ಅಫ್ಗಾನ್ : ತಾಲಿಬಾನ್ ಸರ್ಕಾರದ ಹಣಕಾಸು ಇಲಾಖೆಯ ಉಪ ಸಚಿವ ಅಬ್ದುಲ್ ಲತೀಫ್
ಅಫ್ಗಾನ್ ನಲ್ಲಿ ಅಕ್ರಮವಾಗಿ ಸರ್ಕಾರವನ್ನ ಉರುಳಿಸಿ ಆಡಳಿತನ್ನ ತನ್ನ ಕೈಗೆ ತೆಗೆದುಕೊಂಡಿರುವ ನರ ರೂಪಿ ರಾಕ್ಷಸರಾದ ತಾಲಿಬಾನಿಗಳು ಸರ್ಕಾರ ರಚಿಸಿ ಅಧಿಕಾರ ಮಾಡ್ತಾ ಜನರ ಮೇಲೆ ಅದ್ರಲ್ಲೂ ಮಹಿಳೆಯರ ಮೇಲೆ ದಬ್ಬಾಳಿಕೆ ಮಾಡ್ತಿದ್ದಾರೆ.. ಮಹಿಳೆಯರ ಸಂಪೂರ್ಣ ಸ್ವಾತಂತ್ರವನ್ನೇ ಕಸಿದುಕೊಂಡಿದ್ದಾರೆ..
ಇದೇ ತಾಲಿಬಾನ್ ಸರ್ಕಾರದ ಹಣಕಾಸು ಇಲಾಖೆಯ ಉಪ ಸಚಿವರಾಗಿ ಅಬ್ದುಲ್ ಲತೀಫ್ ನಜಾರಿ ನೇಮಕಗೊಂಡಿದ್ದಾರೆ. ನಜಾರಿ ಪಿಎಚ್ಡಿ ಅಧ್ಯಯನ ಪೂರೈಸಿದ್ದು ಕಾಬೂಲ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಖಾಮಾ ಪ್ರೆಸ್ ವರದಿ ಮಾಡಿದೆ. ನಜಾರಿ ಅವರನ್ನು ಹಣಕಾಸು ಇಲಾಖೆಯ ಉಪ ಸಚಿವರನ್ನಾಗಿ ನೇಮಿಸಿರುವ ಬಗ್ಗೆ ತಾಲಿಬಾನ್ ವಕ್ತಾರ ಹಾಗೂ ಮಾಹಿತಿ ಮತ್ತು ಸಂಸ್ಕೃತಿ ಇಲಾಖೆಯ ಉಪ ಸಚಿವ ಜಬೀವುಲ್ಲಾ ಮುಜಾಹಿದ್ ತಿಳಿಸಿದ್ದಾರೆ. ತಾಲಿಬಾನ್ ನ ಪರಮೋಚ್ಚ ನಾಯಕ ಹಯಬತ್ ಉಲ್ಲಾ ಅಖುನ್ ಜಾದಾ ಅವರ ಆದೇಶದಂತೆ ಈ ನಿರ್ಧಾರ ಕೈಗೊಂಡಿರುವುದಾಗಿಯೂ ಉಲ್ಲೇಖಿಸಿದ್ದಾರೆ.