ಮೊದಲ ಟೆಸ್ಟ್ ಪಂದ್ಯದಲ್ಲಿ ರಹಾನೆಗೆ ಚಾನ್ಸ್.. ದ್ರಾವಿಡ್ ಹೇಳಿದ್ದೇನು..?
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಡಿಸೆಂಬರ್ 26 ರಿಂದ (ಬಾಕ್ಸಿಂಗ್ ಡೇ) ಆಡಲಿದೆ.
ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಶನಿವಾರ ಮಾಧ್ಯಮಗಳೊಂದಿಗೆ ವರ್ಚುವಲ್ ಕಾನ್ಫರೆನ್ಸ್‌ನಲ್ಲಿ ಮಾತನಾಡಿದರು.
ಈ ವೇಳೆ ಮೊದಲ ಟೆಸ್ಟ್ ಗೆ ಟೀಂ ಇಂಡಿಯಾದ ಪ್ಲೇಯಿಂಗ್ ಹೇಗಿರಲಿದೆ ಎಂಬ ಪ್ರಶ್ನೆಗೆ ದ್ರಾವಿಡ್ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ.
ಅವರೆಲ್ಲರೂ ವೃತ್ತಿಪರ ಕ್ರಿಕೆಟಿಗರು. ಆಡುವ ಹನ್ನೊಂದರ ಬಳಗಕ್ಕೆ ಯಾರನ್ನ ಆಯ್ಕೆ ಮಾಡಿಕೊಳ್ಳಬೇಕು ಅನ್ನೋದು ಸಮಸ್ಯೆಯಾಗಿದೆ.
ಆದರೆ ತಂಡದಲ್ಲಿ ಕೇವಲ 11 ಆಟಗಾರರಿಬೇಕು ಎಂಬ ನಿಯಮದಿಂದ ಯಾರನ್ನಾದರೂ ಬೆಂಚ್‌ಗೆ ಸೀಮಿತಗೊಳಿಸಬೇಕು.
ನಮ್ಮ ಆಟಗಾರರು ಈ ವಿಷಯವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಪ್ರಾಕ್ಟೀಸ್ ಮಾಡುವಾಗ ಮೊದಲ ಟೆಸ್ಟ್ ಗೆ ಆಡುವ XI ಹೇಗೆ ಇರಲಿದೆ ಎಂಬುದರ ಕುರಿತು ನಮಗೆ ಸ್ಪಷ್ಟತೆ ಇದೆ.
ಆದರೆ ಪ್ಲೇಯಿಂಗ್ ಇಲೆವೆನ್ ಅನ್ನು ಬಹಿರಂಗಪಡಿಸಲು ಬಯಸುವುದಿಲ್ಲ. ಹಾಗೆ ಮಾಡಿದರೆ ಎದುರಾಳಿಗೆ ಅವಕಾಶ ನೀಡಿದಂತಾಗುತ್ತದೆ ಎಂದಿದ್ದಾರೆ.
ನಿರ್ಣಾಯಕ ಐದನೇ ಸ್ಥಾನದಲ್ಲಿ ರಹಾನೆ, ವಿಹಾರಿ ಮತ್ತು ಅಯ್ಯರ್ ಯಾರನ್ನು ನೋಡಬಹುದು ಎಂಬ ಪ್ರಶ್ನೆಗೆ ದ್ರಾವಿಡ್, “ನಾವು ಈಗಾಗಲೇ ಎಲ್ಲಾ ಆಟಗಾರರೊಂದಿಗೆ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಚರ್ಚಿಸಿದ್ದೇವೆ.
ವಿಶೇಷವಾಗಿ ಪೂಜಾರ, ರಹಾನೆ ಅವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಬಹಳ ಚರ್ಚೆ ನಡೆಸಿದ್ದೇವೆ.
ಆದರೆ ಮೊದಲ ಟೆಸ್ಟ್ ನಲ್ಲಿ ಐದನೇ ಸ್ಥಾನದಲ್ಲಿ ಯಾರು ಬ್ಯಾಟ್ ಮಾಡುತ್ತಾರೆ ಎಂದು ನಾನು ಈಗ ಹೇಳುವುದಿಲ್ಲ ಎಂದರು.









