ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಫೇಮಸ್ ಆಗಿ ಕನ್ನಡ ಮರೆತು ಬಾಲಿವುಡ್ , ಟಾಲಿವುಡ್ , ಕಾಲಿವುಡ್ ನಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳು , ಆಡ್ ಗಳಲ್ಲಿ ಬ್ಯುಸಿಯಾಗಿದ್ದಾರೆ.. ಎಷ್ಟೇ ಟ್ರೋಲ್ ಆದ್ರೂ ತಲೆ ಕೆಡಿಸಿಕೊಳ್ಳದೇ ಸೋಷಿಯಲ್ ಮೀಡಿಯಾದಲ್ಲಿ ಯಾವಾಗ್ಲೂ ಆಕ್ಟೀವ್ ಆಗಿರುತ್ತಾರೆ.. ಈ ನಡುವೆ ಅವರ ಪುಷ್ಪ ಸಿನಿಮಾ ಕೂಡ ಯಶಸ್ಸು ಕಾಣ್ತಿದೆ..
ಇದೀಗ ತಮಿಳಿನ ಸೂಪರ್ ಸ್ಟಾರ್ ದಳಪತಿ ವಿಜಯ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ ಎನ್ನಲಾಗ್ತಿದೆ.. ಹೌದು ಇನ್ನೂ ಹೆಸರಿಡದ ವಿಜಯ್ ನಟನೆಯ ‘66’ನೇ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗೋದು ಕನ್ ಫರ್ಮ್ ಎನ್ನಲಾಗ್ತಾಯಿದೆ.. ಸದ್ಯ ಇತ್ತೀಚೆಗಷ್ಟೇ ದಳಪತಿ ಅವರ 65 ನೇ ಸಿನಿಮಾ BEAST ಚೀತ್ರೀಕರಣ ಮುಗಿದಿದೆ.. ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ.. ಈ ಸಿನಿಮಾದ ನಂತರ ವಿಜಯ್ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.. ಇದೇ ಸಿನಿಮಾಗೆ ರಶ್ಮಿಕಾ ನಾಯಕಿ ಎನ್ನಲಾಗ್ತಿದೆ..
ಆದ್ರೆ ಅಧಿಕೃತವಾಗಿ ಘೋಷಣೆಯಾಗುವ ವರೆಗೂ ಏನೂ ಹೇಳಲಾಗೋದಿಲ್ಲ.. ಯಾಕಂದ್ರೆ ಈ ಹಿಂದೆ ದಳಪತಿ ವಿಜಯ್ ಅವರ 65 ನೇ ಸಿನಿಮಾದಲ್ಲೇ ರಶ್ಮಿಕಾ ನಾಯಕಿ.. ಅವರೇ ಇನ್ನೇನು ಈ ಸಿನಿಮಾದಲ್ಲಿ ನಾಯಕಿ ಆಗಿ ಘೋಷಣೆ ಮಾಡಿಯೇ ಬಿಟ್ಟರು ಎನ್ನುವ ಹೊತ್ತಿಗೆ ರಶ್ಮಿಕಾ ಬದಲಿಗೆ ತಮ್ಮ ಕನ್ನಡತಿ ಪೂಜಾ ಹೆಗ್ಡೆ ಅವರನ್ನ ನಾಯಕಿಯಾಗಿ ಸಿನಿಮಾತಂಡ ಆಯ್ಕೆ ಮಾಡಿರೋದಾಗಿ ಖಚಿತಪಡಿಸಿತ್ತು..
ಅಂದ್ಹಾಗೆ ಸಿನಿಮಾಗೆ ಇನ್ನೂ ರಶ್ಮಿಕಾ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ ಎನ್ನಲಾಗಿದೆ.. ಅಷ್ಟಕ್ಕೂ ಇನ್ನೂ ರಶ್ಮಿಕಾ ಜೊತೆಗೆ ಮಾತುಕತೆ ಬಾಕಿ ಇದೆ ಎನ್ನಲಾಗ್ತಿದೆ.. ಅಂದ್ಹಾಗೆ ರಶ್ಮಿಕಾಗೆ ಟಾಲಿವುಡ್ ನಲ್ಲಿರುವ ಫೇಮ್ ಸದ್ಯಕ್ಕೆ ಬಾಲಿವುಡ್ ಆಗ್ಲಿ , ಕಾಲಿವುಡ್ ಆಗ್ಲಿ , ಖುದ್ದು ರಶ್ಮಿಕಾರನ್ನ ಬೆಳೆಸಿದ ಸ್ಯಾಂಡಲ್ ವುಡ್ ನಲ್ಲೂ ಇಲ್ಲ.. ಆದ್ರೆ ತಮಿಳಿನ ಸ್ಟಾರ್ ನಟ ವಿಜಯ್ ಜೊತೆಗೆ ನಟನೆಯಿಂದ ಕಾಲಿವುಡ್ ನಲ್ಲಿ ರಶ್ಮಿಕಾ ನಸೀಬ್ ಬದಲಾದ್ರೂ ಆಶ್ಚರ್ಯ ಪಡಬೇಕಾಗಿಲ್ಲ..