ಹಾವಿನೊಂದಿಗೆ ಹಾಡಿನ ಚಿತ್ರಿಕರಣ, ಗಾಯಕಿಯ ಮುಖಕ್ಕೆ ಕಚ್ಚಿದ ಹಾವು….
ಹಾವಿನ ಜೊತೆ ಸರಸ ಹಾಡಬಾರದು…. ಇಂಥಹ ಪ್ರಾಣಿಗಳ ಜೊತೆ ಇರುವಾಗ ಎಷ್ಟು ಎಚ್ಚರಿಕೆಯಿಂದ ಇದ್ರೂ ಸಾಲದು… 21 ವರ್ಷದ ಮೆಟಾ ಎಂಬ ಪಾಪ್ ಗಾಯಕಿ ಹಾವಿನ ಜೊತೆ ವೀಡಿಯೋ ಶೂಟ್ ಮಾಡಿಕೊಳ್ಳುವಾಗ ಮುಖಕ್ಕೆ ಕಚ್ಚಿಸಿಕೊಂಡಿದ್ದಾರೆ.. ಸದ್ಯ ಹಾವು ವಿಷಕಾರಿಯಲ್ಲದೇ ಇರುವುದರಿಂದ ಗಾಯಕಿ ಯಾವುದೇ ಪ್ರಾನಾಪಾಯವಿಲ್ಲದೇ ಪಾರಾಗಿದ್ದಾಳೆ…. ಗಾಯಕಿ ಮೆಟಾ ಈ ವೀಡಿಯೋವನ್ನ ಇನ್ಸಟಾ ಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ..
https://www.instagram.com/p/CXrFm1dJ7FU/?utm_source=ig_embed&utm_campaign=embed_video_watch_again
ವೀಡಿಯೋದಲ್ಲಿ ಗಾಯಕಿ ನೆಲದ ಮೇಲೆ ಮಲಗಿರುತ್ತಾಳೆ ಬ್ಲಾಕ್ ಅಂಡ್ ವೈಟ್ ಮೋಡ್ ಅಲ್ಲಿ ವೀಡಿಯೋ ರೆಕಾರ್ಟ್ ಆಗುತಿರುತ್ತದೆ..ಕಪ್ಪು ಬಣ್ಣದ ಹಾವು ಮೈಮೇಲಿರುತ್ತದೆ ಅದನ್ನ ಸರಿಸಿ ಬಿಳಿ ಬಣ್ಣದ ಹಾವನ್ನ ಇರಿಸುವಾಗ ಹಾವು ಗಾಯಕಿಯ ಮುಖಕ್ಕೆ ಕಚ್ಚಿದೆ. ತಕ್ಷಣ ಹಾವನ್ನ ಕೊಡವಿ ಗಾಯಕಿ ಮೇಲೇಳುತ್ತಾಳೆ.. ಇನ್ಸ್ಟಾಗ್ರಾಂ ನಲ್ಲಿ ವೈರಲ್ ಆಗಿರುವ ಈ ವೀಡಿಯೋ 4 ಮಿಲಿಯನ್ ಗೂ ಅಧಿಕ ವಿಕ್ಷಣೆ ಪಡೆದಿದೆ…








