ಸೆಕ್ಸಿಯಾಗಿ ಕಾಣಿಸೋದು ಸುಲಭವಲ್ಲ ಎಂದ ಸಮಂತಾ..!
ನಾಗಚೈತನ್ಯ ಜೊತೆಗೆ ಡಿವೋರ್ಸ್ ಪಡೆದ ಬಳಿಕ ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ. ಅದ್ರಲ್ಲೂ ಬೋಲ್ಡ್ ಪಾತ್ರಗಳಿಗೆ ಒಪ್ಪುತ್ತಿದ್ದಾರೆ.. ಹಾಲಿವುಡ್ ನಲ್ಲಿ ಮೊದಲ ಸಿನಿಮಾ ಮಾಡ್ತಿರೋ ಸ್ಯಾಮ್ ಅದ್ರಲ್ಲಿ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಳ್ತಿದ್ದಾರೆ ಎನ್ನಲಾಗಿದೆ.. ಈ ನಡುವೆ ಸಮಂತಾ ಅಲ್ಲು ಅಭಿನಯದ ಪುಷ್ಪ ಸಿನಿಮಾದಲ್ಲಿ ಮೊಟ್ಟ ಮೊದಲ ಬಾರಿಗೆ ಐಟಂ ಸಾಂಗ್ ಗೆ ಹೆಜ್ಜೆ ಹಾಕುವ ಮೂಲಕ ಸಿಕ್ಕಾಪಟ್ಟೆ ಗ್ಲಾಮ್ ಆಗಿ ಕಾಣಿಸಿಕೊಂಡಿದ್ದಾರೆ..
ಸಮಂತಾ “ಊ.. ಅಂಟಾವಾ ಮಾವ ಹೂಹು ಅಂಟಾವಾ ಮಾವ” ಹಾಡಿಗೆ ಅಭಿಮಾನಿಗಳು ಥಿಯೇಟರ್ ಗಳಲ್ಲಿ ಹುಚ್ಚೆದ್ದು ಕುಣಿದಿದ್ದಾರೆ.. ಸಮಂತಾರನ್ನ ಈ ಹಾಡಿಗಾಗಿ ಕೆಲವರು ಹೊಗಳಿದ್ದರೆ , ಕೆಲವರು ತೆಗಳಿರುವುದು ಇದೆ.. ಈ ಐಟಂ ಸಾಂಗ್ ನಲ್ಲಿ ಸಮಂತಾ ಸಖತ್ ಹಾಟ್ ಲುಕ್ ನಲ್ಲಿ ದರ್ಶನ ನೀಡಿದ್ದಾರೆ..
ಈ ಬಗ್ಗೆ ಸ್ಯಾಮ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಒಂದನ್ನ ಹಾಕಿದ್ದು, ವೃತ್ತಿ ಜೀವನದ ಬಗ್ಗೆ ಮಾತನಾಡಿದ್ದಾರೆ.. “ ನಾನು ಕೆಟ್ಟ ರೀತಿಯಲ್ಲೂ ಕಾಣಿಸಿಕೊಂಡಿದ್ದೇನೆ, ಒಳ್ಳೆಯ ರೀತಿಯಲ್ಲೂ ಕಾಣಿಸಿಕೊಂಡಿದ್ದೇನೆ.. ಫನ್ನಿಯಾಗಿಯೂ ಕಾಣಿಸಿಕೊಂಡಿದ್ದೇನೆ.. ಚಾಟ್ ಶೋನ ಕೂಡ ನಡೆಸಿಕೊಟ್ಟಿದ್ದೇನೆ.. ನಾನು ಮಾಡುವ ಎಲ್ಲಾ ಕೆಲವನ್ನ ಬಹಳ ಶ್ರದ್ಧೆ ಹಾಗೂ ಶ್ರಮದಿಂದ ನಿಭಾಯಿಸುತ್ತೇನೆ.. ಆದ್ರೆ ಸೆಕ್ಸಿಯಾಗಿರುವುದು ಮಾತ್ರ ತುಂಬಾನೇ ಕಷ್ಟದ ಕೆಲಸ ಎಂದಿದ್ದಾರೆ ಸಮಂತಾ..
ಸಮಂತಾ ನಟನೆಯ ಶಕುಂತಲಂ ಸಿನಿಮಾ ರಿಲೀಸ್ ಆಗಬೇಕಿದೆ.. ಅದರ ಹೊರಾತಗಿ ತಾಪ್ಸಿ ಪನ್ನು ನಿರ್ಮಾಣದ , ಮಹಿಳಾ ಪ್ರಧಾನ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿ ಕೂಡ ಸಿಕ್ಕಿದೆ..








