ಸಿದ್ದರಾಮಯ್ಯನವರೇ ನೀವು ಕಣ್ಣುಮುಚ್ಚಿ ಸಹಿ ಹಾಕಿದ್ದೇಕೆ..? Siddaramaiah saaksha tv
ಬೆಂಗಳೂರು : ಮತಾಂತರ ನಿಯಂತ್ರಣ ಕರಡು ಮಸೂದೆಗೆ ಸಹಿ ಮಾಡಿದ್ದೆ ಎಂಬ ವಿಪಕ್ಷ ಸಿದ್ದರಾಮಯ್ಯ ಹೇಳಿಕೆ ರಾಜ್ಯ ಬಿಜೆಪಿಗೆ ಆಹಾರವಾಗಿದೆ.
ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಇಟ್ಟುಕೊಂಡು ಟ್ವಿಟ್ಟರ್ ನಲ್ಲಿ ಬಿಜೆಪಿ ಪ್ರಶ್ನೆಗಳ ಸುರಿಮಳೆ ಗೈದಿದೆ.
ಇದೇನು ಸಿದ್ದರಾಮಯ್ಯನವರೇ!?? ಅಂದು ಮತಾಂತರ ನಿಯಂತ್ರಣ ಕರಡು ಮಸೂದೆಗೆ ಸಹಿ ಮಾಡಿ, ಇಂದು ಈಗ ಸದನದ ಒಳಗೂ, ಹೊರಗೂ ಹೋರಾಟ ಮಾಡುತ್ತೇವೆ ಎಂದು ನಾಟಕ ಮಾಡುತ್ತೀರಿ. ರಾಜ್ಯದ ಜನರನ್ನು ಮೂರ್ಖರನ್ನಾಗಿ ಮಾಡುವ ನಿಮ್ಮ ಆಟ ಬಯಲಾಗಿದೆ.
ಮಾನ್ಯ @siddaramaiah ಅವರೇ,
ಸಹಿ ಮಾಡಿದ ಮಾತ್ರಕ್ಕೆ ಒಪ್ಪಿದ್ದೆ ಎಂದಲ್ಲ ನಿಮ್ಮ ಹೇಳಿಕೆಯ ಹಿಂದಿನ ಮರ್ಮವೇನು?
ನಿಮಗೆ ಸಹಿ ಮಾಡುವಂತೆ ಒತ್ತಾಯಿಸಿದ್ದು ಯಾರು?
ಕದ್ದುಮುಚ್ಚಿ ಕಾಯ್ದೆ ತಂದಿದ್ದೀರಿ ಎಂದು ಆರೋಪಿಸುವ ನೀವು ಕಣ್ಣುಮುಚ್ಚಿ ಸಹಿ ಹಾಕಿದ್ದೇಕೆ?#SayNoToConversion pic.twitter.com/gZqz81agLE
— BJP Karnataka (@BJP4Karnataka) December 24, 2021
ಮಾನ್ಯ ಸಿದ್ದರಾಮಯ್ಯ ಅವರೇ, ಸಹಿ ಮಾಡಿದ ಮಾತ್ರಕ್ಕೆ ಒಪ್ಪಿದ್ದೆ ಎಂದಲ್ಲ ನಿಮ್ಮ ಹೇಳಿಕೆಯ ಹಿಂದಿನ ಮರ್ಮವೇನು? ನಿಮಗೆ ಸಹಿ ಮಾಡುವಂತೆ ಒತ್ತಾಯಿಸಿದ್ದು ಯಾರು? ಕದ್ದುಮುಚ್ಚಿ ಕಾಯ್ದೆ ತಂದಿದ್ದೀರಿ ಎಂದು ಆರೋಪಿಸುವ ನೀವು ಕಣ್ಣುಮುಚ್ಚಿ ಸಹಿ ಹಾಕಿದ್ದೇಕೆ ಎಂದು ಕುಟುಕಿದೆ.








