ಡಿಕೆಶಿ ಕ್ರೈಸ್ತರತ್ತ ಬೊಟ್ಟು ಮಾಡುತ್ತಿದ್ದಾರೆ : ಬಿಜೆಪಿ ಆರೋಪ D k shivakumar
ಬೆಂಗಳೂರು : ಸದನದಲ್ಲಿ ಮಂಡಿಸಲಾದ #AntiConversionBill ನಲ್ಲಿ ಎಲ್ಲಿಯೂ ಕೂಡಾ ನಿರ್ಧಿಷ್ಟವಾಗಿ ಯಾವುದೇ ಧರ್ಮ, ಮತವನ್ನು ಉಲ್ಲೇಖಿಸಿಲ್ಲ. ಆದರೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕ್ರೈಸ್ತರನ್ನು ಕಾಯ್ದೆಗೆ ಸಮೀಕರಿಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಡಿಕೆಶಿಯವರೇ, ನೀವ್ಯಾಕೆ ಕ್ರೈಸ್ತರತ್ತ ಬೊಟ್ಟು ಮಾಡುತ್ತೀರಿ? ಕಾಂಗ್ರೆಸ್ ನಾಯಕರು #AntiConversionBill ಕ್ರೈಸ್ತ ಸಮುದಾಯದ ವಿರುದ್ಧವಾಗಿದೆ ಎಂದು ಬಿಂಬಿಸಿ, ಮತಾಂತರ ಮಾಡುತ್ತಿದ್ದದ್ದು ಕ್ರೈಸ್ತರೇ ಎಂದು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದ್ದಾರೆ. ಕಾಯ್ದೆಯೇ ನಿರ್ದಿಷ್ಟ ಧರ್ಮ, ಮತದವರು ಮತಾಂತರ ಮಾಡುತ್ತಿದ್ದಾರೆ ಎಂದು ಹೇಳದೇ ಇದ್ದರೂ ಡಿ.ಕೆ.ಶಿವಕುಮಾರ್ ಕ್ರೈಸ್ತರತ್ತ ಬೊಟ್ಟು ಮಾಡುತ್ತಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ #AntiConversionBill ಮತ್ತು ಗೋಹತ್ಯೆ ನಿಷೇಧವನ್ನು ವಾಪಾಸ್ ಪಡೆದುಕೊಳ್ಳುತ್ತೇವೆ ಎಂದು @DKShivakumar ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಬಹುಸಂಖ್ಯಾತ ಹಿಂದೂಗಳ ಬಗ್ಗೆ ಇರುವ ಕಾಳಜಿ ಇದರಿಂದಲೇ ಸ್ಪಷ್ಟವಾಗುತ್ತದೆ.@INCKarnataka ನೀವೇಕೆ ಬಹುಸಂಖ್ಯಾತರನ್ನು ಏಕೆ ನಿಕೃಷ್ಟವಾಗಿ ಕಾಣುತ್ತೀರಿ?
— BJP Karnataka (@BJP4Karnataka) December 23, 2021
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ #AntiConversionBill ಮತ್ತು ಗೋಹತ್ಯೆ ನಿಷೇಧವನ್ನು ವಾಪಾಸ್ ಪಡೆದುಕೊಳ್ಳುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಬಹುಸಂಖ್ಯಾತ ಹಿಂದೂಗಳ ಬಗ್ಗೆ ಇರುವ ಕಾಳಜಿ ಇದರಿಂದಲೇ ಸ್ಪಷ್ಟವಾಗುತ್ತದೆ. ಕಾಂಗ್ರೆಸ್ ನೀವೇಕೆ ಬಹುಸಂಖ್ಯಾತರನ್ನು ಏಕೆ ನಿಕೃಷ್ಟವಾಗಿ ಕಾಣುತ್ತೀರಿ ಎಂದು ಪ್ರಶ್ನಿಸಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ, ಹಿಂದೂಗಳ ಬಗ್ಗೆ ನಿಮ್ಮ ನಿಲುವನ್ನು ಮೊದಲು ಮೊದಲು ಸ್ಪಷ್ಟಪಡಿಸಿ. #AntiConversionBill ನಲ್ಲಿ ಇಲ್ಲದ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಏಕೆ ಜನರನ್ನು ದಾರಿ ತಪ್ಪಿಸುತ್ತೀರಿ? ರಾಜ್ಯದಲ್ಲಿ #AntiConversionBill ಜಾರಿಗೊಳಿಸಲು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪ್ರಯತ್ನ ನಡೆಸಿತ್ತು.
ಸದನದಲ್ಲಿ ಮಂಡಿಸಲಾದ #AntiConversionBill ನಲ್ಲಿ ಎಲ್ಲಿಯೂ ಕೂಡಾ ನಿರ್ಧಿಷ್ಟವಾಗಿ ಯಾವುದೇ ಧರ್ಮ, ಮತವನ್ನು ಉಲ್ಲೇಖಿಸಿಲ್ಲ.
ಆದರೂ ಕೆಪಿಸಿಸಿ ಅಧ್ಯಕ್ಷ @DKShivakumar ಕ್ರೈಸ್ತರನ್ನು ಕಾಯ್ದೆಗೆ ಸಮೀಕರಿಸುತ್ತಿದ್ದಾರೆ.
ಡಿಕೆಶಿಯವರೇ, ನೀವ್ಯಾಕೆ ಕ್ರೈಸ್ತರತ್ತ ಬೊಟ್ಟು ಮಾಡುತ್ತೀರಿ?
— BJP Karnataka (@BJP4Karnataka) December 23, 2021
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮತಾಂತರದ ವಿರುದ್ಧವಾಗಿ ಕರಡು ಸಿದ್ದಪಡಿಸಲು ಸೂಚನೆ ನೀಡಿ, ಕಾನೂನು ಇಲಾಖೆ ಸಿದ್ಧಪಡಿಸಿದ್ದ ಮಸೂದೆಗೆ ಸಹಿ ಕೂಡಾ ಮಾಡಿದ್ದರು. ಈಗ ಯಾವ ಕಾರಣಕ್ಕಾಗಿ ವಿರೋಧಿಸುತ್ತಿದ್ದೀರಿ ಎಂದು ಪ್ರಶ್ನಿಸಿದೆ.








