ಕುರುಬೂರು ಶಾಂತಕುಮಾರ್ ಅವರಿಗೆ ರೈತರತ್ನ ಬಿರುದು Kurubur Shanthakumar saaksha tv
ಮೈಸೂರಿನ ಕಲಾಮಂದಿರದಲ್ಲಿ ರೈತ ಸಮಾವೇಶ ನಡೆದಿದ್ದು, ರೈತ ಹೋರಾಟದಲ್ಲಿ 40ವರ್ಷ ಪೂರೈಸಿರುವ ಕುರುಬೂರು ಶಾಂತಕುಮಾರ್ ಸನ್ಮಾನ ಮಾಡಲಾಯಿತು.
ಅಲ್ಲದೇ ಕುರುಬೂರು ಶಾಂತಕುಮಾರ್ ಅವರಿಗೆ ರೈತರತ್ನ ಬಿರುದು ನೀಡಿ ಗೌರವಿಸಲಾಯಿತು.
ಈ ಅಭಿನಂದನಾ ಸಮಾರಂಭಕ್ಕೆ ಹೂವಿನ ಗಿಡಕ್ಕೆ ನೀರು ಹಾಕುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು
ಇನ್ನು ಈ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು, ಹಿರಿಯ ಪತ್ರಕರ್ತರಾದ ಹೆಚ್.ಆರ್.ರಂಗನಾಥ್ ಸೇರಿ ಕೃಷಿ ತಜ್ಞರು, ರೈತ ಮುಖಂಡರು ಭಾಗಿಯಾಗಿದ್ದರು.









