ಡಿವೋರ್ಸ್ ವದಂತಿಗೆ ಪ್ರಿಯಾಂಕಾ ಕೊಟ್ಟ ಸ್ಪಷ್ಟನೆ..!
ಸೋಷಿಯಲ್ ಮೀಡಿಯಾದಿಂದ ತಮ್ಮ ಹೆಸರಿನ ಜೊತೆಗೆ ಪತಿ ಹೆಸರು ‘ಜೋನಸ್’ ಕೈಬಿಟ್ಟಿದ್ದ ನಂತರ ಪ್ರಿಯಾಂಕಾ ದಾಂಪತ್ಯದಲ್ಲಿ ಬಿರುಕು ಮೂಡಿದೆ, ಸಮಂತಾರಂತೆಯೇ ಡಿವೋರ್ಸ್ ಪಡೆಯಲಿದ್ದಾರೆ ಅನ್ನೋ ವದಂತಿಗಳು ಹಲ್ ಚಲ್ ಸೃಷ್ಟಿ ಮಾಡಿದ್ವು.. ಆದ್ರೆ ಅದಾದ ನಂತರದಲ್ಲಿ ಪತಿಯ ಕಾರ್ಯಕ್ರಮದಲ್ಲಿ ಭಾಯಗಿಯಾಗಿ , ವೆಡ್ಡಿಂಗ್ ಆನಿವರ್ಸರಿ ಫೋಟೋ ಹಂಚಿಕೊಂಡು ವದಂತಿಗಳಿಗೆ ಬ್ರೇಕ್ ಹಾಕಿದ್ರೆ , ‘ಜೋನಸ್’ ಸರ್ ನೇಮ್ ತಗೆದ ಬಗ್ಗೆ ಮಾತ್ರ ಹೇಳಿಕೊಂಡಿರಲಿಲ್ಲ.. ಇದಕ್ಕೆ ಈಗ ಪಿಗ್ಗಿ ಸ್ಪಷ್ಟನೆ ನೀಡಿದ್ದಾರೆ..
ರಾಷ್ಟ್ರೀಯ ಮಾಧ್ಯಮಕ್ಕೆ ಸಂದರ್ಶನ ನೀಡಿರುವ ಪ್ರಿಯಾಂಕಾ , “ ನನಗೆ ಗೊತ್ತಿಲ್ಲ.. ನನ್ನ ಯೂಸರ್ ನೇಮ್ ಹೊಂದಿಕೆಯಾಬೇಕು ಎನ್ನಿಸಿ ನಾನು ಈ ನಿರ್ಧಾರ ಮಾಡಿದ್ದೆ.. ಇದೇ ಸಾಕಷ್ಟು ವದಂತಿಗಳನ್ನ ಸೃಷ್ಟಿಸಿದ್ದೆ ಎಂದುಕೊಂಡಿರಲಿಲ್ಲ.. ಇದು ಸಾಮಾಜಿಕ ಮಾಧ್ಯಮ ಅಷ್ಟೇ ಜಸ್ಟ್ ಚಿಲ್ ಔಟ್ ಗಯ್ಸ್ ಎಂದು ತಿಳಿಸಿದ್ದಾರೆ..
ಪ್ರಿಯಾಂಕಾ ಕಳೆದ 12 ತಿಂಗಳುಗಳಿಂದ ಲಂಡನ್ ನಲ್ಲಿ ಮುಂಬರುವ ಸಿಟಾಡೆಲ್ ಸರಣಿಯ ಚಿತ್ರೀಕರಣ ನಡೆಸುತ್ತಿದ್ದರು. ತನ್ನ ಪತಿ ಅಮೇರಿಕನ್ ಪಾಪ್ ಗಾಯಕ ನಿಕ್ ನಿಂದ ದೂರವಿರುವುದು ತುಂಬಾ ಕಷ್ಟಕರವಾಗಿದೆ ಎಂದು ಇದೇ ಸಂದರ್ಶನದಲ್ಲಿ ಅವರು ಹೇಳಿದರು.
ಬಾಲಿವುಡ್ ನ ಸ್ಟಾರ್ ನಟಿ ಪ್ರಿಯಾಂಕಾ ಸದ್ಯ ಪತಿ ಅಮೆರಿಕಾದ ಸ್ಟಾರ್ ಪಾಪ್ ಸಿಂಗರ್ ನಿಕ್ ಜಾನಸ್ ಜೊತೆಗೆ ವಿವಾಹವಾದ ಬಳಿಕ ಅಮೆರಿಕಾದಲ್ಲೇ ನೆಲೆಸಿದ್ದು, ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.. ಅವರ ನಟನೆಯ ‘ದಿ ಮ್ಯಾಟ್ರಿಕ್ಸ್ ರೆಸರೆಕ್ಷನ್ಸ್ ಸಿನಿಮಾ ರಿಲೀಸ್ ಆಗಿ ಯಶಸ್ವಿಯಾಗಿ ಪ್ರದರ್ಶನ ಕಾಣ್ತಿದೆ..








