ಮಕ್ಕಳಿಗೆ ಪರೀಕ್ಷೆಯಲ್ಲಿ ಸೈಫ್ – ಕರೀನಾ ಪುತ್ರನ ಬಗ್ಗೆ ಪ್ರಶ್ನೆ : ಇದು ಎಷ್ಟು ಸರಿ..???
ಸಿನಿಮಾ ಮಂದಿಗೆ ಫ್ಯಾನ್ಸ್ ಇರುತ್ತಾರೆ ನಿಜ… ಸಿನಿಮಾರಂಗದವರು ದೊಡ್ಡ ಸಾಧನೆ ಮಾಡಿ , ಪ್ರೇರೇಪಣೆಯಾಗಿದ್ದರೆ ಅಂತಹ ದೊಡ್ಡ ದೊಡ್ಡ ಗಣ್ಯ ವ್ಯಕ್ತಿಗಳ ಬಗ್ಗೆ ಪಠ್ಯದಲ್ಲೂ ಉಲ್ಲೇಖವಾಗುತ್ತೆ.. ಆದ್ರೆ ಇಲ್ಲೊಂದು ಶಾಲೆಯಲ್ಲಿ ಮಕ್ಕಳಿಗೆ ಪರೀಕ್ಷೆಯಲ್ಲಿ ನೀಡಲಾಗಿದ್ದ ಪ್ರಶ್ನೆ ಪತ್ರಿಕೆಯಲ್ಲಿ ಬಾಲಿವುಡ್ ನಟರಾದ ಸೈಫ್ ಅಲಿಖಾನ್ ಹಾಗೂ ಕರೀನಾ ಕಪೂರ್ ಪುತ್ರನ್ನ ಹೆಸರು ಏನೆಂಬ ಪ್ರಶ್ನೆ ಕೇಳಿದ್ದು, ಇದರ ಫೋಟೋಗಳು ಈಗ ವೈರಲ್ ಆಗ್ತಿದೆ.
ಅಂದ್ಹಾಗೆ ಇಂತಹ ಘಟನೆ ನಡೆದಿರುವುದು ಮಧ್ಯಪ್ರದೇಶದಲ್ಲಿ.. ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಅವರ ಮಗ ತೈಮೂರ್ ಅಲಿ ಖಾನ್ ಕುರಿತಾಗಿ ಮಧ್ಯಪ್ರದೇಶದ ಖಾಸಗಿ ಶಾಲೆಯಲ್ಲಿ 6ನೇ ತರಗತಿಗೆ ನಡೆಸಲಾದ ಪರೀಕ್ಷೆಯಲ್ಲಿ ಪ್ರಶ್ನೆ ಕೇಳಲಾಗಿದ್ದು, ಇದು ಹಲವರನ್ನ ಕೆರಳಿಸಿದೆ.. ಸೋಷಿಯಲ್ ಮೀಡಿಯಾದಲ್ಲಂತೂ ಇದನ್ನೇ ಬಳಸಿ ಕರೀನಾ ಕಪೂರ್ ಫ್ಯಾಮಿಲಿಯನ್ನ ಟ್ರೋಲ್ ಮಾಡಲಾಗ್ತಿದೆ..
ಅವರೇನು ಮಹಾನ್ ಸಾಧನೆ ಮಾಡಿದ್ಧಾರೆ , ಹೋರಾಟ ಮಾಡಿದ್ದಾರೆ ಅಂತ ಅವರ ಬಗ್ಗೆ ಮಕ್ಕಳಿಗೆ ಪ್ರಶ್ನೆ ಕೇಳಲಾಗಿದೆ ಎಂದು ಆಕ್ರೋಶ ಹೊರಹಾಕ್ತಿದ್ದಾರೆ.. ಖಾಸಗಿ ಶಾಲೆಯೊಂದರಲ್ಲಿ 6ನೇ ತರಗತಿ ಮಕ್ಕಳಿಗೆ ಪ್ರಚಲಿತ ಘಟನೆಗಳು ವಿಷಯದ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಮಗನ ಪೂರ್ತಿ ಹೆಸರು ಏನು? ಎಂದು ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆ ಪತ್ರಿಕೆಯ ಫೋಟೋ ಈಗ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ.








