ಮಚ್ಚಿನಿಂದ ಕೊಚ್ಚಿ ಮಹಿಳೆಯ ಬರ್ಬರ ಕೊಲೆ ramanagara saaksha tv
ರಾಮನಗರ : ಇಂದು ಬೆಳ್ಳಂ ಬೆಳಿಗ್ಗೆ ರಾಮನಗರದಲ್ಲಿ ನೆತ್ತರ ಹರಿದಿದೆ, ಕೌಟುಂಬಿಕ ಕಲಹದ ಕಾರಣ ವ್ಯಕ್ತಿಯೋರ್ವ ಮಹಿಳೆಯನ್ನ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ತೂಬಿನಕೆರೆ ಗ್ರಾಮದಲ್ಲಿ ನಡೆದಿದೆ. 65 ವರ್ಷದ ಜಯಮ್ಮ ಎಂಬುವರು ಕೊಲೆಯಾದ ದುರ್ದೈವಿ.
ಕೌಟುಂಬಿಕ ಕಲಹದ ಹಿನ್ನೆಲೆ ಸಂಬಂಧಿಕರೊಬ್ಬರು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಜಯಮ್ಮನ ಮಗ ಸಿದ್ದರಾಜು ಮೇಲೆ ಕೂಡ ಮಚ್ಚಿನಿಂದ ಹೊಡೆದು ಹಲ್ಲೆ ಮಾಡಲಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಈ ಕುರಿತು ಸ್ಥಳೀಯರು ಅಕ್ಕೂರು ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.









