ಕುತ್ತಿಗೆ ಪಟ್ಟಿ ಹಿಡಿದು ಫುಡ್ ಡಿಲೆವರಿ ಬಾಯ್ ನ ಹೊರದಬ್ಬಿದ ಮಹಿಳೆ…
ಪುಡ್ ಡೆಲೆವರಿ ಮಾಡಲು ತಡವಾಗುತ್ತಿದೆ ಆರ್ಡರ್ ಬೇಗ ಕೊಡಿ ಎಂದಿದ್ದಕ್ಕೆ ಪುಡ್ ಡೆಲೆವರಿ ಬಾಯ್ ಕುತ್ತಿಗೆ ಹಿಡಿದು ರೆಸ್ಟೋರೆಂಟ್ ನ ಮಹಿಳಾ ಸಿಬ್ಬಂದಿ ಒಬ್ಬರು ಹೊರದಬ್ಬಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ವೈಟ್ ಫೀಲ್ಡ್ ಬಳಿ ಇರುವ ಲಿಯಾನ್ ಗ್ರಿಲ್ ರೆಸ್ಟೋರೆಂಟ್ ನಲ್ಲಿ ಸಂಜಯ್ ಎನ್ನುವ ಫುಡ್ ಡಿಲೆವರಿ ಬಾಯ್ ” ಪುಡ್ ಆರ್ಡರ್ ಬೇಗ ಕೊಡಿ ನಾನು ಗ್ರಾಹಕರಿಗೆ ತಲುಪಿಸುವು ವಿಳಂಬವಾಗುತ್ತಿದೆ” ಎಂದು ಕೇಳಿದ್ದಕ್ಕೆ ಸಿಟ್ಟಾದ ಮಹಿಳಾ ಸಿಬ್ಬಂದಿ ಆತನ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ಮಾತಿಗೆ ಮಾತು ಬೆಳೆದು ಡಲೆವರಿ ಬಾಯ್ ನ ಕುತ್ತಿಗೆ ಪಟ್ಟಿ ಹಿಡಿದು ಮಹಿಳೆ ಆತನನ್ನ ರೆಸ್ಟೋರೆಂಟ್ ನಿಂದ ಹೊರದಬ್ಬಿದ್ದಾಳೆ.
ಈ ಘಟನೆ ಬಳಿಕ ಸಂಜಯ್ ಕನ್ನಡ ಪರ ಸಂಘಟನೆಗಳ ಮೊರೆ ಹೋಗಿದ್ದಾನೆ. ಸಂಘಟನೆಗಳು ರೆಸ್ಟೋರೆಂಟ್ ಮಾಲಿಕರನ್ನ, ಸಂಪರ್ಕಿಸಿ ಮ್ಯಾನೇಜರ್ ಅವರನ್ನ ಬೇಟಿಯಾಗಿದ್ದಾರೆ. ಮಹಿಳಾ ಕೃತ್ಯ ಗಮನಿಸಿದ ಮ್ಯಾನೇಜರ್ ಮಹಿಳಾ ಸಿಬ್ಬಂದಿಯನ್ನ ಕೆಲಸದಿಂದ ತೆಗೆದು ಹಾಕಿದ್ದಾರೆ. ಡಿಲಡವರಿ ಬಾಯ್ ಗೆ ಒಂದು ದಿನದ ಸಂಬಂಳ ನೀಡಿದ್ದಾರೆ. ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ








