ಮೈಸೂರು, ಮೇ 13: ರಾಜ್ಯದ ಸಾಂಸ್ಕೃತಿಕ ನಗರ ಮೈಸೂರು ಜಿಲ್ಲೆಯು ರೆಡ್ ಝೋನ್ ನಿಂದ ಆರೆಂಜ್ ಝೋನ್ ಕಡೆ ಮುಖ ಮಾಡಿದೆ. ಕಳೆದ 14 ದಿನಗಳಿಂದ ಮೈಸೂರಿನಲ್ಲಿ ಯಾವುದೇ ಹೊಸ ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿಲ್ಲ. ಹಾಗಾಗಿ ನಾಳೆಯಿಂದ ಮೈಸೂರು ಆರೆಂಜ್ ಜೋನ್ ವಲಯಕ್ಕೆ ಶಿಫ್ಟ್ ಆಗಲಿದೆ. ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು 90 ಕೇಸುಗಳಲ್ಲಿ 88 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದು, ಪ್ರಸ್ತುತ ಇಬ್ಬರು ಮಾತ್ರ ನಗರದ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಗುಣಮುಖರಾಗಿ ಬಿಡುಗಡೆ ಹೊಂದಿದರೆ ಮೈಸೂರು ಕೊರೋನಾ ಮುಕ್ತವಾಗಲಿದೆ. ಇದರಿಂದಾಗಿ ಮೈಸೂರು ನಗರ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೂಡಾ ಲಾಕ್ ಡೌನ್ ಸಡಿಲವಾಗುವ ಸೂಚನೆಗಳು ಇವೆ.
ಕಳೆದ ಎರಡು ದಿನಗಳಿಂದ 165 ಜನರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದ್ದು, ಕ್ವಾರೆಂಟೈನ್ ನಲ್ಲಿರುವವರ ಸಂಖ್ಯೆ 433 ಕ್ಕೆ ಏರಿಕೆಯಾಗಿದೆ. ಈ ಮಧ್ಯೆ ಮೈಸೂರು ಜಿಲ್ಲಾಡಳಿತ ಕೂಡ ವಿದೇಶದಿಂದ ಬರುವವರನ್ನು ಕ್ವಾರೆಂಟೈನ್ ಗೆ ಒಳಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ಆನೇಕಲ್ನಲ್ಲಿ ಬಿಹಾರ ಕಾರ್ಮಿಕರ ನಡುವೆ ಕುಡಿದ ನಶೆಯಲ್ಲಿ ಹೊಡೆದಾಟ: ಮೂವರು ಸಾವು
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸರ್ಜಾಪುರದಲ್ಲಿ ಬಿಹಾರ ಮೂಲದ ಆರು ಕೂಲಿ ಕಾರ್ಮಿಕರು ಕುಡಿದ ಮತ್ತಿನಲ್ಲಿ ಪರಸ್ಪರ ಹೊಡೆದಾಡಿಕೊಂಡ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಘಟನೆಯ...