ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಗೆಲ್ಲೋದು ಅಷ್ಟು ಸುಲಭವಲ್ಲ.. wasim-jaffer saaksha tv
ದಕ್ಷಿಣಾ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಸಕಲ ರೀತಿಯಲ್ಲೂ ಸಿದ್ಧವಾಗುತಿದೆ. ಈ ಸರಣಿಯ ಭಾಗವಾಗಿ ಡಿಸೆಂಬರ್ 26 ರಂದು ಸೆಂಚೂರಿಯನ್ ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಅದಕ್ಕಾಗಿ ಟೀಂ ನೆಟ್ಸ್ ಗಳಲ್ಲಿ ಬೆವರಿಳಿಸುತ್ತಿದ್ದು, ಸರಣಿ ಗೆಲ್ಲಲು ಪ್ಲಾನ್ ಮಾಡುತ್ತಿದೆ.
ಈ ಮಧ್ಯೆ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲ್ಲುವುದು ಅಷ್ಟು ಸುಲಭವಲ್ಲ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಜಾಫರ್ ವಾಸೀಮ್ ತಿಳಿಸಿದ್ದಾರೆ. ಆಫ್ರಿಕಾ ಬೌಲರ್ ಗಳು ಟೀಂ ಇಂಡಿಯಾದ ಬ್ಯಾಟರ್ ಗಳಿಗೆ ದೊಡ್ಡ ಸವಾಲಾಗಲಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ದಕ್ಷಿಣ ಆಫ್ರಿಕಾ ತಂಡ ಅತ್ಯುತ್ತಮವಾದ ಪೇಸ್ ಅಟ್ಯಾಕ್ ಹೊಂದಿದೆ. ಸದ್ಯ ಅನ್ರಿಚ್ ಗಾಯಗೊಂಡು ಸರಣಿಯಿಂದ ಹೊರ ನಡೆದಿರುವುದು ಟೀಂ ಇಂಡಿಯಾಗೆ ಶುಭ ಸುದ್ದಿ. ಆದ್ರೆ ಆಫ್ರಿಕಾ ತಂಡದಲ್ಲಿ ರಬಾಡ ಇದ್ದು, ಆತ ವಿಶ್ವದ ಶ್ರೇಷ್ಠ ಬೌಲರ್ ಗಳಲ್ಲಿ ಒಬ್ಬರು. ಆಫ್ರಿಕಾ ಬೌಲರ್ ಗಳು ನೂರಕ್ಕೆ ನೂರಷ್ಟು ಭಾರತೀಯ ಬ್ಯಾಟರ್ ಗಳಿಗೆ ಸವಾಲಾಗಲಿದ್ದಾರೆ ಎಂದು ಜಾಫರ್ ಹೇಳಿದ್ದಾರೆ.
ಇದೇ ವೇಳೆ ಟೀಂ ಇಂಡಿಯಾದ ಬೌಲಿಂಗ್ ಬಗ್ಗೆ ಮಾತನಾಡಿದ ಅವರು, ಟೀಂ ಇಂಡಿಯಾದಲ್ಲಿ ವಿಶ್ವ ಶ್ರೇಷ್ಠ ಬೌಲರ್ ಗಳಿದ್ದಾರೆ. ತಂಡದಲ್ಲಿ ಬುಮ್ರಾ, ಶಮಿ, ಇಶಾಂತ್ ರಂತಹ ಬೌಲರ್ ಗಳಿದ್ದು, ಭಾರತ 400 ಕ್ಕೂ ಹೆಚ್ಚು ರನ್ ಗಳನ್ನು ಗಳಿಸಿದರೇ ಗೆಲ್ಲುವ ಚಾನ್ಸ್ ಇದೆ ಎಂದಿದ್ದಾರೆ.









