ಮಂಗಳೂರು, ಮೇ 13 : ಕೊರೋನಾ ಮಹಾಮಾರಿಗೆ ದ.ಕ. ಜಿಲ್ಲೆಯಲ್ಲಿ ನಾಲ್ಕನೇ ಬಲಿಯಾಗಿದೆ. ಮಂಗಳೂರಿನ ಬೋಳೂರು ನಿವಾಸಿ 58 ವರ್ಷದ ಮಹಿಳೆ ಕೊರೋನಾದಿಂದ ಮೃತಪಟ್ಟಿದ್ದಾರೆ. ಮೆದುಳಿನ ಸೋಂಕಿನಿಂದ ಬಳಲುತ್ತಿದ್ದ ಇವರು ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರಿಗೆ ಎಪ್ರಿಲ್ 30 ರಂದು ಕೊರೋನಾ ಸೋಂಕು ದೃಢಪಟ್ಟಿದ್ದು, ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕದಿಂದ ಸೋಂಕು ಹರಡಿತ್ತು. ಈ ಮೊದಲು ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕದಿಂದ ಕೊರೋನಾ ತಗುಲಿದ್ದ ಬಂಟ್ವಾಳದ ಮೂವರು ಮೃತಪಟ್ಟಿದ್ದರು.
ಅಟ್ಟಿಕಾ ಗೋಲ್ಡ್ ಸಾಮ್ರಾಜ್ಯಕ್ಕೆ ಇಡಿ ಶಾಕ್: 4 ರಾಜ್ಯಗಳ 19 ಕಡೆ ಮಹಾ ದಾಳಿ, ಮಾಲೀಕ ಬಾಬು ಪರಾರಿ
ಹಳೆಯ ಚಿನ್ನ ಖರೀದಿ ಮತ್ತು ಅಡವಿಟ್ಟ ಚಿನ್ನ ಬಿಡಿಸಿಕೊಡುವ ಹೆಸರಿನಲ್ಲಿ ಜನಪ್ರಿಯವಾಗಿದ್ದ ಅಟ್ಟಿಕಾ ಗೋಲ್ಡ್ ಕಂಪನಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದಾರೆ. ಅಕ್ರಮ ಹಣ...








