ಲಾಕ್ ಡೌನ್ ಆಗಬಹುದು, ಯುಪಿಯಲ್ಲಿ ರಾಷ್ಟ್ರಪತಿ ಆಡಳಿತ ಬರಬಹುದು : ಸುಬ್ರಮಣಿಯನ್ ಸ್ವಾಮಿ ಭವಿಷ್ಯ
ನವದೆಹಲಿ : ಸದಾ ವಿವಾದಾತ್ಮಕ ಹೇಳಿಕೆಗಳು , ಸ್ವಪಕ್ಷದ ವಿರುದ್ಧವೇ ಹೇಳಿಕೆ ನೀಡ್ತ , ಹಾಗೇ ಇನ್ನೂ ಕೆಲ ವಿಚಾರವಾಗಿ ಸುದ್ದಿಯಲ್ಲೇ ಇರುವ ರಾಜ್ಯಸಭೆಯ ಬಿಜೆಪಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ೀಗ ಮತ್ತೊಂದು ಹೇಳಿಕೆ ನೀಡಿ ಹಲ್ ಚಲ್ ಸೃಷ್ಟಿಸಿದ್ದಾರೆ..
ದೇಶದಲ್ಲಿ ಲಾಕ್‌ಡೌನ್ ಅದರೂ, ಉತ್ತರ ಪ್ರದೇಶಕ್ಕೆ ರಾಷ್ಟ್ರಪತಿ ಆಳ್ವಿಕೆ ಬಂದರೂ ಅಚ್ಚರಿಯಿಲ್ಲ ಎಂದಿದ್ದಾರೆ.. ಅವರ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ..
ಟ್ವೀಟ್ ಮಾಡಿರುವ ಸ್ವಾಮಿ, ಒಮಿಕ್ರಾನ್ ನಿಂದ ಲಾಕ್ ಡೌನ್ ಆಗಬಹುದು ಮತ್ತು ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿ ಚುನಾವಣೆಯನ್ನು ಸೆಪ್ಟೆಂಬರ್ ಗೆ ಮುಂದೂಡಿದ್ರೂ ಮುಂದೂಡಬಹುದು, ಇದಕ್ಕೆ ಆಶ್ಚರ್ಯಪಡಬೇಕಿಲ್ಲ. ಈ ವರ್ಷದ ಆರಂಭದಲ್ಲಿ ನೇರವಾಗಿ ಮಾಡಲಾಗದ್ದನ್ನು, ಮುಂದಿನ ವರ್ಷದ ಆರಂಭದಲ್ಲಿ ಪರೋಕ್ಷವಾಗಿ ಮಾಡಬಹುದು ಎಂದು ಬರೆದುಕೊಂಡಿದ್ದಾರೆ. ಅವರ ಈ ಹೇಳಿಕೆ ಬಹಳ ಮಾರ್ಮಿಕವಾಗಿದ್ದು, ಜನರನ್ನ ಯೋಚನೆಗೆ ಸಿಲುಕಿಸಿದೆ..
ಇದಕ್ಕೆ ಪ್ರತಿಕ್ರಿಯಿಸಿರುವ ಟ್ವಿಟರ್ ಬಳೆದಾರರೊಬ್ಬರು ಮೋದಿಯವರು ಯೋಗಿ ಆದಿತ್ಯನಾಥರನ್ನು ವಜಾ ಮಾಡಲು ಬಯಸಿದ್ದರು. ಆದರೆ ಅದನ್ನು ನೇರವಾಗಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ರಾಷ್ಟ್ರಪತಿ ಆಡಳಿತವನ್ನು ಜಾರಿ ಮಾಡಿ ಯೋಗಿಯವರನ್ನು ಪಕ್ಕಕ್ಕೆ ಸರಿಸುವ ಪ್ಲಾನ್ ನಲ್ಲಿರಬಹುದು ಎಂದಿದ್ದಾರೆ.









