ಅಮಿತ್ ಶಾ ರಕ್ಷಣೆಗೆ ಮಹಿಳಾ ಕಮಾಂಡೋಗಳ ಯೋಜನೆ…
ಈಗೀಗ ಕೇಂದ್ರ ಸರ್ಕಾರ ಆರ್ಮಿಯ ಎಲ್ಲ ಹಂತಗಳಲ್ಲೂ ಮಹಿಳೆಯರಿಗೆ ಅವಕಾಶ ನೀಡುತ್ತಿದೆ. ಗಡಿ ಭದ್ರತೆಯನ್ನ ಕಾಯುವ ವರೆಗೂ ಯುದ್ದ ವಿಮಾನ ಚಲಾಯಿಸುವುದಕ್ಕೂ ಅವಕಾಶ ನೀಡಲಾಗುತ್ತಿದೆ. ಈಗ ಇನ್ನೊಂದು ಹೆಜ್ಜೆ ಮುಂದೆ ಹೊಗಿ ವಿವಿಐಪಿಗಳ ಭದ್ರತೆಗೂ ಮಹಿಳಾ ಕಮಾಂಡೋಗಳನ್ನ ನೇಮಿಸಲಾಗುತ್ತಿದೆ.
ಗೃಹ ಸಚಿವ ಅಮಿತ್ ಶಾ ಸೇರಿದಂತೆ Z+ ವರ್ಗದ ವಿವಿಐಪಿಗಳ ಭದ್ರತೆಯನ್ನು ಇನ್ನು ಮುಂದೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ಮಹಿಳಾ ಕಮಾಂಡೋಗಳು ನಿರ್ವಹಿಸುತ್ತಾರೆ. ಇದಕ್ಕಾಗಿ ಮಹಿಳಾ ವಿಶೇಷ ಪಡೆಯನ್ನು ಸಿಆರ್ ಪಿಎಫ್ ಸಿದ್ಧಪಡಿಸಿದೆ. ಇದು ಶಸ್ತ್ರಾಸ್ತ್ರಗಳಿಲ್ಲದೆ ಯಾವುದೇ ಬೆದರಿಕೆಯನ್ನು ತಟಸ್ಥಗೊಳಿಸುತ್ತದೆ.
ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ವಿವಿಐಪಿಗಳ ಭದ್ರತೆಗಾಗಿ 32 ಮಹಿಳಾ ಕಮಾಂಡೋಗಳನ್ನು ಒಳಗೊಂಡ ತನ್ನ ಮೊದಲ ತಂಡವನ್ನು ಸಿದ್ಧಪಡಿಸಿದೆ. ಈಗ ಈ ಕಮಾಂಡೋಗಳಿಗೆ Z+ ಭದ್ರತೆಯನ್ನು ನೀಡಿರುವ ದೆಹಲಿಯಲ್ಲಿ ನೆಲೆಸಿರುವ VVIPಗಳ ಭದ್ರತೆಯನ್ನು ವಹಿಸಲಾಗುವುದು.
ಆರಂಭದಲ್ಲಿ, ಅಮಿತ್ ಶಾ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ರಾಹುಲ್ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಅವರ ಪತ್ನಿ ಗುರುಶರಣ್ ಕೌರ್ ಅವರೊಂದಿಗೆ ಮಹಿಳಾ ಕಮಾಂಡೋಗಳನ್ನು ನಿಯೋಜಿಸಲಾಗುವುದು.
ಮೂಲಗಳ ಪ್ರಕಾರ, ಈ ಮಹಿಳಾ ಕಮಾಂಡೋಗಳು ತಮ್ಮ 10 ವಾರಗಳ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. ಈ ತರಬೇತಿಯಲ್ಲಿ ಕಮಾಂಡೋಗಳಿಗೆ ವಿವಿಐಪಿಗಳ ಭದ್ರತಾ ಕರ್ತವ್ಯಗಳನ್ನು ನಿರ್ವಹಿಸುವುದು, ಶಸ್ತ್ರಾಸ್ತ್ರಗಳಿಲ್ಲದೆ ಹೋರಾಡುವುದು, ದೇಹವನ್ನು ಶೋಧಿಸುವುದು ಮತ್ತು ವಿಶೇಷ ಶಸ್ತ್ರಾಸ್ತ್ರಗಳ ತರಬೆತಿಯನ್ನ ಕಲಿಸಲಾಗಿದೆ. ಜನವರಿಯಲ್ಲಿ ಕಮಾಂಡೋಗಳನ್ನು ಕರ್ತವ್ಯಕ್ಕೆ ನಿಯೋಜಿಸಬಹುದು.








