ಮೋದಿ ಹಿಂದುತ್ವದ ಬಗ್ಗೆ ಎಲ್ಲಿಯೂ ಹೇಳಿಲ್ಲ : ಮತಾಂತರ ನಿಷೇಧ ವಿಧೇಯಕಕ್ಕೆ ಹಳ್ಳಿಹಕ್ಕಿ ವಿರೋಧ H Vishwanath saaksha tv
ಮೈಸೂರು : ಬೆಳಗಾವಿ ಅಧಿವೇಶನದಲ್ಲಿ ಮತಾಂತರ ವಿಧೇಯಕ ಮಂಡನೆ ವಿಚಾರವಾಗಿ ಎಂಎಲ್ ಸಿ ಹೆಚ್ ವಿಶ್ವನಾಥ್ ವಿರೋಧ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್ ವಿಶ್ವನಾಥ್, 12 ಶತಮಾನದಲ್ಲಿ ಸಮಾನತೆ ಬಗ್ಗೆ ಬಸವಣ ಮಾನವ ಸ್ಥಾಪನೆ ಮಾಡಿದರು.
ಜಾತಿ ಧರ್ಮ ಭೇದವಿಲ್ಲದೆ ಸಮಾನತೆ ಬಗ್ಗೆ ಹೇಳಿದ್ರು. ಭಾರತ ಬಹುತ್ವ ಉಳ್ಳದೇಶ. ಅಂಬೇಡ್ಕರ್ ಸಂವಿಧಾನವನ್ನು ನೀಡಿದ್ದಾರೆ.
ತಮ್ಮ ಇಷ್ಟ ಬಂದ ಧರ್ಮ, ದೇವರನ್ನು ಪೂಜೆ ಮಾಡಲು ಅವಕಾಶ ನೀಡಲಾಗಿದೆ. ಪ್ರಧಾನಿ ಮೋದಿ ಹಿಂದುತ್ವದ ಬಗ್ಗೆ ಎಲ್ಲಿಯೂ ಹೇಳಿಲ್ಲ.
ದೇಶದ ಮಹನಿಯರು ಹೇಳಿರುವುದು ಸಹಬಾಳ್ವೆ ಬಗ್ಗೆಯೆ ಹೇಳಿರೋದು. ಬಸವೇಶ್ವರ ಕಟ್ಟಿದ ಮಾನವ ಧರ್ಮವನ್ನ ಮುಖ್ಯಮಂತ್ರಿ ಹೊಡೆಯುವ ಕೆಲಸ ವಾಗಿರೋದು ವಿಪರ್ಯಾಸ ಎಂದು ಬೇಸರ ಹೊರಹಾಕಿದರು.
ಇದನ್ನು ಯಾರು ಮೆಚ್ಚುವುದಿಲ್ಲ. ಜಿಲ್ಲಾಧಿಕಾರಿಗಳಿಂದ ಜೈಲಿಗೆ ಹಾಕಿಸಲು ಸಾಧ್ಯವಾ…? ಆರ್.ಎಸ್.ಎಸ್ ನಾಯಕರು ಮಕ್ಕಳು ಮುಸ್ಲಿಂರ ಮಕ್ಕಳನ್ನು ಮದುವೆಯಾಗಿದ್ದಾರೆ.
ಇವರುಗಳನ್ನು ಜೈಲಿಗೆ ಹಾಕಲು ಸಾಧ್ಯವೇ..? ಸಿನಿಮಾ ನಟರು ಬ್ರಾಹ್ಮಣರನ್ನು ಮದುವೆಯಾಗಿದ್ದಾರೆ. ಇವರನ್ನ ಜೈಲಿಗೆ ಹಾಕಲು ಸಾಧ್ಯವಾ ಎಂದು ಪ್ರಶ್ನಿಸಿದರು.
ಇದೇ ವೇಳೆ ಮಠಾಧೀಶರ ಬಗ್ಗೆ ಕಿಡಿಕಾರಿದ ವಿಶ್ವನಾಥ್, ಬಸವಣ್ಣನ ತತ್ವವನ್ನ ಅಳವಡಿಸಿಕೊಂಡಿರುವ ಮಠಾಧಿಶರು ಯಾರು ಮಾತನಾಡುತ್ತಿಲ್ಲ.
ಚಿತ್ರದುರ್ಗದ ಮಠದವರು ಬಾಯಿ ಮುಚ್ಚಿಕುಳಿತಿದ್ದಾರೆ. ಸರ್ಕಾರದ ಅನುದಾನ ನೀಡಿ ಬಾಯಿ ಮುಚ್ಚಿಸಿದ್ದಾರೆ. ಅಹಿಂದ ಮಠಗಳು ಈ ಬಗ್ಗೆ ಮಾತನಾಡುತ್ತಿಲ್ಲ.
ನಿಮ್ಮ ಬಾಯಿ ಕಟ್ಟಿರುವುದು ಯಾರು.? ಈ ಬಗ್ಗೆ ಸಾಹಿತಿಗಳು ಚಿಂತಕರು ಬಾಯಿಬಿಡುತ್ತಿಲ್ಲ. ಇವರು ರಾಜ್ಯೋತ್ಸವ ಪ್ರಶಸ್ತಿಗಷ್ಟೆ ಸೀಮಿತವಾ.?
ಮಠಮಾನ್ಯಗಳನ್ನ ಭೇಟಿ ಮಾಡಿ, ಎಲ್ಲಾ ಧರ್ಮದ ಸ್ವಾಮಿಗಳನ್ನು ಭೇಟಿ ಮಾಡಿ ಎಲ್ಲರ ಸಲಹೆ ಸ್ವೀಕರಿಸಬೇಕು.
ಒಂದು ದೇಶಗಳಲ್ಲಿ ಕಾನೂನು, ಮಸೂದೆ ತರಬೇಕಂದ್ರೆ ಚರ್ಚೆ ಆಗಬೇಕು. ಈ ಕಾಯ್ದೆಯಿಂದ ರಾಜ್ಯ ಅಭಿವೃದ್ಧಿ ಆಗುತ್ತಾ. ಕಾಯ್ದೆ ಜಾರಿಗೆ ಇಷ್ಟೊಂದು ಅವಸರ ಯಾಕೆ ಎಂದು ಪ್ರಶ್ನಿಸಿದರು.









