ಗ್ರೆಗ್ ಚಾಪೆಲ್… ಈ ಹೆಸರು ಹೇಳಿದ, ಕೇಳಿದ ತಕ್ಷಣ ಟೀಮ್ ಇಂಡಿಯಾದ ಕೆಲವು ಮಾಜಿ ಆಟಗಾರರು ಉರಿದು ಬೀಳ್ತಾರೆ. ಟೀಮ್ ಇಂಡಿಯಾದ ಕೋಚ್ ಆಗಿದ್ದ ಗ್ರೆಗ್ ಚಾಪೆಲ್ ವಿವಾದದಿಂದಲೇ ಹೆಚ್ಚು ಸುದ್ದಿಯಾಗಿದ್ದರು. ಯುವ ಆಟಗಾರರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಹಿರಿಯ ಕ್ರಿಕೆಟಿಗರನ್ನು ಕಡೆಗಣಿಸಿದ್ದರು ಅನ್ನೋ ಆರೋಪ ಅವರ ಮೇಲಿದೆ. ಅದ್ರಲ್ಲೂ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿಯವರನ್ನು ಮೂಲೆಗುಂಪು ಮಾಡಲು ಯತ್ನಿಸಿದ್ದರು, ಒಂದಾಗಿದ್ದ ಟೀಮ್ ಇಂಡಿಯಾವನ್ನು ಮನೆಯೊಂದು ಮೂರು ಬಾಗಿಲು ಮಾಡಲು ಯತ್ನಿಸಿದ್ದರು ಅನ್ನೋ ಅಪವಾದ ಗ್ರೆಗ್ ಚಾಪೆಲ್ ಮೇಲಿದೆ. ಹೀಗಾಗಿಯೇ ತೆಂಡುಲ್ಕರ್ ತಮ್ಮ ಬಯೋಗ್ರಾಫಿಯಲ್ಲಿ ಚಾಪೆಲ್ ಅವರನ್ನು ರಿಂಗ್ ಮಾಸ್ಟರ್ ಅಂತ ಉಲ್ಲೇಖ ಮಾಡಿದ್ದರು.
ಅದು ಏನೇ ಇರಲಿ, ಗ್ರೆಗ್ ಚಾಪೆಲ್ ಟೀಮ್ ಇಂಡಿಯಾದ ಯುವ ಆಟಗಾರರಿಗೆ ಪ್ರೋತ್ಸಾಹ ನೀಡುತ್ತಿದ್ದರು ಅನ್ನೋದನ್ನು ಮರೆಯುವ ಹಾಗಿಲ್ಲ. ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ದ್ರಾವಿಡ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಕೆಲವೊಂದು ಐತಿಹಾಸಿಕ ಸಾಧನೆಗಳನ್ನು ಮಾಡಿದೆ. ಯುವ ಆಟಗಾರರನ್ನು ಬೆಳಕಿಗೆ ತರುವಲ್ಲಿ ತಕ್ಕ ಮಟ್ಟಿನ ಪ್ರಯತ್ನವನ್ನು ಮಾಡಿದ್ದರು ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಹೌದು, ಇಂದು ಕೂಡ ವಿಶ್ವಕ್ರಿಕೆಟ್ ನಲ್ಲಿ ಬೆಸ್ಟ್ ಫಿನಿಶರ್ ಯಾರು ಅನ್ನೋ ಪ್ರಶ್ನೆಗೆ ಉತ್ತರ ಕೇಳಿ ಬರುವುದು ಒಂದೇ ಹೆಸರು. ಅದು ಮಹೇಂದ್ರ ಸಿಂಗ್ ಧೋನಿ. ಟೀಮ್ ಇಂಡಿಯಾ ಪರ ಸಾಮಾನ್ಯವಾಗಿ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಧೋನಿ, ರೋಚಕವಾಗಿ ಪಂದ್ಯಗಳನ್ನು ಗೆಲ್ಲಿಸಿಕೊಡುತ್ತಿದ್ದರು. ಹಾಗೇ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೂ ಅಚ್ಚರಿಯ ರೀತಿಯಲ್ಲಿ ಜಯವನ್ನು ಒದಗಿಸಿಕೊಡುತ್ತಿದ್ದರು.
ಅಂದ ಹಾಗೇ, ಧೋನಿಯ ಈ ಯಶಸ್ಸಿನ ಹಿಂದಿನ ರೂವಾರಿ ಯಾರು ಗೊತ್ತಾ ? ಹಾಗಂತ ಧೋನಿ ಹೇಳುತ್ತಿಲ್ಲ. ಬದಲಾಗಿ ಗ್ರೆಗ್ ಚಾಪೆಲ್ ಹೇಳ್ತಾರೆ. ಟೀಮ್ ಇಂಡಿಯಾದ ಗುರುವಾಗಿದ್ದಾಗ ಚಾಪೆಲ್ ಧೋನಿಗೆ ಕೆಲವೊಂದು ಉಪಯುಕ್ತ ಸಲಹೆಗಳನ್ನು ನೀಡಿದ್ರಂತೆ. ಅದನ್ನು ಧೋನಿ ಪರಿಪಾಲಿಸಿಕೊಂಡಿದ್ದಾರೆ ಅಂತ ಸ್ವತಃ ಚಾಪೆಲ್ ಅವರೇ ಹೇಳಿಕೊಂಡಿದ್ದಾರೆ. ಧೋನಿಯ ಬ್ಯಾಟಿಂಗ್ ವೈಖರಿಯನ್ನು ನಾನು ಮೊದಲ ಬಾರಿ ನೋಡಿದಾಗಲೇ ಅಂದುಕೊAಡಿದ್ದೆ. ಭಾರತದ ರೋಮಾಂಚಕಾರಿ ಬ್ಯಾಟ್ಸ್ ಮೆನ್ ಅಂತ. ಯಾಕಂದ್ರೆ ಧೋನಿಯ ಬ್ಯಾಟಿಂಗ್ ಶೈಲಿಯಲ್ಲಿ ಅಂತಹುದ್ದೊAದು ಶಕ್ತಿ ಇತ್ತು. ಅಷ್ಟೇ ಅಲ್ಲ, ಕ್ರಿಕೆಟ್‌ನ ಗ್ರಾಮರ್‌ಗಳಿಗೆ ವಿರುದ್ಧವಾಗಿ ಧೋನಿ ಬ್ಯಾಟಿಂಗ್ ಮಾಡುತ್ತಿದ್ದರು. ಶ್ರೀಲಂಕಾ ವಿರುದ್ಧ ಸ್ಪೋಟಕವಾಗಿ ಸಿಡಿಸಿದ್ದ ೧೮೩ ರನ್‌ಗಳ ಬ್ಯಾಟಿಂಗ್ ಅಬ್ಬರ ನನಗೆ ಇನ್ನು ನೆನಪಿದೆ. ಅದೊಂದು ಶ್ರೇಷ್ಠ ಇನ್ಸಿಂಗ್ಸ್. ತನ್ನ ರಟ್ಟೆಯ ಶಕ್ತಿಯಿಂದಲೇ ಬ್ಯಾಟಿಂಗ್ ಮಾಡುವ ಧೋನಿಂತಹ ಆಟಗಾರರನ್ನು ನಾನು ಎಂದೂ ನೋಡಿಲ್ಲ ಅಂತ ಚಾಪೆಲ್ ಧೋನಿಯವರನ್ನು ಗುಣಗಾನ ಮಾಡಿದ್ದಾರೆ.
ಬಳಿಕ ಲಂಕಾ ವಿರುದ್ಧದ ಮುಂದಿನ ಪಂದ್ಯದಲ್ಲೂ ಅಷ್ಟೇ. ಗೆಲ್ಲಲು ಬೇಕಾಗಿದ್ದು ೨೬೦ ರನ್‌ಗಳು ಮಾತ್ರ. ಆಗ ನಾನು ಧೋನಿಗೆ ಸಲಹೆ ನೀಡಿದ್ದೆ. ನೀನು. ಪ್ರತಿ ಚೆಂಡನ್ನು ಬೌಂಡರಿ ದಾಟಿಸುವ ಪ್ರಯತ್ನ ಮಾಡುವ ಬದಲು ಮೈದಾನ ಮೂಲೆ ಮೂಲೆಗೆ ಯಾಕೆ ಚೆಂಡನ್ನು ಹೊಡೆಯುತ್ತಿಲ್ಲ ಎಂದು. ಅದೇ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲಲು ಇನ್ನೂ ೨೦ ರನ್‌ಗಳು ಬೇಕಿದ್ದವು. ಆಗ ಧೋನಿ ೧೨ನೇ ಆಟಗಾರನಾಗಿದ್ದ ಆರ್‌ಪಿ ಸಿಂಗ್ ಮೂಲಕ ಸಿಕ್ಸರ್ ಬಾರಿಸಬಹುದಾ ಅಂತ ಕೇಳಿಕೊಂಡಿದ್ದರು. ಆದ್ರೆ ನಾನು ಗೆಲ್ಲಲು ಬೆರಳೆಣಿಕೆಯ ರನ್ ಬೇಕಾದಾಗ ಸಿಕ್ಸ್ ಹೊಡಿಯಲಿ ಅಂತ ಹೇಳಿಕಳಿಸಿದ್ದೆ. ಧೋನಿ ಅ ಪಂದ್ಯದಲ್ಲಿ ಸಿಕ್ಸರ್ ಬಾರಿಸುವ ಮೂಲಕವೇ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದರು ಎಂದು ಚಾಪೆಲ್ ಹೇಳಿದ್ದಾರೆ. ಧೋನಿ ಬೆಸ್ಟ್ ಫಿನಿಶರ್ ಅಂತ ಚಾಪೆಲ್ ಹೇಳಿದ್ದಾರೆ.
ಜಿಬಿಎ ಚುನಾವಣೆಗೆ ಮುಹೂರ್ತ ಫಿಕ್ಸ್!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ಸಂಬಂಧಿಸಿದ ಮಹತ್ವದ ಬೆಳವಣಿಗೆ ನಡೆದಿದೆ. ಮುಂದಿನ ಜೂನ್ 14 ರಿಂದ 24ರ ಒಳಗೆ ಚುನಾವಣಾ ದಿನಾಂಕ ಘೋಷಣೆ ಮಾಡುವಂತೆ ರಾಜ್ಯ ಚುನಾವಣಾ...








