಲ್ಲಿ ಚಹಾ ಕುಡಿದ ಕೆಲ ಕುಟುಂಬಸ್ಥರ ಆರೋಗ್ಯ ಹದಗೆಟ್ಟಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ..
ಇತ್ತ ವರನ ಕಡೆಯವರ ಕೋಪ ಕಡಿಮೆ ಮಾಡಲು ವಧುವಿನ ಕುಟುಂಬಸ್ಥರು ಆಕೆಯ ಕಿರಿಯ ಮಗಳನ್ನ ವರನಿಗೆ ಮದುವೆ ಮಾಡಿಕೊಡುವ ಪ್ರಸ್ತಾಪವಿಟ್ಟಿದ್ದು , ವರನ ಮನೆಯವರು ಇದಕ್ಕೆ ಒಪ್ಪಿದ್ದಾರೆ ಎನ್ನಲಾಗಿದೆ..








